ಉದ್ಯೋಗಾವಕಾಶ ಅಲ್ಲಲ್ಲಿ ಸ್ಟಾಫ್ ಸೆಲೆಕ್ಷನ್ ಕಮಿಷನ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ದೆಹಲಿ ಪೊಲೀಸ್‌ನಲ್ಲಿ 335 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6-7-2012. ಲಿಖಿತ ಪರೀಕ್ಷೆ: 19-8-2012. ಹುದ್ದೆ ಹೆಸರು: ಸಬ್ ಇನ್‌ಸ್ಪೆಕ್ಟರ್ (ಎಕ್ಸಿಕ್ಯೂಟಿವ್) ಒಟ್ಟು ಹುದ್ದೆ: 335 (ಪುರುಷರು-324, ಮಹಿಳೆಯರು-11) ವೇತನ ಶ್ರೇಣಿ: ರೂ. 9300-34800 ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ. ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.100 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ/ ಸಂದರ್ಶನ ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿಳಾಸ: ಪ್ರಾದೇಶಿಕ ನಿರ್ದೇಶಕರು (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲನೇ ಮಹಡಿ, `ಇ~ ವಿಂಗ್, ಕೇಂದ್ರಿಯ ಸದನ, ಕೋರಮಂಗಲ, ಬೆಂಗಳೂರು- 560034 ಮಾಹಿತಿಗೆ ://.. ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್ ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್‌ನಲ್ಲಿ (ಡಿಎಂಆರ್‌ಸಿ) 50 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-6-2012. ಹುದ್ದೆ ಹೆಸರು: 1) ಎಕ್ಸಿಕ್ಯೂಟಿವ್ ಎಂಜಿನಿಯರ್ (ಸಿವಿಲ್-ಆನ್ ಡೆಪ್ಯೂಟೇಷನ್): ಹುದ್ದೆ- 25 2) ಎಕ್ಸಿಕ್ಯೂಟಿವ್ ಎಂಜಿನಿಯರ್ (ಸಿವಿಲ್-ಒಪ್ಪಂದ ಮೇರೆಗೆ): ಹುದ್ದೆ-25 ವಿಳಾಸ: ಎಕ್ಸಿಕ್ಯೂಟಿವ್ ಡೈರೆಕ್ಟರ್ (ಎಚ್‌ಆರ್), ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್, ಫೈರ್ ಬ್ರಿಗೇಡ್ ಲೇನ್, ಬಾರಾಕಂಬಾ ರಸ್ತೆ, ನವದೆಹಲಿ- 110001 ಮಾಹಿತಿಗೆ ://. ಕೋಸ್ಟ್‌ಗಾರ್ಡ್ ಭಾರತೀಯ ಕರಾವಳಿ ಕಾವಲು ಪಡೆಯಲ್ಲಿ (ಕೋಸ್ಟ್‌ಗಾರ್ಡ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-6-2012. ಹುದ್ದೆ ಹೆಸರು: ಅಸಿಸ್ಟೆಂಟ್ ಕಮಾಂಡೆಂಟ್ಸ್ ವೇತನ ಶ್ರೇಣಿ: ರೂ.15600-39100. ಮಾಹಿತಿಗೆ ://../ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್‌ಪಿಎಫ್) 866 ಹುದ್ದೆಗಳನ್ನು (ಕ್ರೀಡಾ ಮೀಸಲಾತಿ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-7-2012. ಹುದ್ದೆ ಹೆಸರು: 1) ಹೆಡ್ ಕಾನ್‌ಸ್ಟೆಬಲ್/ಜಿಡಿ ಒಟ್ಟು ಹುದ್ದೆ: 191 ವೇತನ ಶ್ರೇಣಿ: ರೂ. 5200-20200. ವಿದ್ಯಾರ್ಹತೆ: 10+2 ಅಥವಾ ತತ್ಸಮಾನ. ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ. ಹುದ್ದೆ ಹೆಸರು: 2) ಕಾನ್‌ಸ್ಟೆಬಲ್/ಜಿಡಿ ಒಟ್ಟು ಹುದ್ದೆ: 675 ವೇತನ ಶ್ರೇಣಿ: ರೂ. 5200-20200. ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ 10ನೇ ತರಗತಿ ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.100 ವಿಳಾಸ: ಡಿಐಜಿ (ಸ್ಪೋರ್ಟ್ಸ್), ಡೈರೆಕ್ಟೊರೇಟ್ ಜನರಲ್ (ಟ್ರೈನಿಂಗ್ ಬ್ರಾಂಚ್), ಸಿಆರ್‌ಪಿಎಫ್, ಈಸ್ಟ್ ಬ್ಲಾಕ್-10, ಲೆವೆಲ್-7, ಆರ್.ಕೆ.ಪುರಂ, ನವದೆಹಲಿ-110066 ಮಾಹಿತಿಗೆ ://../ ದಕ್ಷಿಣ ಮಧ್ಯ ರೈಲ್ವೆ ದಕ್ಷಿಣ ಮಧ್ಯ ರೈಲ್ವೆಯಲ್ಲಿ 95 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9-7-2012. ಈ ಹುದ್ದೆಗಳು ದೈಹಿಕ ಅಸಮರ್ಥರಿಗೆ ಮೀಸಲು. ವೇತನ ಶ್ರೇಣಿ: ರೂ.5200-20200. ಕೆಲ ಹುದ್ದೆಗಳಿಗೆ ರೂ. 9300-34800. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ವಿಳಾಸ: ಸೀನಿಯರ್ ಪರ್ಸೊನೆಲ್ ಆಫೀಸರ್ (ರೂಲ್ಸ್), ರೈಲ್ವೆ ನಿಲಯಂ, ನಾಲ್ಕನೇ ಮಹಡಿ, ದಕ್ಷಿಣ ಮಧ್ಯ ರೈಲ್ವೆ, ಸಿಕಂದರಾಬಾದ್-500071 ಹೆಚ್ಚಿನ ಮಾಹಿತಿಗೆ ://.... ಮಧ್ಯ ರೈಲ್ವೆ ಮಧ್ಯ ರೈಲ್ವೆಯಲ್ಲಿ 134 ಹುದ್ದೆಗಳನ್ನು (ಅಂಗವಿಕಲರು) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9-7-2012. ವೇತನ ಶ್ರೇಣಿ: ರೂ.5200-20200. ಕೆಲ ಹುದ್ದೆಗಳಿಗೆ ರೂ. 9300-34800. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ವಿಳಾಸ: ದಿ ಡೆಪ್ಯುಟಿ ಪರ್ಸೊನೆಲ್ ಆಫೀಸರ್ (ಮುಖ್ಯಕಚೇರಿ), ಜನರಲ್ ಮ್ಯಾನೇಜರ್ ಆಫೀಸ್, ಮೊದಲ ಮಹಡಿ, ಮಧ್ಯ ರೈಲ್ವೆ, ಸಿಎಸ್‌ಟಿ ಮುಂಬೈ-400001 ಹೆಚ್ಚಿನ ಮಾಹಿತಿಗೆ ://.. ಫ್ರಾಂಕ್‌ಫಿನ್ ಪ್ರವೇಶಾತಿ ವಿಮಾನಯಾನ ಮತ್ತು ಮನೋರಂಜನಾ ಕೈಗಾರಿಗಾ ಕ್ಷೇತ್ರದ ತರಬೇತಿ ಕೇಂದ್ರಗಳ ಜಾಲ `ಫ್ರಾಂಕ್‌ಫಿನ್ ಇನ್‌ಸ್ಟಿಟ್ಯೂಟ್ ಆಫ್ ಏರ್‌ಹೊಸೆ ್ಟಸ್ ಟ್ರೈನಿಂಗ್~ ಪ್ರಸಕ್ತ ಸಾಲಿನ ಶೈಕ್ಷಣಿಕ ಪ್ರವೇಶಾತಿ ಪ್ರಾರಂಭಿಸಿದೆ. ಇಲ್ಲಿ ವಿಮಾನಯಾನ ಡಿಪ್ಲೊಮಾ, ಅತಿಥ್ಯ ಹಾಗೂ ಪ್ರವಾಸ ನಿರ್ವಹಣೆ (ಎಫ್‌ಡಿಎಎಚ್‌ಟಿಎಂ), ಆತಿಥ್ಯೋದ್ಯಮದಲ್ಲಿ ಡಿಪ್ಲೊಮಾ, ಟ್ರಾವೆಲ್ ಮತ್ತು ಗ್ರಾಹಕ ಸೇವೆ (ಎಫ್‌ಡಿಎಚ್‌ಟಿಪಿಎಸ್), ವಿಮಾನಯಾನ ಮತ್ತು ಪ್ರವಾಸೋದ್ಯಮ ಸೇವೆಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ (ಎಫ್‌ಪಿಜಿಡಿಎ ಎಚ್‌ಎಸ್), ಏರ್‌ಪೋರ್ಟ್ ಗ್ರೌಂಡ್ ಸರ್ವೀಸಸ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ (ಎಫ್‌ಪಿಜಿಡಿಎಜಿಎಸ್) ಕಲಿಕಾ ಸೌಲಭ್ಯವಿದೆ. ಶಿಕ್ಷಣದ ಕಾಲಾವಧಿ ಕನಿಷ್ಠ 12 ತಿಂಗಳು. ಅಭ್ಯರ್ಥಿಗಳು ದ್ವಿತೀಯ ಪಿಯು ಅಥವಾ 12ನೇ ತರಗತಿ ತೇರ್ಗಡೆಯಾಗಿರಬೇಕು. ವಯೋಮಿತಿ 17 ರಿಂದ 24 ವರ್ಷ. ವೈಯಕ್ತಿಕ ಸಂದರ್ಶನ ಆಧಾರದಲ್ಲಿ ಆಯ್ಕೆ ನಡೆಯಲಿದೆ. ಮಾಹಿತಿಗೆ: .. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.