ಎನ್‌ಇಇಟಿಗೆ ಬೇಸ್ ತರಬೇತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡುವ ಬೆಂಗಳೂರು ಮೂಲದ ಪ್ರಮುಖ ತರಬೇತಿ ಸಂಸ್ತೆ ಬೇಸ್, 2013ನೇ ಸಾಲಿನ ಎನ್‌ಇಇಟಿ ಪರೀಕ್ಷೆಗಳಿಗೆ ನೀಡುವ ಹೊಸ ಕೇಂದ್ರೀಕೃತ ತರಬೇತಿ ಕಾರ್ಯಕ್ರಮವನ್ನು ಪ್ರಕಟಿಸಿದೆ. ಪ್ರಸ್ತುತ 12ನೇ ತರಗತಿ/ 2ನೇ ಪಿಯುಸಿ ಓದುತ್ತಿರುವ, 2013ನೇ ಸಾಲಿನಲ್ಲಿ ಎನ್‌ಇಇಟಿ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಎನ್‌ಇಇಟಿ ಇಂಟೆನ್ಸಿವ್ ಕ್ಲಾಸ್‌ರೂಂ ತರಬೇತಿ ಕಾರ್ಯಕ್ರಮವನ್ನು ರೂಪಿಸಿದೆ. ಬಹು ಆಯ್ಕೆ ಪ್ರಶ್ನೆಗಳನ್ನು ವಿಶ್ಲೇಷಿಸುವುದು, ಪ್ರಶ್ನೆಗಳಿಗೆ ಉತ್ತರಿಸುವ ಪರ್ಯಾಯ ಪದ್ಧತಿಗಳು, ಅಭ್ಯಾಸ ಪರೀಕ್ಷೆ ತೆಗೆದುಕೊಳ್ಳುವ ಮೂಲಕ ಪ್ರದರ್ಶನ ಸಾಮರ್ಥ್ಯವನ್ನು ಹೆಚ್ಚಿಸುವಂತಹ ವಿಷಯಗಳಿಗೆ ತರಬೇತಿಯಲ್ಲಿ ವಿಶೇಷ ಒತ್ತು ನೀಡಲಾಗುತ್ತದೆ. ವಾರದ ಕೊನೆಯ ರಜಾ ದಿನಗಳಲ್ಲಿ ನಡೆಯುವ ಈ ತರಬೇತಿ ಇದೇ ತಿಂಗಳ 17ರಿಂದ ಪ್ರಾರಂಭವಾಗಿ 2013ರ ಫೆಬ್ರುವರಿ ಕೊನೆಯವರೆಗೂ ಮುಂದುವರಿಯುತ್ತದೆ. ಏಪ್ರಿಲ್ 2013ರ ಬೋರ್ಡ್ ಪರೀಕ್ಷೆಗಳ ನಂತರ ವಿಶೇಷವಾದ ವ್ಯಾಪಕ ಅಭ್ಯಾಸ ತರಗತಿಗಳು ನಡೆಯುತ್ತವೆ. `ನಮ್ಮ ಈ ತರಬೇತಿಯು ವಿದ್ಯಾರ್ಥಿಗಳು ಪಠ್ಯಕ್ರಮದ ವಿಷಯಗಳನ್ನು ಸರಿಯಾಗಿ ಗ್ರಹಿಸಲು, ಈ ವಿಷಯಗಳ ಅವಶ್ಯಕ ಪ್ರಾಥಮಿಕ ಪರಿಕಲ್ಪನೆಗಳನ್ನು ಪುನರ್‌ಪರಿಶೀಲನೆ ಮಾಡಲು, ಅವರ ಗ್ರಹಿಕೆಯನ್ನು ಪರೀಕ್ಷಿಸುವ ಎಂಸಿಕ್ಯು ಪ್ರಶ್ನಾವಳಿಯನ್ನು ಉತ್ತರಿಸುವ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಹಲವಾರು ವರ್ಷಗಳ ಕಾಲ ಪಾಠ ಮಾಡಿದ ಅನುಭವವುಳ್ಳ ಹಾಗೂ ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರ ಮಟ್ಟದ ವಿವಿಧ ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ತರಬೇತುಗೊಳಿಸಿದ ಅನುಭವಿ ಶಿಕ್ಷಕ ವೃಂದ ಈ ತರಬೇತಿ ಕಾರ್ಯಕ್ರಮದ ಉದ್ದಕ್ಕೂ ಬೆನ್ನೆಲುಬಾಗಿ ಇರಲಿದೆ~ ಎಂದು ಬೇಸ್ ಸಂಸ್ಥೆಯ ನಿರ್ದೇಶಕ ವಲ್ಲೆಶ್ ಹೆರೂರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇ ಮೇಲ್ ವಿಳಾಸ @-. ಅಥವಾ 080- 4260 4600/ 95381 41504 ಸಂಖ್ಯೆಗಳಿಗೆ ಕರೆ ಮಾಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.