ಉದ್ಯೋಗಾವಕಾಶ ಅಲ್ಲಲ್ಲಿ... ಸಶಸ್ತ್ರ ಸೀಮಾ ಬಲ ಸಶಸ್ತ್ರ ಸೀಮಾ ಬಲದಲ್ಲಿ (ಎಸ್‌ಎಸ್‌ಬಿ) 326 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-7-2012. ಹುದ್ದೆ ಹೆಸರು: 1) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಟೆಲಿಕಾಮ್) ಒಟ್ಟು ಹುದ್ದೆ: 76 ವೇತನ ಶ್ರೇಣಿ: ರೂ. 5200-20200 ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ. ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ. ಹುದ್ದೆ ಹೆಸರು: 2) ಹೆಡ್ ಕಾನ್‌ಸ್ಟೆಬಲ್ (ಟೆಲಿಕಾಮ್) ಒಟ್ಟು ಹುದ್ದೆ: 250 ವೇತನ ಶ್ರೇಣಿ: ರೂ. 5200-20200 ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ. ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 23 ವರ್ಷ. ಅರ್ಜಿ ಶುಲ್ಕ: ರೂ.50 ವಿಳಾಸ: ಇನ್‌ಸ್ಪೆಕ್ಟರ್ ಜನರಲ್, ಸಶಸ್ತ್ರ ಸೀಮಾ ಬಲ, ಫ್ರಾಂಟಿಯರ್ ಮುಖ್ಯ ಕಚೇರಿ, ರಾಣಿಖೇತ್, ಸೇವಾ ಭವನ (ಗಾಣಿಯಾದಿಯೋಲಿ), ಸರ್ದಾರ್ ಬಜಾರ್ ಪೋಸ್ಟ್, ಅಲ್ಮೋರಾ ಜಿಲ್ಲೆ. ಉತ್ತರಾಖಂಡ. ಮಾಹಿತಿಗೆ ://... ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ (ಬಿಇಎಲ್) 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಇ-ಮೇಲ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-6-2012. ಹುದ್ದೆ ಹೆಸರು: ಎಲೆಕ್ಟ್ರಾನಿಕ್ಸ್ ಅಂಡ್ ಮೆಕಾನಿಕಲ್ ಎಂಜಿನಿಯರ್ಸ್ ಒಟ್ಟು ಹುದ್ದೆ: 12 ವೇತನ ಶ್ರೇಣಿ: ರೂ. 16400-40500 ವಯೋಮಿತಿ: 25 ವರ್ಷ ದಾಟಿರಬಾರದು. ಇ-ಮೇಲ್: @.. ಮಾಹಿತಿಗೆ ://.-.. ರೈಲ್ವೆ ನೇಮಕಾತಿ ಮಂಡಳಿ ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) 12042 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-7-2012. ಪರೀಕ್ಷೆ ದಿನಾಂಕ: 16-12-2012 ಹುದ್ದೆ ಹೆಸರು: ಟೆಕ್ನಿಷಿಯನ್ ಗ್ರೇಡ್ 11/ಗ್ರೇಡ್ 111 ಒಟ್ಟು ಹುದ್ದೆ: 12042 ವೇತನ ಶ್ರೇಣಿ: ರೂ. 5200-20200. ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ಟೆಕ್ನಿಷಿಯನ್ ಗ್ರೇಡ್ 11: ರೂ.60. ಟೆಕ್ನಿಷಿಯನ್ ಗ್ರೇಡ್ 111: ರೂ.40. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ವಿಳಾಸ: ದಿ ಮೆಂಬರ್ ಸೆಕ್ರೇಟರಿ, ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್, 18, ಮಿಲ್ಲರ್ಸ್‌ ರಸ್ತೆ, ಬೆಂಗಳೂರು-560046 ಮಾಹಿತಿಗೆ ://.../ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್‌ನಲ್ಲಿ (ಇಐಎಲ್) 25 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6-7-2012. ಹುದ್ದೆ ಹೆಸರು: 1) ಟ್ರೈನಿ ಡ್ರಾಫ್ಟ್ಸ್‌ಮನ್: 15 ಹುದ್ದೆ, 2) ಟ್ರೈನಿ ಸೂಪರ್‌ವೈಸರ್ (ಕನ್‌ಸ್ಟ್ರಕ್ಷನ್): 6 ಹುದ್ದೆ, 3) ಟ್ರೈನಿ ಸೂಪರ್‌ವೈಸರ್ (ಫಾರ್ ಕನ್‌ಸ್ಟ್ರಕ್ಷನ್-ಸೇಫ್ಟಿ): 4 ಹುದ್ದೆ, ವೇತನ ಶ್ರೇಣಿ: ಸ್ಟೈಪೆಂಡ್: ಮೊದಲ ವರ್ಷ ರೂ. 7500. ಎರಡನೇ ವರ್ಷ: ರೂ.11000. ಬಳಿಕ ರೂ. 11900-32000. ವಿದ್ಯಾರ್ಹತೆ: ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ. ವಯೋಮಿತಿ: 25 ವರ್ಷ ದಾಟಿರಬಾರದು. ಆಯ್ಕೆ ವಿಧಾನ: ಕೌಶಲ ಪರೀಕ್ಷೆ ಹಾಗೂ ಸಂದರ್ಶನ. ಮಾಹಿತಿಗೆ ://.../ ಸೀಮಾ ಬಲ ಸಶಸ್ತ್ರ ಸೀಮಾ ಬಲದಲ್ಲಿ (ಎಸ್‌ಎಸ್‌ಬಿ) 824 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1-8-2012. ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಡ್ರೈವರ್) ಒಟ್ಟು ಹುದ್ದೆ: 824 ವೇತನ ಶ್ರೇಣಿ: ರೂ. 5200-20200 ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ. ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 28 ವರ್ಷ. ಅರ್ಜಿ ಶುಲ್ಕ: ರೂ.50 ವಿಳಾಸ: ಇನ್‌ಸ್ಪೆಕ್ಟರ್ ಜನರಲ್, ಫ್ರಾಂಟಿಯರ್ ಮುಖ್ಯ ಕಚೇರಿ (ಎಸ್‌ಎಸ್‌ಬಿ), ಗುವಾಹಟಿ, ನಿಕಿತಾ ಕಾಂಪ್ಲೆಕ್ಸ್ 345, ಜಿ.ಎಸ್.ರಸ್ತೆ, ರಿಸರ್ಚ್ ಗಾರೆ, ಗುವಾಹಟಿ-22, ಅಸ್ಸಾಂ. ಮಾಹಿತಿಗೆ ://... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.