ಸ್ಪರ್ಧಾ ಪರೀಕ್ಷೆಗೆ ಕ್ಲಾಸಿಕ್ ತರಬೇತಿ ಐಎಎಸ್, ಕೆಎಎಸ್ ಹುದ್ದೆಗೇರುವುದು ಬಹಳಷ್ಟು ಯುವಜನರ ಮಹತ್ವಾಕಾಂಕ್ಷಿ ಕನಸು. ಅದಕ್ಕೆ ಸೂಕ್ತ ಸಿದ್ಧತೆ, ತರಬೇತಿ ಅವಶ್ಯ. ಉತ್ತಮ ಮಾರ್ಗದರ್ಶಕರು ಸಿಕ್ಕಿದ್ದಲ್ಲಿ ಉತ್ತಮ ಫಲಿತಾಂಶ ಕಂಡುಕೊಳ್ಳಲು ಸಾಧ್ಯ. ಹೀಗೆ ಉನ್ನತ ಗುರಿಯ ಕನಸು ಹೊತ್ತ ಆಕಾಂಕ್ಷಿಗಳಿಗೆ ಧಾರವಾಡದ ಕರ್ನಾಟಕ ಕ್ಲಾಸಿಕ್ ಶಿಕ್ಷಣ ಸಂಸ್ಥೆಯು ಕಳೆದ ಹದಿನೈದು ವರ್ಷಗಳಿಂದ ತರಬೇತಿ- ಮಾರ್ಗದರ್ಶನ ನೀಡುತ್ತ ಬಂದಿದೆ. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯು ಒಂದೇ ಸೂರಿನಲ್ಲಿ ಸಿಗುವುದು ಇಲ್ಲಿನ ವಿಶೇಷ. ತರಬೇತಿಗೆಂದೇ ಪ್ರತ್ಯೇಕ ಕೊಠಡಿ ಇತ್ಯಾದಿ ಸೌಲಭ್ಯಗಳಿದ್ದು, ಐವತ್ತಕ್ಕೂ ಹೆಚ್ಚು ವಿಷಯ ತಜ್ಞರು ತರಬೇತಿ ನೀಡುತ್ತಿದ್ದಾರೆ. ಪುಸ್ತಕಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳ ಅನುಕೂಲಕ್ಕೆ ಸಂಸ್ಥೆಯು `ಸ್ಪರ್ಧಾ ಸ್ಫೂರ್ತಿ~ ಪ್ರಕಾಶನದ ಮೂಲಕ ಪ್ರಚಲಿತ ವಿದ್ಯಮಾನ, ವ್ಯಕ್ತಿತ್ವ ವಿಕಸನದ ಮಾಹಿತಿಯನ್ನುಳ್ಳ `ಸ್ಪರ್ಧಾ ಸ್ಫೂರ್ತಿ~ `ಕಾಂಪಿಟೇಶನ್ ವಿಜನ್~, ಪ್ರಶ್ನೋತ್ತರ ಮಾಲಿಕೆ ರೂಪದ ಅಧ್ಯಯನ ಸಾಮಗ್ರಿಗಳನ್ನು ಒಳಗೊಂಡ `ಸ್ಟಡಿ ಪ್ಲಾನರ್~, ಉದ್ಯೋಗ ಲಭ್ಯತೆ ವಿವರ ನೀಡುವ `ಉದ್ಯೋಗ ವಾರ್ತೆ~, `ಜಾಬ್ ರಿಪೋರ್ಟರ್~, ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿ ಪ್ರಶ್ನೆಪತ್ರಿಕೆಗಳುಳ್ಳ `ಪ್ರಾಕ್ಟೀಸ್ ಟೆಸ್ಟ್ ಸಿರೀಸ್~ ಕನ್ನಡ ಹಾಗೂ ಇಂಗ್ಲಿಷ್ ಮಾಸಪತ್ರಿಕೆಗಳನ್ನು ಹೊರತರುತ್ತಿದೆ. ಕೇಂದ್ರವು ತನ್ನದೇ ಆದ ಗ್ರಂಥಾಲಯ ಸೌಲಭ್ಯ ಹೊಂದಿದ್ದು, ಪುಸ್ತಕಗಳನ್ನು ಎರವಲು ನೀಡುತ್ತದೆ. ಪರಸ್ಥಳದ ವಿದ್ಯಾರ್ಥಿಗಳಿಗಾಗಿ ಪುರುಷ ಹಾಗೂ ಮಹಿಳೆಯರ ಪ್ರತ್ಯೇಕ ವಸತಿನಿಲಯ ವ್ಯವಸ್ಥೆ ಮಾಡಿದೆ. `ಆಸಕ್ತರಿಗೆ ಗುಣಮಟ್ಟದ ತರಬೇತಿ ನೀಡುವುದು ನಮ್ಮ ಉದ್ದೇಶ. ವರ್ಷದ ಎಲ್ಲ ಸಮಯದಲ್ಲೂ ಒಂದಲ್ಲ ಒಂದು ತರಬೇತಿ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಏಕಕಾಲಕ್ಕೆ ಹತ್ತು ವಿವಿಧ ವಿಷಯಗಳ ತರಬೇತಿ ನೀಡುವ ವ್ಯವಸ್ಥೆ ಇದೆ. ಸದ್ಯದಲ್ಲೇ ಬೆಂಗಳೂರಿನಲ್ಲೂ ಅಧ್ಯಯನ ಕೇಂದ್ರ ತೆರೆಯುವ ಯೋಜನೆ ಇದೆ~ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ. ಅವರ ಮೊಬೈಲ್ 99020 43352. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.