ಪರೀಕ್ಷೆಗೆ ಸ್ಮಾರ್ಟ್ ಟಿಪ್ಸ್ ಪರೀಕ್ಷೆಯ ಹಿಂದಿನ ದಿನ ಪುನರಾವರ್ತಿತ ಪಾಠದ ಮುಖ್ಯಾಂಶ ಪಟ್ಟಿ ಮಾಡಿ. ನಾಳೆಗೆ ಯಾವ ಬಟ್ಟೆ ಧರಿಸಬೇಕೆಂದು ಇಂದೇ ತೀರ್ಮಾನಿಸಿ. ಉತ್ತಮವಾದ ಆಹಾರ ಸೇವಿಸಿ ಪ್ರಶಾಂತವಾಗಿ ನಿದ್ರಿಸಿ. ಅಲಾರಾಂನ್ನು ಏಳಬೇಕಾದ ಸಮಯಕ್ಕೆ ನಿಗದಿಪಡಿಸಿ. ಪರೀಕ್ಷೆ ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಉತ್ತಮವಾದ ಲಘು ಉಪಾಹಾರ ಸೇವಿಸಿ. ಹೊರಡುವ ಮುನ್ನ ಪರೀಕ್ಷೆಗೆ ಅಗತ್ಯವಾದ ಸಾಮಗ್ರಿಗಳು ಮತ್ತು ಪ್ರವೇಶಪತ್ರ ಇರುವುದನ್ನು ಖಚಿತಪಡಿಸಿಕೊಳ್ಳಿ. ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ತಲುಪಿ. ಪರೀಕ್ಷಾ ಕೊಠಡಿ ಸೇರುವ ಮುನ್ನ ಶುದ್ಧ ಗಾಳಿ ಸೇವಿಸಿ ನಿರ್ಭಯವಾಗಿ ಪ್ರವೇಶಿಸಿ. ಬಾಯಾರಿಕೆ ನೀಗಿಸಲು ಒಂದು ಪುಟ್ಟ ನೀರಿನ ಬಾಟಲಿ ತೆಗೆದುಕೊಂಡು ಹೋಗಿ. ಪರೀಕ್ಷಾ ಕೊಠಡಿ ಸೇರುವ ಮುನ್ನ ನಿಮ್ಮ ಜೇಬು ನೋಡಿಕೊಳ್ಳಿ. ಯಾವುದಾದರೂ ಚೀಟಿ ಇದ್ದರೆ ಹೊರಹಾಕಿ. ಪರೀಕ್ಷಾ ಕೊಠಡಿಯಲ್ಲಿ ಕುಳಿತುಕೊಳ್ಳುವ ಮುನ್ನ ಸ್ಥಳವನ್ನು ಪರೀಕ್ಷಿಸಿಕೊಳ್ಳಿ. ಆಸನ ಸರಿ ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ, ಅಡೆತಡೆಗಳಿದ್ದರೆ ಮೇಲ್ವಿಚಾರಕರಿಗೆ ತಿಳಿಸಿ. ನಿಮ್ಮ ಗಡಿಯಾರವನ್ನು ಕೈಗೆ ಕಟ್ಟಿಕೊಳ್ಳದೆ ಕಾಣುವ ಸ್ಥಳದಲ್ಲಿ ಇಟ್ಟು ವೀಕ್ಷಿಸುತ್ತಿರಿ. ಮೊದಲಿಗೆ ಸರಳ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಕಠಿಣ ಪ್ರಶ್ನೆಗಳಿಗೆ ಯೋಚಿಸಿ ಸಮಂಜಸ ಉತ್ತರ ಬರೆಯಿರಿ. - ವಾಕ್ಯ ರಚನೆ ಸಮಂಜಸವಾಗಿರಲಿ. - ಸೂಕ್ತ ಸ್ಥಳಗಳಲ್ಲಿ ಚಿಹ್ನೆಗಳನ್ನು ಬಳಸಿ. - ಸೂಕ್ತ ಪ್ರಶ್ನೆಗಳಿಗೆ ರೇಖಾ ಚಿತ್ರಗಳನ್ನು ಅಂದವಾಗಿ ರಚಿಸಿ. -ಪ್ರಶ್ನೆಗಳಿಗೆ ಉತ್ತರಿಸುವಾಗ ಉದಾಹರಣೆಗಳನ್ನು ನೀಡಿ. ಬರೆಯುವಾಗ ಸಾಲುಗಳ ನಡುವೆ ಅಂತರ ಇರಲಿ. ಪ್ರಮುಖ ವಿಚಾರಗಳಿಗೆ ಗೆರೆ ಎಳೆಯುವ ಮೂಲಕ ಮೌಲ್ಯಮಾಪಕರ ಗಮನ ಸೆಳೆಯಿರಿ. ಪತ್ರಲೇಖನ ಮತ್ತು ಪ್ರಬಂಧದಂತಹ ಪ್ರಶ್ನೆಗಳಿಗೆ ಉಪಶೀರ್ಷಿಕೆಗಳನ್ನು ಬರೆಯಿರಿ. ಅನವಶ್ಯಕವಾಗಿ ಮತ್ತು ನಿರ್ಲಕ್ಷ್ಯದಿಂದ ಉತ್ತರಗಳನ್ನು ಬರೆಯಬೇಡಿ. ಅಕ್ಷರಗಳ ಗಾತ್ರ ಒಂದೇ ರೀತಿ ಇರಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.