ಝೀ ಲರ್ನ್ ಬ್ರೇನ್‌ಕೆಫೆ ಕ್ಯಾಂಪಸ್ ಪ್ಲಾಸ್ಟಿಕ್ ಗ್ಲಾಸ್‌ನಲ್ಲಿ ಎಂದಾದರೂ ನಿಮ್ಮ ಧ್ವನಿಯನ್ನು ಮುದ್ರಿಸಿ ಅದನ್ನು ಕೇಳಿಸಿಕೊಂಡಿದ್ದೀರಾ? ಒತ್ತಡದ ನಿಯಮ ಅನುಸರಿಸಿ ಎಂದಾದರೂ ಕರ್ಟೈನ್ ರೇಸರ್ ಬಳಸಿದ್ದೀರಾ? ಧ್ವನಿಯ ಸ್ವರೂಪ ಯಾವುದು? ಇಂಥ ಅನೇಕ ಆಸಕ್ತಿಯದಾಯಕ ಪ್ರಶ್ನೆಗಳಿಗೆ ಝೀ ಲರ್ನ್‌ನ ಬ್ರೈನ್‌ಕೆಫೆಯಲ್ಲಿ ಆಯೋಜಿಸಲಾಗುವ ತರಗತಿಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಉತ್ತರ ನೀಡಲಾಗುತ್ತದೆ. ಇದು ವಿಜ್ಞಾನದ ಕಲಿಕೆ ಮತ್ತು ಬೋಧನೆ ನಡುವೆ ಇರುವ ಅಂತರವನ್ನು ಕುಗ್ಗಿಸುವ ಯತ್ನದ ಒಂದು ಭಾಗ. ಇದು ಅನೇಕ ಶಾಲೆಗಳಲ್ಲಿ ಇರುವ ಡಿಜಿಟಲ್ ಮಾಧ್ಯಮದ ಬೋಧನಾ ಕ್ರಮಕ್ಕಿಂತ ಭಿನ್ನ. 1 ರಿಂದ 8ನೇ ತರಗತಿ ವರೆಗೆ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಸೇರಿದಂತೆ ವಿವಿಧ ಪಠ್ಯಕ್ರಮಗಳನ್ನು ಒಳಗೊಂಡಿದೆ. ಬ್ರೇನ್‌ಕೆಫೆ ಮೂಲಕ ಈಗಾಗಲೇ 50,000 ಮಕ್ಕಳು ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಈಗ ಮತ್ತೆ 500 ಕೇಂದ್ರಗಳನ್ನು ತೆರೆಯಲು ಝೀ ಯೋಜಿಸಿದೆ. ಬ್ರೇನ್‌ಕೆಫೆಯಡಿ ಕಲಿತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ `ಬ್ರೈನ್‌ಕೆಫೆ ಬಡ್ಡಿಂಗ್ ಸೈಂಟಿಸ್ಟ್ ಕಾಂಟೆಸ್ಟ್ 2011~ನಲ್ಲಿ ದೇಶದ 90 ವಿವಿಧ ಶಾಲೆಗಳ 3,000 ಮಕ್ಕಳು ಪಾಲ್ಗೊಂಡಿದ್ದರು. ಝೀ ಲರ್ನ್ ಪ್ರಾಥಮಿಕ ಹಂತದಿಂದ 12ನೇ ತರಗತಿ ವರೆಗೂ ಗುಣಮಟ್ಟದ ಶಿಕ್ಷಣ ನೀಡಲು ಶಾಲೆಗಳಿಗೆ ಅಗತ್ಯ ಶೈಕ್ಷಣಿಕ ಬೆಂಬಲ ನೀಡುತ್ತಿದೆ. ಮಾಹಿತಿಗೆ: 97395 55789, 98450 65011. ್ಝ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.