ಟೋಫಲ್ ಗೆಲ್ಲಲು ಹತ್ತು ಸೂತ್ರ ಇಂಗ್ಲಿಷ್ ನಿಮ್ಮ ಮೂಲ ಅಥವಾ ಮಾತೃಭಾಷೆ ಆಗಿರದೆ ಇದ್ದರೆ, ವಿದೇಶದಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪ್ರವೇಶದ ವೇಳೆ ನೀವು ಇಂಗ್ಲಿಷ್ ಭಾಷಾ ಕೌಶಲಗಳನ್ನು ಪ್ರದರ್ಶಿಸಬೇಕಾಗುವುದು. ಅದನ್ನು ನಿರ್ಧರಿಸುವ ಮಾನದಂಡವೇ ವಿಶ್ವಾದ್ಯಂತ ಅನುಮೋದಿತವಾಗಿರುವ ಟೋಫಲ್ ಇಂಗ್ಲಿಷ್ ಭಾಷಾ ಪರೀಕ್ಷೆ. ಆಸ್ಟ್ರೇಲಿಯ, ನ್ಯೂಜಿಲೆಂಡ್, ಕೆನಡಾ, ಇಂಗ್ಲೆಂಡ್ ಹಾಗೂ ಅಮೆರಿಕವನ್ನು ಒಳಗೊಂಡು 130ಕ್ಕೂ ಹೆಚ್ಚು ದೇಶಗಳ 8,500ಕ್ಕೂ ಮೇಲ್ಪಟ್ಟ ಶೈಕ್ಷಣಿಕ ಸಂಸ್ಥೆಗಳು ಈ ಪರೀಕ್ಷೆಗೆ ಮಾನ್ಯತೆ ನೀಡಿವೆ. ಇದನ್ನು ಅರ್ಧ ದಿನದಲ್ಲಿ ಮುಗಿಸಬಹುದು. ಟೋಫಲ್ ಪರೀಕ್ಷೆಯನ್ನು ಸಂಘಟಿಸುವ ಸಂಸ್ಥೆಯೇ ಇಟಿಎಸ್. ಇದು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ನೆರವಾಗುವ ಟೋಫಲ್ ಟೂಲ್‌ಕಿಟ್ ಅಭಿವೃದ್ಧಿಪಡಿಸಿದೆ. ಸುಲಭವಾಗಿ ಉಪಯೋಗಿಸಬಲ್ಲ ಇವನ್ನು ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಉಪಕರಣದಿಂದಲೂ ಪಡೆಯಬಹುದು. ವಿಶೇಷ ಎಂದರೆ ಈ ಸೇವೆ ಸಂಪೂರ್ಣ ಉಚಿತ. ಟೋಫಲ್ ಐಬಿಟಿಎಲ್ ಕ್ವಿಕ್ ಪ್ರಿಪ್ (..//): ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾದರಿ ಪ್ರಶ್ನೆಗಳನ್ನು ಇಟಿಎಸ್‌ನಿಂದ ಅಪೇಕ್ಷಿಸುತ್ತ್ದ್ದಿದಾರೆ. ಅದಕ್ಕಾಗಿ ಇಲ್ಲಿ ಹಿಂದಿನ ಪರೀಕ್ಷೆಗಳಲ್ಲಿ ಕೇಳಲಾದಂಥ ಪ್ರಶ್ನೆಗಳನ್ನು ನೀಡಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗುತ್ತದೆ. ಇನ್‌ಸೈಡ್ ದಿ ಟೋಫಲ್ ಟೆಸ್ಟ್ ವಿಡಿಯೊ ಸರಣಿಗಳು (..//video_library/): ಐದು ಭಾಗಗಳ ಹೊಸ ದೃಶ್ಯಾವಳಿ ಸರಣಿಯು ಬರವಣಿಗೆ ಹಾಗೂ ಮಾತುಗಾರಿಕೆ ವಿಭಾಗಗಳ ಬಗ್ಗೆ ಆಳವಾದ ಮಾಹಿತಿಯನ್ನು ಒದಗಿಸಿ ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ತಿಳಿದುಕೊಳ್ಳಲು ನೆರವಾಗುತ್ತದೆ. ಟೋಫಲ್ ಟೆಸ್ಟ್ ಪ್ರಿಪ್ ಪ್ಲಾನರ್ (..//): ಇಂಗ್ಲಿಷ್ ಕಲಿಯಲು ನೀವು ಸಾಕಷ್ಟು ಶ್ರಮ ವಹಿಸಿದ್ದು ಟೋಫಲ್ ಪರೀಕ್ಷೆ ಹಾಗೂ ಲಭ್ಯವಿರುವ ಸಂಪನ್ಮೂಲಗಳು ನಿಮಗೆ ನೆರವಾಗುವಂತಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಬಯಸುವವರಿಗಾಗಿ ಇದೆ ಇದು. ಎಂಟು ವಾರಗಳ ಅವಧಿಯ ವೇಳಾಪಟ್ಟಿಯನ್ನು ಒದಗಿಸುತ್ತದೆ. ಇದು ಪರೀಕ್ಷಾ ದಿನದಂದು ಸಾಧ್ಯವಾದಷ್ಟೂ ಉತ್ತಮ ಪ್ರದರ್ಶನ ನೀಡುವಂತೆ ನಿಮ್ಮನ್ನು ಸಿದ್ಧಗೊಳಿಸುತ್ತದೆ. ಟೋಫಲ್ ಗೋ ಎನಿವೇರ್ ಅಂತರ್ಜಾಲ ತಾಣ (..): ಟೋಫಲ್ ಪರೀಕ್ಷೆ ತೆಗೆದುಕೊಳ್ಳುವವರಿಗಾಗಿಯೇ ವಿನ್ಯಾಸಗೊಳಿಸಲಾದ ಹಾಗೂ ಆಗಾಗ್ಗೆ ಹೊಸ ಮಾಹಿತಿಗಳಿಂದ ಪರಿಷ್ಕೃತಗೊಳಿಸುವ ಪರಸ್ಪರ ಕ್ರಿಯೆಯ ಈ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು. ಈ ತಾಣದ ಬಹುಮಾಧ್ಯಮ ವೇದಿಕೆಗಳ ಮೂಲಕ ವಿದ್ಯಾರ್ಥಿಗಳು ಸ್ಟಡಿ ಗ್ರೂಪ್ ದೃಶ್ಯಾವಳಿ ಸರಣಿ (://../------ ದಲ್ಲಿ ಲಭ್ಯವಿದೆ) ಗಳಂಥ ವಿವಿಧ ಅಧ್ಯಯನ ಮೂಲಗಳ ಸೌಲಭ್ಯವನ್ನು ಪಡೆಯಬಹುದು. ಇವು ಟೋಫಲ್ ಪರೀಕ್ಷೆಯ ಓದುವಿಕೆ, ಬರವಣಿಗೆ, ಮಾತುಗಾರಿಕೆ ಹಾಗೂ ಆಲಿಸುವಿಕೆ ವಿಭಾಗಗಳ ಬಗ್ಗೆ ನಿರ್ದಿಷ್ಟ ತಂತ್ರಗಾರಿಕೆ ಕಲಿಸುತ್ತದೆ. ಯೂಟ್ಯೂಬ್‌ನಲ್ಲಿ ಟೋಫಲ್ ಟಿವಿ ವಾಹಿನಿ (../): ನಿಮ್ಮ ದೈನಂದಿನ ಕೆಲಸದ ಮಧ್ಯೆ ಕೆಲ ನಿಮಿಷ ಬಿಡುವಿದ್ದರೆ, ಟೋಫಲ್ ಪರೀಕ್ಷೆ ಕುರಿತ ಅಭ್ಯಾಸ ಕ್ರಮಗಳು, ಅಧ್ಯಯನಗಳ ಬಗ್ಗೆ ಇಂಗ್ಲಿಷ್ ಶಿಕ್ಷಕರು, ಪರೀಕ್ಷಾರ್ಥಿಗಳು ಸಲಹೆಗಳನ್ನು ವಿನಿಮಯ ಮಾಡಿಕೊಳ್ಳುವ ಹೊಸ ದೃಶ್ಯಾವಳಿಗಳನ್ನು ನೀವು ನಿತ್ಯ ನೋಡಬಹುದು. ಫೇಸ್‌ಬುಕ್ ಇಂಡಿಯಾ ಪೇಜ್‌ನಲ್ಲಿ ಟೋಫಲ್ ಗೋ ಎನಿವೇರ್ (../): ಟೋಫಲ್ ಪರೀಕ್ಷೆ ಹಾಗೂ ಭಾರತದಾದ್ಯಂತ ನಡೆಯುತ್ತಿರುವ ಶೈಕ್ಷಣಿಕ ಕಾರ್ಯಕ್ರಮ ಕುರಿತ ಇತ್ತೀಚಿನ ಮಾಹಿತಿಗಳ ಬಗ್ಗೆ ಲಕ್ಷಾಂತರ ವಿದ್ಯಾರ್ಥಿಗಳು ನಡೆಸುವ ಸಂಭಾಷಣೆಗಳಲ್ಲಿ ನೀವೂ ಜೊತೆಗೂಡಬಹುದು. ಟೋಫಲ್ ಜರ್ನಿ (..//-): ವಿದೇಶದಲ್ಲಿ ಕಲಿಯುವ ಯೋಚನೆ ಇದೆಯೇ? ಟೋಫಲ್ ಜರ್ನಿ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಅಪೇಕ್ಷಿತ ವಿದೇಶ ಅಧ್ಯಯನ, ವಿದ್ಯಾರ್ಥಿ ವೀಸಾ, ಲಭ್ಯವಿರುವ ಶಿಷ್ಯವೇತನ ಅವಕಾಶಗಳು, ಸೂಕ್ತ ಹಾಗೂ ನೆರವಾಗಬಲ್ಲ ಇಮೇಲ್ ಹಾಗೂ ಪಠ್ಯ ಸಂದೇಶಗಳನ್ನು ಒಳಗೊಂಡ ವ್ಯಾಪಕ ಶ್ರೇಣಿಯ ಮಾಹಿತಿ ಮೂಲಗಳನ್ನು ನೀಡುತ್ತದೆ. ಮೆಟಾಮೆಟ್ರಿಕ್ಸ್ ಲೆಕ್ಸಿಲ್ ಮೆಷರ್ಸ್‌ (://./): ನಿಮ್ಮ ಕೌಶಲ ಮಟ್ಟಕ್ಕೆ ತಕ್ಕಂತೆ ಓದುವಂಥ ಆಸಕ್ತಿಕರ ಲೇಖನಗಳನ್ನು ಹುಡುಕಾಡುವುದು ಕಷ್ಟವಾಗಿದೆಯೆ? ನಿಮ್ಮ ಟೋಫಲ್ ರೀಡಿಂಗ್ ಸ್ಕೋರ್ ಆಧರಿಸಿ ಲೆಕ್ಸಿಲ್ ಸ್ಕೋರ್ ನಿಮ್ಮ ಓದುವ ಮಟ್ಟಕ್ಕೆ ಅನುಗುಣವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗುತ್ತದೆ. ವೆಲ್‌ಕಮ್ ಟು ದಿ ಟೋಫಲ್ ಐಬಿಟಿ ಟೆಸ್ಟಿಂಗ್ ಸೈಟ್ ದೃಶ್ಯಾವಳಿ (..//---): ಪರೀಕ್ಷಾ ದಿನದ ನಿರೀಕ್ಷೆಗಳು ಏನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದೆಯೇ? ನೋಂದಣಿ, ಒಳ ಪ್ರವೇಶ ಹಾಗೂ ಪರೀಕ್ಷಾ ಪ್ರಕ್ರಿಯೆಗಳನ್ನು ತಿಳಿದುಕೊಳ್ಳಲು ಆರು ನಿಮಿಷಗಳ ಈ ದೃಶ್ಯಾವಳಿಯನ್ನು ನೋಡಿ. ಪರೀಕ್ಷಾ ದಿನದ ಸಿದ್ಧತೆಗಳ ತಿಳಿದುಕೊಂಡಿದ್ದರೆ ನಿಮಗೆ ಯಾವುದೇ ಆತಂಕಗಳಿರುವುದಿಲ್ಲ. ಭಾರತೀಯ ವಿದ್ಯಾರ್ಥಿಗಳಿಗೆಂದೇ ಇಟಿಎಸ್ ಎರಡು ಟೋಫಲ್ ಗ್ರಾಹಕ ಕೇಂದ್ರಗಳನ್ನು ಹೊಂದಿದೆ. ಈ ಕೇಂದ್ರಗಳಿಗೆ ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯ ವರೆಗೆ ಕರೆ ಮಾಡಬಹುದಾಗಿದೆ. ಇದರ ಸಂಖ್ಯೆ +91 9 7112 37111. ಅಲ್ಲದೆ TOEFLsupport4India@. ಗೆ ಇಮೇಲ್ ಕಳುಹಿಸುವ ಮೂಲಕವೂ ಮಾಹಿತಿ ಪಡೆಯಬಹುದು. ಟೋಫಲ್ ಟೂಲ್‌ಕಿಟ್ ಟೋಫಲ್ ಪರೀಕ್ಷಾ ಸಿದ್ಧತೆಯನ್ನು ಈಗ ಮತ್ತಷ್ಟು ಸರಳಗೊಳಿಸುತ್ತದೆ! ಭಾರತೀಯ ವಿದ್ಯಾರ್ಥಿಗಳು ಟೋಫಲ್ ಐಬಿಟಿ ಪರೀಕ್ಷೆ ತೆಗೆದುಕೊಳ್ಳಲು ಆನ್‌ಲೈನ್‌ನಲ್ಲಿ ನೋಂದಾವಣೆ ಮಾಡಿ ಶುಲ್ಕವನ್ನು ರೂಪಾಯಿಯಲ್ಲಿ ಪಾವತಿಸುವ ಅವಕಾಶವೂ ಇದೆ. ಇದುವರೆಗೆ 270 ಲಕ್ಷ ವಿದ್ಯಾರ್ಥಿಗಳು ಟೋಫಲ್ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ನೀವು ಹಿಂದುಳಿಯಬೇಡಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.