ಸುಡದ ದಾರ ಸಲಕರಣೆಗಳು: ಮೇಣದ ಬತ್ತಿ, ಕಬ್ಬಿಣದ ಮೊಳೆ/ ಕೀ, ದಪ್ಪನೆಯ ದಾರ, ವಿಧಾನ: 1) ಚಿತ್ರದಲ್ಲಿ ತೋರಿಸಿರುವಂತೆ ದಾರವನ್ನು ಮೇಣದ ಬತ್ತಿಯ ಜ್ವಾಲೆಗೆ ಹಿಡಿ. 2) ಒಂದು ಕಬ್ಬಿಣದ ಮೊಳೆ/ ಕೀ ಗೆ ಸ್ವಲ್ಪ ದಪ್ಪನಾದ ದಾರವನ್ನು ಗಟ್ಟಿಯಾಗಿ ಸುತ್ತು. 3) ಅದನ್ನು ಉರಿಯುತ್ತಿರುವ ಮೇಣದ ಬತ್ತಿಯ ಮೇಲೆ ಹಿಡಿದು ಸುಡು. ಪ್ರಶ್ನೆ: 1) ದಾರ ಸುಡುತ್ತಿದೆಯೇ? ಯಾಕೆ? 2) ದಾರ ಸುತ್ತಿದ ಕಬ್ಬಿಣದ ಮೊಳೆಯನ್ನು ಮೇಣದ ಬತ್ತಿಯ ಮೇಲೆ ಹಿಡಿದಾಗ ದಾರ ಸುಡುತ್ತದೆಯೇ? ಹೆಚ್ಚು ಹೊತ್ತು ಮೊಳೆಯನ್ನು ಮೇಣದ ಬತ್ತಿಯ ಮೇಲೆ ಹಿಡಿದಾಗ ಏನಾಗುತ್ತದೆ? ಯಾಕೆ? ಯಾವುದೇ ಒಂದು ವಸ್ತು ಸುಡಬೇಕಾದರೆ ಅದರ ಉಷ್ಣತೆಯು ಜ್ವಲನ ಬಿಂದುವನ್ನು ತಲುಪಬೇಕು. ಕೇವಲ ದಾರವನ್ನು ಜ್ವಾಲೆಗೆ ಹಿಡಿದಾಗ ಅದು ಸುಡುತ್ತದೆ. ದಾರ ಸುತ್ತಿದ ಮೊಳೆ/ ಕೀ ಅನ್ನು ಜ್ವಾಲೆಗೆ ಹಿಡಿದಾಗ ದಾರ ಹೀರಿಕೊಂಡ ಉಷ್ಣವು ಸ್ಥಳಾಂತರವಾಗುತ್ತದೆ. ಅಂದರೆ ಉಷ್ಣವು ಹೆಚ್ಚು ಬಿಸಿಯುಳ್ಳ ವಸ್ತುವಿನಿಂದ ಕಡಿಮೆ ಬಿಸಿಯುಳ್ಳ ವಸ್ತುವಿನ ಕಡೆಗೆ ಚಲಿಸುತ್ತದೆ. ಹೀಗಾಗಿ ಸ್ವಲ್ಪ ಹೊತ್ತು ದಾರ ಸುಡುವುದಿಲ್ಲ. ಬಹಳ ಹೊತ್ತು ದಾರವು ಜ್ವಾಲೆಯ ಮೇಲಿದ್ದರೆ ದಾರದ ಉಷ್ಣವು ಜ್ವಲನ ಬಿಂದುವನ್ನು ತಲುಪುತ್ತದೆ, ಆಗ ದಾರ ಸುಡುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.