ನಕ್ಕು ನಲಿ:ಬಾಯಲ್ಲಿ ನೀರು ಬಾಯಲ್ಲಿ ನೀರು `ಒಂದು ಗುಲಾಬ್ ಜಾಮೂನಿಗೆ ಎಪ್ಪತ್ತೈದು ಪೈಸೆಯಾದರೆ ಹತ್ತು ಗುಲಾಬ್ ಜಾಮೂನುಗಳಿಗೆ ಎಷ್ಟು ಹಣ? ಬಾಯಿಯಿಂದಲೇ ಲೆಕ್ಕ ಮಾಡಿ ಹೇಳು~ ಎಂದರು ಮೇಷ್ಟ್ರು. `ಇಂಥ ಲೆಕ್ಕ ಹಾಕಲು ಹೇಳಬೇಡಿ ಸಾರ್, ಬಾಯಲ್ಲಿ ನೀರು ಬರುತ್ತೆ~ ಎಂದ ಆ ಶಿಷ್ಯ. *** ಶಿಕ್ಷಕ: ಒಬ್ಬನು ಒಂದು ಆಕಳನ್ನು 1200 ರೂಪಾಯಿಗೆ ಕೊಂಡು 980 ರೂಪಾಯಿಗೆ ಮಾರಿದರೆ ಅವನಿಗೆ ಆದ ಲಾಭ ಅಥವಾ ನಷ್ಟ ಎಷ್ಟು? ವಿದ್ಯಾರ್ಥಿ: ಅನುಭವದ ಲಾಭ, ಹಣದ ಹಾನಿ. *** ಶಿಕ್ಷಕ: ಮೊಘಲ್ ಅರಸರ ಬಗ್ಗೆ ನಿನಗೇನು ಗೊತ್ತಿದೆ? ವಿದ್ಯಾರ್ಥಿ: ಅವರೆಲ್ಲರೂ ಸತ್ತಿದ್ದಾರೆ ಸಾರ್! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.