ಕಲಿಯಿರಿ ಸಾಮಾಜಿಕ ಉದ್ಯಮಶೀಲತೆ `ಲಾಭದೊಟ್ಟಿಗೆ ಸಾಮಾಜಿಕ ಹೊಣೆಗಾರಿಕೆ~. ಇದು ಹೊಸ ತಲೆಮಾರಿನ ಉದ್ಯಮದ ಮಂತ್ರ. ಆರ್ಥಿಕ ಸ್ಥಿರತೆ, ಹಣ ಗಳಿಕೆಯ ಜೊತೆಗೆ ಸಮಾಜಕ್ಕೆ ಒಳಿತಾಗುವಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅನೇಕರು ಮುಂದೆ ಬರುತ್ತಿದ್ದಾರೆ. ಇದನ್ನೇ ಹಿನ್ನೆಲೆಯಾಗಿ ಇಟ್ಟುಕೊಂಡು ಹುಬ್ಬಳ್ಳಿಯ ದೇಶಪಾಂಡೆ ಶಿಕ್ಷಣ ಸಮೂಹವು ಸ್ನಾತಕೋತ್ತರ ಕೋರ್ಸ್ ಆರಂಭಿಸುತ್ತಿದೆ. ಸೆ. 3 ಕಡೆ ದಿನ ಯಾವುದೇ ವಿಷಯದಲ್ಲಿ ಪದವಿ ಪಡೆದ, ಉದ್ಯಮ ಹಾಗೂ ಸಾಮಾಜಿಕ ಹೊಣೆಗಾರಿಕೆಯಲ್ಲಿ ಆಸಕ್ತಿ ಹೊಂದಿರುವ, 21 ರಿಂದ 30 ವರ್ಷದ ಒಳಗಿನವರು ಮಾತ್ರ ಅರ್ಹರು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 3 ಕೊನೆಯ ದಿನ. ಮಾಸ್ಟರ್ಸ್‌ ಇನ್ ಸೋಷಿಯಲ್ ಎಂಟರ್‌ಪ್ರೆನ್ಯುರ್‌ಶಿಪ್ (ಸಾಮಾಜಿಕ ಉದ್ಯಮಶೀಲತೆ) ಹೆಸರಿನ ಈ ಕೋರ್ಸ್‌ನ ಅವಧಿ ನಾಲ್ಕು ಸೆಮಿಸ್ಟರ್‌ಗಳು. ಕೃಷಿ, ಗ್ರಾಮೀಣ, ಶಿಕ್ಷಣ, ವೈದ್ಯಕೀಯ ಕ್ಷೇತ್ರದಂತಹ ಸುಮಾರು 25 ವಿವಿಧ ಅಧ್ಯಯನ ವಿಷಯಗಳನ್ನು ಒಳಗೊಂಡಿದೆ. ವ್ಯವಹಾರ ನಿರ್ವಹಣೆ, ಸಂವಹನ, ಸುಸ್ಥಿರ ಅಭಿವೃದ್ಧಿ, ನೈಸರ್ಗಿಕ ಸಂಪನ್ಮೂಲಗಳ ಸದುಪಯೋಗ ಮೊದಲಾದ ಸಂಗತಿಗಳ ಕುರಿತ ವಿಷಯಗಳೂ ಇರಲಿವೆ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವುದರ ಜೊತೆಗೆ ಅವರು ಉದ್ಯಮಶೀಲತೆಯನ್ನು ಮೈಗೂಡಿಸಿಕೊಳ್ಳುವಂತೆ ಮಾಡುವುದು, ಅದರೊಟ್ಟಿಗೆ ಸಾಮಾಜಿಕ ಜಾಗೃತಿಯನ್ನೂ ಬೆಳೆಸುವುದು ಈ ಕೋರ್ಸ್‌ನ ಉದ್ದೇಶ. ಇಲ್ಲಿ ನುರಿತ ಶಿಕ್ಷಕರ ಜೊತೆಗೆ ಫೌಂಡೇಶನ್‌ನ ಸಂಪರ್ಕದಲ್ಲಿರುವ ಉದ್ಯಮಿಗಳೂ ಮಾರ್ಗದರ್ಶನ ನೀಡಲಿದ್ದಾರೆ. ಇನ್‌ಕ್ಯುಬೇಷನ್ ಸೆಂಟರ್ ನಂತಹ ಸೌಲಭ್ಯಗಳನ್ನೂ ಕೋರ್ಸ್ ಹೊಂದಿದ್ದು, ಪದವಿ ಬಳಿಕ ಸಮಾಜಕ್ಕೆ ಒಳಿತಾಗುವ ಉದ್ಯಮದಲ್ಲಿ ತೊಡಗಿಕೊಳ್ಳಬಯಸುವ ವಿದ್ಯಾರ್ಥಿಗಳಿಗೆ ನೆರವು ನೀಡುವ ವ್ಯವಸ್ಥೆ ಇದೆ. ಎಂಎಸ್‌ಇ ಕೋರ್ಸ್‌ಗೆ ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯತೆ ಇದೆ. ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ದೇಶಪಾಂಡೆ ಫೌಂಡೇಶನ್‌ನಲ್ಲಿ ತರಗತಿಗಳು ನಡೆಯಲಿವೆ. ಇದು ವಸತಿ ಸಹಿತ ಕೋರ್ಸ್. ಮೊದಲ ವರ್ಷದಲ್ಲಿ 40 ವಿದ್ಯಾರ್ಥಿಗಳಿಗೆ ಪ್ರವೇಶದ ಅವಕಾಶವಿದೆ. ಕರ್ನಾಟಕ ವಿವಿ ನಿಯಮಾನುಸಾರ ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಮಾಹಿತಿಗೆ: ದೇಶಪಾಂಡೆ ಫೌಂಡೇಶನ್, ಬಿವಿಬಿ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್, ವಿದ್ಯಾನಗರ, ಹುಬ್ಬಳ್ಳಿ 580031 (ದೂರವಾಣಿ 0836- 2378 500, 96861 13995)/ ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.