ಟೋಫಲ್ ತಯಾರಿ ವಿದೇಶದಲ್ಲಿ ಕಲಿಯುವ ಆಲೋಚನೆ ನಿಮ್ಮದೇ? ಹಾಗಿದ್ದರೆ ನೀವು ಟೋಫಲ್ ( ) ತೇರ್ಗಡೆಯಾಗಬೇಕು. ಅದು ಇಂಗ್ಲಿಷ್ ಭಾಷೆಯಲ್ಲಿ ನಿಮಗಿರುವ ಜ್ಞಾನವನ್ನು ಗುರುತಿಸುವ ಪರೀಕ್ಷೆ ಮತ್ತು ಮಾನದಂಡ. ಎಡುಕೇಷನಲ್ ಟೆಸ್ಟಿಂಗ್ ಸರ್ವೀಸಸ್ ಅಥವಾ ಇಟಿಎಸ್ ಎಂಬ ಜಾಗತಿಕ ಸಂಸ್ಥೆ ಈ ಪರೀಕ್ಷೆ ನಡೆಸುತ್ತದೆ. ಇದಕ್ಕೆ 130 ದೇಶಗಳ 8500ಕ್ಕೂ ಹೆಚ್ಚು ಸಂಸ್ಥೆಗಳ ಮಾನ್ಯತೆಯಿದೆ. ಅಮೆರಿಕ, ಆಸ್ಟ್ರೇಲಿಯ, ಕೆನಡಾ, ಇಂಗ್ಲೆಂಡ್ ಮುಂತಾದ ದೇಶಗಳ ಅನೇಕ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ವಿದೇಶಿಯರು ಪ್ರವೇಶ ಪಡೆಯಲು ಟೋಫಲ್ ಪಾಸಾಗುವುದು ಅನಿವಾರ್ಯ. ಈ ಪರೀಕ್ಷೆಗೆ ನೀವು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಪ್ರವೇಶ ಅರ್ಜಿಗಳನ್ನು ಭರ್ತಿ ಮಾಡುವುದು ಸಾಕಷ್ಟು ಶ್ರಮದ ಕೆಲಸ ಎಂದು ನಿಮಗೆ ಅನಿಸಲೂ ಬಹುದು. ಆದರೆ ಇಂಗ್ಲಿಷ್ ಭಾಷೆಯಲ್ಲಿ ನಿಮಗಿರುವ ಪ್ರೌಢಿಮೆಯನ್ನು ಇದೊಂದೇ ಪರೀಕ್ಷೆ ಮೂಲಕ ನೀವು ಸಾಬೀತು ಮಾಡಬಹುದು. ಇದು ಒಂದೇ ದಿನದ ಪರೀಕ್ಷೆ ಎನ್ನುತ್ತಾರೆ ಇಟಿಎಸ್‌ನಲ್ಲಿ ಟೋಫಲ್ ಕಾರ್ಯಕ್ರಮದ ಕಾರ್ಯಕಾರಿ ನಿರ್ದೇಶಕರಾದ ತೆರೇಸಾ ಲೇಝರ್. ಇದರಲ್ಲಿ ಓದುವಿಕೆ, ಬರವಣಿಗೆ, ಆಲಿಸುವುದು ಹಾಗೂ ಮಾತನಾಡುವುದು ಎಂದು ನಾಲ್ಕು ವಿಭಾಗಗಳಿವೆ. ಅದನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಅವರು ನೀಡಿದ ಕೆಲವೊಂದು ಉಪಯುಕ್ತ ಸಲಹೆಗಳು ಇಲ್ಲಿವೆ. ನಿಮ್ಮ ಆಸಕ್ತಿಯ ವಿಷಯವೊಂದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಹಾಗೂ ನೀವು ಕಲಿತದ್ದನ್ನು ನಿಮ್ಮ ಗೆಳೆಯರೊಂದಿಗೆ ವಿನಿಮಯ ಮಾಡಿಕೊಳ್ಳಿ. ಪಾಡ್‌ಕಾಸ್ಟ್‌ಗಳನ್ನು, ಮುದ್ರಿತ ಉಪನ್ಯಾಸಗಳನ್ನು ಆಲಿಸಿ. ನಿಮ್ಮ ನೆಚ್ಚಿನ ಪ್ರವಾಸಿ ಸ್ಥಳ ಕುರಿತ ಲೇಖನಗಳನ್ನು ಓದಿರಿ. ಅದರಲ್ಲಿನ ವಿವಿಧ ಅಂಶಗಳನ್ನು ಮನನ ಮಾಡಿಕೊಳ್ಳಿ. ನೀವು ಓದಿ ಕಲಿತದ್ದನ್ನು ನಿಮ್ಮ ಗೆಳೆಯ ಅಥವಾ ಕುಟುಂಬದ ಸದಸ್ಯರ ಜತೆ ಹಂಚಿಕೊಳ್ಳಿ. ನಿಮ್ಮಂದಿಗೆ ಮಾತನಾಡಬಲ್ಲ ಸಹವರ್ತಿಯನ್ನು ಹುಡುಕಿ. ಅದರಲ್ಲೂ ಇಂಗ್ಲಿಷ್ ಮಾತೃಭಾಷೆಯಾಗಿರುವ ವ್ಯಕ್ತಿ ಹೆಚ್ಚು ಸೂಕ್ತ. ಈಗ ಇಂಟರ್‌ನೆಟ್, ಸೋಷಿಯಲ್ ಮೀಡಿಯಾ ಸೌಲಭ್ಯ ಇರುವುದರಿಂದ ಇಂಥವರನ್ನು ಹುಡುಕುವುದು ಸುಲಭ. ಅವರೊಂದಿಗೆ ಆನ್‌ಲೈನ್ ವಿಡಿಯೊದಲ್ಲಿ ಸಂಭಾಷಣೆ ಮಾಡಿ. ಇಂಗ್ಲಿಷ್‌ನಲ್ಲಿ ವ್ಯವಹರಿಸುವ ಸಂದರ್ಭಗಳು ಹೆಚ್ಚಾದಷ್ಟೂ ನಿಮಗೆ ಆ ಭಾಷೆ ಹೆಚ್ಚು ಪರಿಚಿತವಾಗುತ್ತದೆ, ನಿಮಗೂ ಮಾತನಾಡಲು ಸುಲಭವಾಗುತ್ತದೆ. ಸಾಂಕೇತಿಕ ಚಿತ್ರ ಪತ್ರಗಳ (ಫ್ಲ್ಯಾಷ್ ಕಾರ್ಡ್ಸ್) ಮೂಲಕ ಸಂಭಾಷಣೆಯನ್ನು ಪ್ರತಿನಿಧಿಸುವ ನಿಮ್ಮದೇ ಆದ ಚಿತ್ರ ಪತ್ರಗಳನ್ನು ರಚಿಸಿಕೊಳ್ಳಿ ಹಾಗೂ ನಿಮ್ಮ ಜೊತೆಯಲ್ಲೆೀ ಅದನ್ನು ಒಯ್ಯಿರಿ. ಕಲಿಯಲು ಇದೊಂದು ಅಮೋಘ ಮಾರ್ಗವಷ್ಟೇ ಅಲ್ಲದೆ ಸಮಯ ಕಳೆಯುವ ಸಾಧನವೂ ಹೌದು! ಪಯಣಿಸುವಾಗ ಅದನ್ನು ತೆಗೆದು ನೋಡಿ. ಓದಲು ಸಲಹೆಗಳು ನೀವು ಓದುವ ಅಂಕಣಗಳ ಸಾರಾಂಶವನ್ನು ಶೀರ್ಷಿಕೆ ರೂಪದಲ್ಲಿ ಸಂಗ್ರಹಿಸಿ. ನಿಮ್ಮ ಕಲ್ಪನೆಗೆ ನೆರವಾಗುವಂತೆ ಚಿತ್ರಿಸಿಕೊಳ್ಳಿ. ಅರ್ಥ ಮಾಡಿಕೊಳ್ಳಲು, ಸಾಮರ್ಥ್ಯ ಸುಧಾರಿಸಿಕೊಳ್ಳಲು ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಟೋಫಲ್ ಐಬಿಟಿ ಪರೀಕ್ಷೆಯನ್ನು ಕಂಪ್ಯೂಟರ್ ಮೂಲಕ ನಡೆಸುವುದರಿಂದ ಕಂಪ್ಯೂಟರ್ ಪರದೆಯ ಮೇಲೆ ಓದುವುದನ್ನು ಹಾಗೂ ಪ್ರಶ್ನೆಗಳಿಗೆ ಉತ್ತರಿಸುವುದನ್ನು ರೂಢಿ ಮಾಡಿಕೊಳ್ಳಿ. ಮಾತನಾಡಲು ಸಲಹೆಗಳು ದಿನಪತ್ರಿಕೆ ಅಥವಾ ನಿಯತಕಾಲಿಕೆಯ ಯಾವುದಾದರೂ ಸಣ್ಣ ಲೇಖನವನ್ನು ಉಚ್ಚರಿಸುತ್ತ ಓದಿ. ಲೇಖನದ ಒಂದು ನಿಮಿಷದ ಮೌಖಿಕ ಸಾರಾಂಶವನ್ನು ನೀಡಿ. ಲೇಖನ ಕುರಿತ ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ. ಪ್ರತಿಯೊಂದು ಅಕ್ಷರದ ಸ್ವರವೂ ಕೇಳುವಂತೆ ನಿಧಾನವಾಗಿ ಮಾತನಾಡಿ. ಬರವಣಿಗೆಗೆ ಸಲಹೆಗಳು ನಿಮ್ಮ ಮೆಚ್ಚಿನ ಟೆಲಿವಿಷನ್ ಕಾರ್ಯಕ್ರಮ ವೀಕ್ಷಿಸಿ. ಆ ಕಾರ್ಯಕ್ರಮದ ಸಾರಾಂಶವನ್ನು ಬರೆಯಿರಿ. ಆ ಕಾರ್ಯಕ್ರಮವನ್ನು ವಿವರಿಸುತ್ತ `ನಿಮಗೆ ಹೇಗೆ ಅನಿಸಿತು? ಹಿಂದಿನ ಕಾರ್ಯಕ್ರಮಕ್ಕಿಂತ ಭಿನ್ನವಾಗಿತ್ತೇ ಅಥವಾ ಅದೇ ರೀತಿ ಇತ್ತೇ?~ ಎಂಬುದಾಗಿ ತಿಳಿಸಿ. ನೀವು ಬರೆದ ಪ್ರಬಂಧವನ್ನು ನಿಮ್ಮ ಕುಟುಂಬದ ಸದಸ್ಯರೊಬ್ಬರಿಂದ ಓದಿಸಿ. ಉಚಿತವಾಗಿ ದೊರೆಯುವ ಮಾಹಿತಿ ಮೂಲಗಳನ್ನು ಬಳಸಿ. ಕೆಳಕಂಡ ಮಾಹಿತಿಗಳೂ ಒಳಗೊಂಡು ಹಲವಾರು ಉಚಿತ ಮೂಲಗಳನ್ನು ಇಟಿಎಸ್ ಒದಗಿಸುತ್ತದೆ. ಟೋಫಲ್ ತಯಾರಿ ಈ ತ್ರಿವಳಿ ಮತ್ತು ಅದರ ಗುಣಲಬ್ದಗಳ ಸಹಾಯದಿಂದ ಅತ್ಯಂತ ವೇಗವಾಗಿ, ಯಾವುದೇ ಗಣಿತ ಕ್ರಿಯೆಯ ಬಳಕೆ ಮಾಡದೇ ಉತ್ತರಗಳನ್ನು ಪಡೆಯಬಹುದಾಗಿದೆ. 8 ದಿಕ್ಕುಗಳನ್ನು ಗುರುತಿಸಲು ಕನ್ನಡದಲ್ಲಿನ ಪ್ರಶ್ನೆಗಳಿಗಿಂತ ಆಂಗ್ಲ ಮಾಧ್ಯಮದಲ್ಲಿನ ಪ್ರಶ್ನೆಗಳು ಸುಲಭವಾಗಿರುತ್ತವೆ. ಅಶಾಬ್ದಿಕ ಬುದ್ಧಿಮತ್ತೆ ಪರೀಕ್ಷೆಗಳಲ್ಲಿ ಶಬ್ದಗಳು, ಅಕ್ಷರಗಳು, ಅಂಕಿ-ಸಂಖ್ಯೆಗಳನ್ನು ಬಳಸಲಾಗುವುದಿಲ್ಲ. ಟೋಫಲ್‌ನ ಗೋ ಎನಿವೇರ್ (..) ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಲೆಂದೇ ಇರುವ ಅಂತರ್ಜಾಲ ತಾಣವಾಗಿದೆ.ಮಾದರಿ ಪ್ರಶ್ನೆಗಳ ಉಚಿತ ಪರೀಕ್ಷೆಗೆ ..////sample_questions ತಾಣಕ್ಕೆ ಹೋಗಬಹುದು. ನಿಮ್ಮ ಸಮೀಪದ ಟೋಫೆಲ್ ಪರೀಕ್ಷಾ ಕೇಂದ್ರ ಮತ್ತು ಟೋಫೆಲ್ ಪ್ರವೇಶದ ಬಗ್ಗೆ ಕೂಡ ಅಂತರ್ಜಾಲದಲ್ಲಿ ಮಾಹಿತಿ ಲಭ್ಯ. ಇದು ವಿದೇಶದಲ್ಲಿ ಕಲಿಯುವ ಉದ್ದೇಶದ ವಿದ್ಯಾರ್ಥಿಗಳಿಗೆ ಪರಸ್ಪರ ಸಂವಾದದ ಮೂಲಕ ನೆರವಾಗುವುದು. ಫೇಸ್‌ಬುಕ್ ://../ ವೆಬ್‌ಸೈಟ್‌ನಲ್ಲಿ 1.30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಅವರೊಂದಿಗೆ ಟೋಫಲ್ ವಿದ್ಯಮಾನ, ಸಿದ್ಧತೆಯ ಮಾಹಿತಿ ಪಡೆಯಬಹುದು. ಇಂಗ್ಲಿಷ್ ಭಾಷಾ ಅಭ್ಯಾಸ ಕ್ರಮಗಳ ದೃಶ್ಯಾವಳಿ ವೀಕ್ಷಿಸಬಹುದು, ಇಂಗ್ಲೀಷ್ ಶಿಕ್ಷಕರಿಂದ ಹಾಗೂ ಈ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಂದ ಸಲಹೆ ಪಡೆಯಬಹುದು. ಸೇವಾ ಕೇಂದ್ರ: ಟೋಫಲ್ ಪರೀಕ್ಷೆ ಕುರಿತಂತೆ ಸೂಕ್ತ ಮಾರ್ಗದರ್ಶನ ಹಾಗೂ ಅವಶ್ಯ ಮಾಹಿತಿಗಳನ್ನು ನೀಡಲು ಟೋಫಲ್ ಗ್ರಾಹಕ ಸೇವಾ ಕೇಂದ್ರ ಸೋಮವಾರದಿಂದ ಶುಕ್ರವಾರದ ವರೆಗೆ (ಭಾರತೀಯ ಕಾಲಮಾನ ಬೆಳಿಗ್ಗೆ 9ರಿಂದ ಸಂಜೆ 5) ತೆರೆದಿರುತ್ತದೆ. ಅದಕ್ಕಾಗಿ 000-800-100- 3780 ಸಂಖ್ಯೆಗೆ ಕರೆ ಮಾಡಬಹುದು. ಪರೀಕ್ಷಾ ದಿನದ ಸಿದ್ಧತೆ: ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಗುರುತಿನ ಚೀಟಿ, ನೀರು ಹಾಗೂ ತಿನಿಸುಗಳನ್ನು ಮರೆಯದೇ ಒಯ್ಯಿರಿ. ಹಿಂದಿನ ರಾತ್ರಿಯೇ ನಿಮ್ಮ ಬ್ಯಾಗ್ ಸಿದ್ಧಪಡಿಸಿಕೊಂಡು ಬೇಗನೆ ಏಳಲು ಗಡಿಯಾರದ ಅಲಾರಂ ಚಾಲೂಗೊಳಿಸಿ. ಪರೀಕ್ಷಾ ದಿನದಂದು ಬೆಳಗಿನ ಉಪಾಹಾರ ಮರೆಯದೇ ಸೇವಿಸಿ. ಆರಾಮವಾದ ಉಡುಪುಗಳನ್ನು ಧರಿಸಿ. ಶೀತ ವಾತಾವರಣವಿದ್ದಲ್ಲಿ ಹೆಚ್ಚಿನ ಮೇಲುಡುಪು ಸೂಕ್ತ. ಪರೀಕ್ಷೆ ದಿನದ ಸಿದ್ಧತೆಗಳ ಬಗ್ಗೆ ..//--- ಅಂತರ್ಜಾಲ ತಾಣದಲ್ಲಿ ಇಟಿಎಸ್ ನೀಡಿದ ವಿಶೇಷ ಸಲಹೆಗಳನ್ನು ಗಮನಿಸಿ. ಮಾನಸಿಕ ಸಾಮರ್ಥ್ಯಕ್ಕೂ ಇದೆ ಅಂಕ ಇವುಗಳು ವ್ಯಕ್ತಿಯ ತಾರ್ಕಿಕತೆ, ವೇಗವಾಗಿ ಆಲೋಚಿಸುವ ಶಕ್ತಿ, ವ್ಯತ್ಯಾಸ ಗುರುತಿಸುವ ಹಾಗೂ ಹೋಲಿಕೆ ಮಾಡುವ ಸಾಮರ್ಥ್ಯ ಅಳೆಯಲು ರೂಪಿತವಾಗಿರುತ್ತವೆ. ಈ ಪರೀಕ್ಷೆಗಳಲ್ಲಿ ಚಿತ್ರಗಳು, ರೇಖಾ ಚಿತ್ರಗಳು ಮತ್ತು ವಿನ್ಯಾಸಗಳನ್ನು ನೀಡಲಾಗಿರುತ್ತದೆ. ಇವುಗಳಲ್ಲಿ ಸರಣಿ ಪೂರ್ತಿಗೊಳಿಸುವುದು, ಸಾಮ್ಯತೆ ಗುರುತಿಸುವುದು, ಗುಂಪಿಗೆ ಸೇರದ್ದನ್ನು ಬೇರ್ಪಡಿಸುವುದು ಇತ್ಯಾದಿ ವಿಧಗಳ ಪ್ರಶ್ನೆಗಳಿರುತ್ತವೆ. ಅಶಾಬ್ದಿಕ ಬುದ್ಧಿಮತ್ತೆ ಪರೀಕ್ಷೆಗಳು ಸಾಮಾನ್ಯ ಜ್ಞಾನವುಳ್ಳ ಅನಕ್ಷರಸ್ಥರೂ ಪ್ರಶ್ನೆಗಳನ್ನು ಉತ್ತರಿಸಲು ಅನುವಾಗುವಂತಿರುತ್ತವೆ. ಸಾಮಾನ್ಯವಾಗಿ ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳು ಕಠಿಣವೆಂಬ ತಪ್ಪು ಗ್ರಹಿಕೆ ಕಲಾ ವಿಷಯದ ಅಭ್ಯರ್ಥಿಗಳದು. ಆದರೆ ಇವುಗಳನ್ನು ದೈನಂದಿನ ಗಣಿತದ ಜ್ಞಾನವಿರುವ ಅಭ್ಯರ್ಥಿಗಳೂ ಸುಲಭವಾಗಿ ಬಿಡಿಸಬಹುದು. ಸತತ ಪರಿಶ್ರಮ ಮತ್ತು ಸಮಯದ ಸದ್ವಿನಿಯೋಗದಿಂದ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಿದೆ. ಹಾಗೆಯೇ ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳು ವಿವಿಧ ಉದ್ಯೋಗಗಳ ಅರ್ಹತಾ ಪರೀಕ್ಷೆಗಳಲ್ಲಿ ಅವಶ್ಯಕವಾಗಿ ಕೇಳಲ್ಪಡುವುದರಿಂದ ಇದರ ಅಧ್ಯಯನ ಅನಿವಾರ್ಯವಾಗಿದೆ. ತೀವ್ರವಾದ ಸ್ಪರ್ಧೆ ಏರ್ಪಟ್ಟಿರುವಾಗ ಕಠಿಣ ವಿಷಯಗಳಲ್ಲಿ ಪಡೆವ ಅಂಕಗಳೇ ನಮ್ಮ ಕೈ ಹಿಡಿದು ಸಹಾಯಕ್ಕೆ ಬರುತ್ತವೆ. ಶಿಕ್ಷಕರಾಗಲು ಮಾನಸಿಕ ಸಾಮರ್ಥ್ಯದಲ್ಲಿ ಹೆಚ್ಚಿನ ಅಂಕ ಗಳಿಸುವುದು ಅಗತ್ಯ. (ಲೇಖಕರು ಭೌತಶಾಸ್ತ್ರ ಉಪನ್ಯಾಸಕರು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.