ಯುಪಿಎಸ್ ಸಿ *ಶರಣ್ ಚೌದರಿ ನಾನು ಎಂಕಾಂ ಓದುತ್ತಿದ್ದೇನೆ. ವಯಸ್ಸು 30. ಐಪಿಎಸ್ ಮಾಡುವ ಆಸೆ ಇದೆ. ಸಾಧ್ಯವೇ? ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 30, ಹಿಂದುಳಿದ ವರ್ಗಗಳಿಗೆ 33 ಮತ್ತು ಪರಿಶಿಷ್ಟರಿಗೆ 35 ವರ್ಷ. ಮಾಜಿ ಸೈನಿಕರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಮಾಹಿತಿಗೆ ಯುಪಿಎಸ್‌ಸಿ ವೆಬ್‌ಸೈಟ್ ನೋಡಬಹುದು. * ಪ್ರಕಾಶ್ ಪಿ ನಾನು ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಗೆ ಅಧ್ಯಯನ ಮಾಡುತ್ತಿದ್ದೇನೆ. ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಮತ್ತು ಸಾರ್ವಜನಿಕ ಆಡಳಿತವನ್ನು ಪ್ರಧಾನ ವಿಷಯವಾಗಿ ತೆಗೆದುಕೊಳ್ಳಬೇಕು ಎಂದಿದ್ದೇನೆ. ಇದಕ್ಕೆ ಏನು ಓದಬೇಕು? ನೀವು ಮುಖ್ಯ ಪರೀಕ್ಷೆ ಬಗ್ಗೆ ಈಗ ತಲೆಕೆಡಿಸಿಕೊಳ್ಳದೆ ಪೂರ್ವಭಾವಿ ಪರೀಕ್ಷೆಗೆ ಹೆಚ್ಚು ಗಮನ ಕೊಡಿ. ದಿನಪತ್ರಿಕೆಗಳು, ಎನ್‌ಸಿಇಆರ್‌ಟಿ ಪಠ್ಯಪುಸ್ತಕ, ಸಾಮಾನ್ಯ ಜ್ಞಾನ ಹೆಚ್ಚಿಸುವ ನಿಯತಕಾಲಿಕ ತಪ್ಪದೆ ಓದಿ. ಪೂರ್ವಭಾವಿ ಪರೀಕ್ಷೆಯ ದ್ವಿತೀಯ ಪ್ರಶ್ನೆ ಪತ್ರಿಕೆ ಬಗ್ಗೆ ನಿರ್ದಿಷ್ಟವಾಗಿ ಹೀಗೇ ತಯಾರಿ ಮಾಡಬೇಕು ಎಂದೇನಿಲ್ಲ. ಸಮಯ ಪ್ರಜ್ಞೆ, ಸಾಮಾನ್ಯ ಜ್ಞಾನ ಮುಖ್ಯ. *ಅಶೋಕ ನಾಯಕ, ಕಾರಟಗಿ ನನಗೆ ಐಪಿಎಸ್ ಅಧಿಕಾರಿ ಆಗುವ ಆಸೆ. ಆದರೆ ನನ್ನ ಇಂಗ್ಲಿಷ್ ಚೆನ್ನಾಗಿಲ್ಲ. ಗೊಂದಲದಲ್ಲಿದ್ದೇನೆ. ಕೆಪಿಎಸ್‌ಸಿ, ಯುಪಿಎಸ್‌ಸಿಯಲ್ಲಿ ಯಾವುದು ಸೂಕ್ತ? ಹಾಗೆಯೇ ಐಪಿಎಸ್ ಕನಸು ಈಡೇರಲು ಯಾವುದನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಲಿ? ನೀವು ಸೆ. 10 ಮತ್ತು 17ರ ಪ್ರಜಾವಾಣಿ ಶಿಕ್ಷಣ ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ ಓದಿ. * ಆರ್.ಆರ್. ಅಭಿಷೇಕ್ ನಿಮ್ಮಂತೆ ನಾನೂ ಬಿಇ ಮುಗಿಸಿದ್ದೇನೆ. ಕನ್ನಡವನ್ನು ಐಚ್ಛಿಕವಾಗಿ ತೆಗೆದುಕೊಂಡು ನಾಗರಿಕ ಸೇವಾ ಪರೀಕ್ಷೆ ಬರೆಯುವ ಆಸೆಯಿದೆ. ಇದಕ್ಕಾಗಿ ಯಾವ ಪುಸ್ತಕಗಳನ್ನು ಓದಲಿ? ಓದಲು ವಿಶೇಷ ವಿಧಾನ ಏನಾದರೂ ಇದೆಯೇ? ದಿನಪತ್ರಿಕೆಗಳನ್ನು ತಪ್ಪದೇ ಓದಿ. ಹೊಸ ವಿಷಯಗಳ ಬಗ್ಗೆ ಕುತೂಹಲ ಇರಲಿ. ಅದೇ ನಿಮಗೆ ಬೆಳಕು ತೋರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.