ಉದ್ಯೋಗಾವಕಾಶ ಅಲ್ಲಲ್ಲಿ... ನೈರುತ್ಯ ರೈಲ್ವೆ ಹುಬ್ಬಳ್ಳಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ನೈರುತ್ಯ ರೈಲ್ವೆಯಲ್ಲಿ 790 `ಡಿ~ ದರ್ಜೆಯ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-9-2012. ಹುದ್ದೆ ವಿವರ: ಟ್ರ್ಯಾಕ್‌ಮನ್- 425 ಹುದ್ದೆ, ಹೆಲ್ಪರ್-277, ಪೋರ್ಟರ್/ ಹಮಾಲ್/ ಸ್ವೀಪರ್ ಕಮ್ ಪೋರ್ಟರ್ 67, ಸಫಾಯಿವಾಲಾ- 21 ವೇತನ ಶ್ರೇಣಿ: ರೂ. 5200-20200. ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 33 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ ಅಥವಾ ಐಟಿಐ ಅಥವಾ ತತ್ಸಮಾನ. ಅರ್ಜಿ ಶುಲ್ಕ: ರೂ. 40 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ವಿಳಾಸ: ಅಸಿಸ್ಟೆಂಟ್ ಪರ್ಸೊನೆಲ್ ಆಫೀಸರ್ (ರಿಕ್ರೂಟ್‌ಮೆಂಟ್), ರೈಲ್ವೆ ರಿಕ್ರೂಟ್‌ವೆುಂಟ್ ಸೆಲ್, ಡಿಆರ್‌ಎಂ ಕಚೇರಿ ಆವರಣ, ನೈರುತ್ಯ ರೈಲ್ವೆ, ಹುಬ್ಬಳ್ಳಿ-580020 ಮಾಹಿತಿಗೆ ://../ ದಕ್ಷಿಣ ಮಧ್ಯ ರೈಲ್ವೆ ದಕ್ಷಿಣ ಮಧ್ಯ ರೈಲ್ವೆಯಲ್ಲಿ (ಸಿಕಂದರಾಬಾದ್) 1250 `ಡಿ~ ದರ್ಜೆಯ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-9-2012. ಹುದ್ದೆ ವಿವರ: ಅಸಿಸ್ಟೆಂಟ್ ಕುಕ್, ಬೇರರ್/ ಕ್ಲೀನರ್, ಕಮರ್ಷಿಯಲ್ ಪೋರ್ಟರ್-18 ಹುದ್ದೆ, ಟ್ರ್ಯಾಕ್‌ಮನ್- 541 ಹುದ್ದೆ, ಹೆಲ್ಪರ್- 465 ಹುದ್ದೆ, ಸಫಾಯಿವಾಲಾ-14 ಹುದ್ದೆ, ಅಸಿಸ್ಟೆಂಟ್ ಪಾಯಿಂಟ್ಸ್ ಮನ್-212 ಹುದ್ದೆ. ವೇತನ ಶ್ರೇಣಿ: ರೂ. 5200-20200. ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 33 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ ಅಥವಾ ಐಟಿಐ ಅಥವಾ ತತ್ಸಮಾನ. ಅರ್ಜಿ ಶುಲ್ಕ: ರೂ. 40 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ವಿಳಾಸ: ಅಸಿಸ್ಟೆಂಟ್ ಪರ್ಸೊನೆಲ್ ಆಫೀಸರ್ (ರಿಕ್ರೂಟ್‌ಮೆಂಟ್), ರೈಲ್ವೆ ರಿಕ್ರೂಟ್‌ವೆುಂಟ್ ಸೆಲ್, ಮೊದಲ ಮಹಡಿ, `ಸಿ~ ಬ್ಲಾಕ್, ರೈಲ್ ನಿಲಯಂ, ದಕ್ಷಿಣ ಮಧ್ಯ ರೈಲ್ವೆ, ಸಿಕಂದರಾಬಾದ್-500071 ಮಾಹಿತಿಗೆ ://..../ ಇಂಡಿಯನ್ ಬ್ಯಾಂಕ್ ಇಂಡಿಯನ್ ಬ್ಯಾಂಕ್‌ನಲ್ಲಿ 215 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-9-2012. ಹುದ್ದೆ ಹೆಸರು: ಸ್ಪೆಷಲಿಸ್ಟ್ ಆಫೀಸರ್ (ಲೀಗಲ್ ಆಫೀಸರ್- 25 ಹುದ್ದೆ, ಕಂಪ್ಯೂಟರ್ ಆಫೀಸರ್- 10 ಹುದ್ದೆ) ವೇತನ ಶ್ರೇಣಿ ರೂ. 19400-28100. ರೂರಲ್ ಡೆವಲಪ್‌ವೆುಂಟ್ ಆಫೀಸರ್/ ಅಸಿಸ್ಟೆಂಟ್ ಮ್ಯಾನೇಜರ್ (ಕೃಷಿ) 151, ರಾಜಭಾಷಾ ಅಧಿಕಾರಿ/ ಹಿಂದಿ ಆಫೀಸರ್/ ಅಸಿಸ್ಟೆಂಟ್ ಮ್ಯಾನೇಜರ್ (ಅಫಿಷಿಯಲ್ ಲಾಂಗ್ವೇಜ್) 29 ಹುದ್ದೆ: ವೇತನ ಶ್ರೇಣಿ ರೂ. 14500-25700. ವಯೋಮಿತಿ: 32 ವರ್ಷ ದಾಟಿರಬಾರದು. ಕೆಲ ಹುದ್ದೆಗಳಿಗೆ ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 100 ಆಯ್ಕೆ ವಿಧಾನ: ಸಂದರ್ಶನ ಹಾಗೂ ಐಬಿಪಿಎಸ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಪಡೆದ ಅರ್ಹತಾ ಅಂಕಗಳು. ಮಾಹಿತಿಗೆ ://.. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 20 ಹುದ್ದೆಗಳನ್ನು (ಪುರುಷರ ಕ್ರೀಡಾಪಟುಗಳಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-9-2012. * ಆಫೀಸರ್ 5 ಹುದ್ದೆ. ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ವೇತನ ಶ್ರೇಣಿ: ರೂ. 14500-25700. * ಕ್ಲರ್ಕ್ಸ್: 15 ಹುದ್ದೆ ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವೇತನ ಶ್ರೇಣಿ: ರೂ. 7200-19300. ಅರ್ಜಿ ಶುಲ್ಕ: ರೂ. 400 ಆಯ್ಕೆ ವಿಧಾನ: ಸಂದರ್ಶನ ಹಾಗೂ ಕ್ರೀಡಾ ಕೌಶಲ ವಿಳಾಸ: ದಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಎಚ್‌ಆರ್‌ಎಂ), ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಹೆಡ್ ಆಫೀಸ್, ಎಚ್‌ಆರ್‌ಎಂ ಡಿಪಾರ್ಟ್‌ಮೆಂಟ್, ಯುನೈಟೆಡ್ ಟವರ್, 12ನೇ ಮಹಡಿ, 11 ಹೇಮಂತ ಬಸು ಸರಣಿ, ಕೋಲ್ಕತ್ತ- 700001 ಮಾಹಿತಿಗೆ ://.. ಯುಕೊ ಬ್ಯಾಂಕ್ ಯುಕೊ ಬ್ಯಾಂಕ್‌ನಲ್ಲಿ 15 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-9-2012. ಹುದ್ದೆ ಹೆಸರು: ಎಚ್‌ಆರ್ ಎಕ್ಸಿಕ್ಯೂಟೀವ್ ವೇತನ ಶ್ರೇಣಿ: ರೂ. 30600-36200. ವಯೋಮಿತಿ: ಕನಿಷ್ಠ 30 ವರ್ಷ. ಗರಿಷ್ಠ 35. ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ/ ಬ್ಯುಸಿನೆಸ್‌ನಲ್ಲಿ ಪದವಿ ಅರ್ಜಿ ಶುಲ್ಕ: ರೂ. 400 ವಿಳಾಸ: ದಿ ಜನರಲ್ ಮ್ಯಾನೇಜರ್ (ಎಚ್‌ಆರ್‌ಎಂ), ಯುಕೊ ಬ್ಯಾಂಕ್, ಮಾನವ ಸಂಪನ್ಮೂಲ ನಿರ್ವಹಣೆ, ಮುಖ್ಯ ಕಚೇರಿ (ಮೊದಲ ಮಹಡಿ), 10, ಬಿಟಿಎಂ ಸರಣಿ, ಕೋಲ್ಕತ್ತ-700001 ಮಾಹಿತಿಗೆ ://../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.