ಉದ್ಯೋಗಾವಕಾಶ ಅಲ್ಲಲ್ಲಿ ಗ್ರಾಮ ಲೆಕ್ಕಿಗರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಸೇನಾಪಡೆ, ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಗ್ರಾಮ ಲೆಕ್ಕಿಗರು ಕಂದಾಯ ಇಲಾಖೆಯು ಹಾಸನ ಜಿಲ್ಲೆಯಲ್ಲಿ 46 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-2-2013. ಹುದ್ದೆ ಹೆಸರು: ಗ್ರಾಮ ಲೆಕ್ಕಿಗರು ವೇತನ ಶ್ರೇಣಿ: ರೂ 11,600- 21,000 ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಥವಾ ಸಿಬಿಎಸ್‌ಸಿ ನಡೆಸುವ 12ನೇ ತರಗತಿಯಲ್ಲಿ ಉತ್ತೀರ್ಣ ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 35 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 200 ಶುಲ್ಕ ಪಾವತಿಸಲು ಕೊನೆಯ ದಿನಾಂಕ: 2-3-2013 ಮಾಹಿತಿಗೆ ://.. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್.ಬಿ.ಐ.ನಲ್ಲಿ 1500 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-2-2013. ಹುದ್ದೆ ವಿವರ: ಪ್ರೊಬೇಷನರಿ ಆಫೀಸರ್ಸ್‌ ವೇತನ ಶ್ರೇಣಿ: ರೂ 14,500- 25,700 ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ. ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 200 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಲಿಖಿತ ಪರೀಕ್ಷೆ: 28-4-2013, ಮಾಹಿತಿಗೆ ... ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಎಚ್.ಎ.ಎಲ್‌ನಲ್ಲಿ 66 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-2-2013. ಹುದ್ದೆ ವಿವರ: ಫೈನಾನ್ಸ್ ಆಫೀಸರ್ಸ್‌ ಗ್ರೇಡ್-11 ವೇತನ ಶ್ರೇಣಿ: ರೂ 16,400- 40,500 ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ (10+2+3). ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮೂರು ವರ್ಷ ಅನುಭವ ಹೊಂದಿರಬೇಕು. ವಯೋಮಿತಿ: 40 ವರ್ಷ ದಾಟಿರಬಾರದು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 400 ಆಯ್ಕೆ ವಿಧಾನ: ಆನ್‌ಲೈನ್ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. * ಮಾರ್ಚ್ 30 ಹಾಗೂ 31ರಂದು ಪರೀಕ್ಷೆ ನಡೆಯುವ ಸಂಭವವಿದೆ. ಮಾಹಿತಿಗೆ ://.-. ಸೇನಾಪಡೆ 200 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-2-2013. ಹುದ್ದೆ ವಿವರ: ಶಾರ್ಟ್ ಸರ್ವೀಸ್ ಕಮಿಷನ್ಡ್ (ಎಸ್‌ಎಸ್‌ಸಿ) ಆಫೀಸರ್ (ಮೆಡಿಕಲ್ ಕಾರ್ಪ್ಸ್) ವೇತನ ಶ್ರೇಣಿ: ರೂ 15,600- 39,100 ವಿದ್ಯಾರ್ಹತೆ: ವೈದ್ಯಕೀಯ ಅರ್ಹತೆ. ಎಂ.ಡಿ/ ಎಂ.ಎಸ್/ ಎಂ.ಸಿ.ಎಚ್/ ಡಿ.ಎಂನಲ್ಲಿ ಸ್ನಾತಕೋತ್ತರ ಪದವಿ ವಯೋಮಿತಿ: 45 ವರ್ಷ ತಲುಪಿರಬಾರದು (31-12-2013ಕ್ಕೆ). ಅರ್ಜಿ ಶುಲ್ಕ: ರೂ 200 ಆಯ್ಕೆ ವಿಧಾನ: ಸಂದರ್ಶನ ವಿಳಾಸ: ಆಫೀಸ್ ಆಫ್ ದಿ ಡೈರೆಕ್ಟರ್ ಜನರಲ್ ಆರ್ಮ್ಡ ಫೋರ್ಸಸ್ ಮೆಡಿಕಲ್ ಸರ್ವೀಸಸ್ (ಡಿಜಿಎಎಫ್‌ಎಂಎಸ್)/ಡಿಜಿ-1ಎ, ಮಿನಿಸ್ಟ್ರಿ ಆಫ್ ಡಿಫೆನ್ಸ್, `ಎಂ' ಬ್ಲಾಕ್, ಮಿನಿಸ್ಟ್ರಿ ಆಫ್ ಡಿಫೆನ್ಸ್, ನವದೆಹಲಿ-110 001 ಮಾಹಿತಿಗೆ ://.. ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಬಿ.ಇ.ಸಿ.ಐ.ಎಲ್‌ನಲ್ಲಿ 94 ಹುದ್ದೆಗಳನ್ನು (ಗುತ್ತಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-2-2013. ಹುದ್ದೆ ವಿವರ: 1) ಕಂಟೆಂಟ್ ಆಡಿಟರ್-2 ಹುದ್ದೆ, ವೇತನ ಶ್ರೇಣಿ: ರೂ 2,400- 30,000. 2) ಸೀನಿಯರ್ ಮಾನಿಟರ್- 9 ಹುದ್ದೆ, ವೇತನ ಶ್ರೇಣಿ: 15,000- 20,160. 3) ಮಾನಿಟರ್-71 ಹುದ್ದೆ, ವೇತನ ಶ್ರೇಣಿ: 10,000- 15,000. 4) ಶಿಫ್ಟ್ ಮ್ಯಾನೇಜರ್- 1 ಹುದ್ದೆ, ವೇತನ ಶ್ರೇಣಿ: 12,000- 18,000. 5) ಎಕ್ಸಿಕ್ಯುಟಿವ್ ಅಸಿಸ್ಟೆಂಟ್-2 ಹುದ್ದೆ, ವೇತನ ಶ್ರೇಣಿ: 8,000- 13,000. 6) ಸ್ಟೆನೊಗ್ರಾಫರ್- 1 ಹುದ್ದೆ, 7) ಲಾಜಿಸ್ಟಿಕ್ ಅಸಿಸ್ಟೆಂಟ್- 1 ಹುದ್ದೆ, 8) ಎಲೆಕ್ಟ್ರೀಷಿಯನ್ ಕಮ್ ಪಂಪ್ ಆಪರೇಟರ್- 1 ಹುದ್ದೆ, ವೇತನ ಶ್ರೇಣಿ: 6,000- 10,000. 9) ಮೆಸೆಂಜರ್-6 ಹುದ್ದೆ,ವೇತನ ಶ್ರೇಣಿ: 5,000- 9,000. ಅರ್ಜಿ ಶುಲ್ಕ: ರೂ 200 ವಿಳಾಸ: ಬಿಇಸಿಎಲ್ ಕಾರ್ಪೊರೇಟ್ ಆಫೀಸ್, ಸಿ- 56, ಎ/ 17, ಸೆಕ್ಟರ್- 62, ನೊಯಿಡಾ- 201 301 (ಉತ್ತರ ಪ್ರದೇಶ) ವಿದ್ಯಾಭ್ಯಾಸ ಹಾಗೂ ಇತರ ಮಾಹಿತಿಗೆ ://. ಸೇನಾಪಡೆ 10 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-2-2013. ಹುದ್ದೆ ವಿವರ: ಶಾರ್ಟ್ ಸರ್ವೀಸ್ ಕಮಿಷನ್ಡ್ (ಎಸ್‌ಎಸ್‌ಸಿ) ಕಾನೂನು ಪದವೀಧರರು ವೇತನ ಶ್ರೇಣಿ: ರೂ 15,600- 39,100 ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಎಲ್.ಎಲ್.ಬಿ ಪದವಿ ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 27 ವರ್ಷ. ವಿಳಾಸ: ಡೈರೆಕ್ಟರ್ ಜನರಲ್ ಆಫ್ ರೆಕ್ರೂಟಿಂಗ್, ಆರ್.ಟಿ.ಜಿ ಜೆ.ಎ.ಜಿ ಎಂಟ್ರಿ ಎ.ಜಿ ಬ್ರಾಂಚ್ ಹೆಡ್‌ಕ್ವಾರ್ಟ್ರಸ್, ವೆಸ್ಟ್ ಬ್ಲಾಕ್-111, ಆರ್.ಕೆ.ಪುರಂ, ನವದೆಹಲಿ-110 066 ಮಾಹಿತಿಗೆ ://.. ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಬಿ.ಎಸ್.ಎಫ್‌ನಲ್ಲಿ 155 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ದಿನಾಂಕ 1- 2- 2013ರಿಂದ 15- 2- 2013ರವರೆಗೆ ವಾಕ್ ಇನ್ ಇಂಟರ್‌ವ್ಯೆ ನಡೆಯಲಿದೆ. ಹುದ್ದೆ ವಿವರ: 1) ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್: ಒಟ್ಟು ಹುದ್ದೆ-53, 2) ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್: ಒಟ್ಟು ಹುದ್ದೆ-102 ವಾಕ್ ಇನ್ ಇಂಟರ್‌ವ್ಯೆ ನಡೆಯುವ ಸ್ಥಳ ಹಾಗೂ ಇತರ ಮಾಹಿತಿಗೆ -://-.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.