ಆಘ್ರಾಣಿಸಿ ಭವಿಷ್ಯದ ಪರಿಮಳ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಒಂದು ಗಂಭೀರವಾದ ಸಂಗತಿ. ಇದು ಹಲವಾರು ವರ್ಷಗಳ ಬೇಡಿಕೆ ಮತ್ತು ತರಬೇತಿಯನ್ನು ಅಪೇಕ್ಷಿಸುತ್ತದೆ. ಸುಗಂಧ ದ್ರವ್ಯ ಸದಾ ಆಸಕ್ತಿದಾಯಕವಾದ ಕ್ಷೇತ್ರ. ಹೆಚ್ಚು ವಹಿವಾಟಿನೊಂದಿಗೆ ಈ ಉದ್ಯಮ ಇಂದು ಅಚ್ಚರಿಯ ಭವಿಷ್ಯವನ್ನು ವೃತ್ತಿಪರರಿಗೆ ಒದಗಿಸುತ್ತಿದೆ. ಕೇವಲ ಕೆಲವೇ ಪ್ರವರ್ತಕರು ಮಾರುಕಟ್ಟೆಯಲ್ಲಿ ಶೇ 70ಕ್ಕಿಂತ ಹೆಚ್ಚು ಪಾಲು ಪಡೆದಿದ್ದಾರೆ. ಕ್ರಿಯಾಶೀಲ ಸುಗಂಧ ಉದ್ಯೋಗಿ 300- 600 ಸುಗಂಧ ದ್ರವ್ಯಗಳೊಂದಿಗೆ ಕೆಲಸ ನಿರ್ವಹಿಸುತ್ತಾನೆ. ಒಂದು ಸಂಕೀರ್ಣವಾದ ಪರಿಮಳ 30-80 ಸುಗಂಧ ಎಣ್ಣೆಗಳ ಮಿಶ್ರಣವಾಗಿರುತ್ತದೆ. ಸುಗಂಧ ಸೃಷ್ಟಿ ಒಂದು ಕಲೆ. ಅದಕ್ಕೆ ವಿಜ್ಞಾನದ ಜ್ಞಾನ, ಫ್ಯಾಷನ್ ಟ್ರೆಂಡ್, ಬೇಡಿಕೆಯ ಪರಿಕಲ್ಪನೆ ಇರಬೇಕು. ಕೌಶಲ ಉದ್ಯೋಗಕ್ಕೆ ಅರ್ಹತೆ ಪಡೆಯಲು ಅಭ್ಯರ್ಥಿಗಳಿಗೆ ಪ್ರಾಥಮಿಕ ಪರಿಮಳ ಪರೀಕ್ಷೆ ಮಾಡಲಾಗುತ್ತದೆ. ರಸಾಯನಶಾಸ್ತ್ರದ ಕೋರ್ಸ್‌ನೊಂದಿಗೆ ಅಭ್ಯರ್ಥಿಗಳು ತರಬೇತಿಗೆ ಅರ್ಹತೆ ಪಡೆಯಬಹುದು. ಉದ್ಯೋಗ ವಿಭಾಗ 3 ವಿಭಾಗಗಳಿವೆ- ಸುಗಂಧ ಸೃಷ್ಟಿ, ಬಳಕೆ ಮತ್ತು ವಿಸ್ತರಣೆ ಸುಗಂಧ ಸೃಷ್ಟಿ ವಿಭಾಗವು ಮಾರುಕಟ್ಟೆ ವಿಭಾಗ ಅಥವಾ ಗ್ರಾಹಕರು ನೀಡುವ ಹೊಸ ಪರಿಮಳವನ್ನು ಸೃಷ್ಟಿಸುತ್ತದೆ. ಹಿರಿಯ, ಕಿರಿಯ ಸುಗಂಧ ಉದ್ಯೋಗಿಗಳು ಮತ್ತು ವಿಶ್ಲೇಷಕರಿಗೆ ಉದ್ಯೋಗ ನೀಡುತ್ತದೆ. ಇಲ್ಲಿನ ಅಭ್ಯರ್ಥಿಗಳು ರಸಾಯನಶಾಸ್ತ್ರದ ಹಿನ್ನೆಲೆ ಹೊಂದಿರಬೇಕು. ಸುಗಂಧ ಸೃಷ್ಟಿಯಲ್ಲಿ ಶಿಕ್ಷಣ ಪಡೆದವರು ಬೇಗ ಅರ್ಹತೆ ಪಡೆಯುತ್ತಾರೆ. ಅಪ್ಲಿಕೇಷನ್ ವಿಭಾಗದಲ್ಲಿ ಹಿರಿಯ ಮತ್ತು ಕಿರಿಯ ಕೆಮಿಸ್ಟ್‌ಗಳಾಗಿ ಉದ್ಯೋಗ ಪಡೆಯಬಹುದು. ಅಭ್ಯರ್ಥಿಗಳು ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ ಪಡೆದಿರಬೇಕು. ವಿಸ್ತರಣೆ ವಿಭಾಗದಲ್ಲಿ ಸುಗಂಧ ಬಳಕೆ ಅಂತಿಮ ಹಂತದಲ್ಲಿರುತ್ತದೆ. ಉದಾಹರಣೆಗೆ ಬಟ್ಟೆ ತೊಳೆಯಲು ಬಳಸುವ ಸುಗಂಧ. ಇಲ್ಲಿನ ಗುರಿ ಬಟ್ಟೆ ತೊಳೆದು ಒಣಗಿಸಿದ ನಂತರ ಅತ್ಯುತ್ತಮ ಪರಿಮಳ ನೀಡುವ ಉತ್ಪನ್ನ. ಇದಕ್ಕೆ ಅರ್ಹತೆ ಪಡೆಯಲುರಸಾಯನಶಾಸ್ತ್ರದಲ್ಲಿ ಪದವಿ ಪಡೆದು, ಬಿಸಿನೆಸ್ ಕೋರ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿರಬೇಕು. ಉದ್ಯೋಗ ಸಂಬಂಧಿ ಕ್ಷೇತ್ರಗಳು ಪರಿಮಳ ಒಂದು ಬೃಹತ್ ಉದ್ಯಮ. ಇಲ್ಲಿ ಆಹಾರ ಮತ್ತು ಪಾನೀಯ ಕಂಪೆನಿಗಳು, ಕಾಫಿ, ಚಹಾ, ಮದ್ಯಪಾನ, ಅರೋಮಾ ಥೆರಪಿ, ಊದುಬತ್ತಿ, ಸೌಂದರ್ಯ ವರ್ಧಕ ಕೆಮಿಸ್ಟ್, ಇಂದ್ರಿಯ ಮನಃಶಾಸ್ತ್ರ, ಆರ್ಟಿಸಾನ್ ಪರ್‌ಫ್ಯೂಮರ್ಸ್‌ನಂತಹ ಹಲವು ಕ್ಷೇತ್ರಗಳಿವೆ. ಶಿಕ್ಷಣ ಸಂಸ್ಥೆಗಳು 1) ಕೇಲ್ಕರ್ ಶಿಕ್ಷಣ ಟ್ರಸ್ಟ್‌ನ ವಿ.ಜಿ ವೇಜ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್, ಮುಂಬೈ- ಸುಗಂಧ ಮತ್ತು ಪ್ರಸಾಧನ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ 2) ಫ್ರೇಗ್ರೆನ್ಸ್ ಅಂಡ್ ಫ್ಲೇವರ್ ಡೆವಲಪ್‌ವೆುಂಟ್ ಸೆಂಟರ್, ಕನೌಜ್, ಉತ್ತರ ಪ್ರದೇಶ- 3 ದಿನದಿಂದ 1 ವರ್ಷದ ಕೋರ್ಸ್‌ಗಳು 3) ಐಎಸ್‌ಐಪಿಸಿಎ ಫ್ರಾನ್ಸ್, ಸುಗಂಧ ಮತ್ತು ಪ್ರಸಾಧನದಲ್ಲಿ ಸ್ನಾತಕೋತ್ತರ ಪದವಿ 4) ಬ್ರಿಟನ್‌ನ ಪ್ಲೈಮೌತ್ ವಿ.ವಿ- ಸುಗಂಧ ವಹಿವಾಟಿನಲ್ಲಿ 3 ವರ್ಷದ ಪದವಿ ಪ್ರತಿ ವರ್ಷ ಸಾವಿರಾರು ಹೊಸ ಸುಗಂಧಗಳು ಸಿದ್ಧಗೊಳ್ಳುತ್ತವೆ. ಒಬ್ಬ ಕ್ರಿಯಾಶೀಲ ವ್ಯಕ್ತಿ ಒಂದೇ ಬಾರಿಗೆ ನಾನಾ ಸುಗಂಧಗಳ ಮೇಲೆ ಕೆಲಸ ಮಾಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.