ಬೆಂಕಿ ಬಿದ್ದರೂ ಸುಡದ ನೋಟು ಸಲಕರಣೆಗಳು: ಮದ್ಯಸಾರ (ಆಲ್ಕೊಹಾಲ್), ನೀರು, ಲೋಟ, ನೋಟು ಅಥವಾ ಕಾಗದ, ಬೆಂಕಿ ಪೆಟ್ಟಿಗೆ. ವಿಧಾನ: 1. ಸಮ ಪ್ರಮಾಣದಲ್ಲಿ ಮದ್ಯಸಾರ (ಆಲ್ಕೊಹಾಲ್- ಇ2 ಏ5 ಏ) ಹಾಗೂ ನೀರನ್ನು ಒಂದು ಲೋಟದಲ್ಲಿ ತೆಗೆದುಕೊಳ್ಳಿ. 2. ಅದರಲ್ಲಿ ಒಂದು ನೋಟನ್ನು ಸ್ವಲ್ಪ ಹೊತ್ತು ಇಡಿ. ಪ್ರಶ್ನೆ: ಒದ್ದೆಯಾದ ನೋಟನ್ನು ಹೊರತೆಗೆದು ಅದಕ್ಕೆ ಬೆಂಕಿ ಹಚ್ಚಿದರೆ ಏನಾಗುತ್ತದೆ? ಯಾಕೆ? ಉತ್ತರ: (ಈ ಪ್ರಯೋಗವನ್ನು ಮೊದಲು ಒಂದು ಕಾಗದದ ಮುಖಾಂತರ ಪ್ರಯತ್ನಿಸಿ) ನೋಟು ಬೆಂಕಿಗೆ ಆಹುತಿಯಾಗಿ ಉರಿಯುತ್ತದೆ. ಆದರೆ ಅದು ಉರಿಯುವುದು ಸ್ವಲ್ಪ ಸಮಯ ಮಾತ್ರ. ನಂತರ ನಿಮ್ಮ ನೋಟು ನಿಮ್ಮ ಕೈಯಲ್ಲಿ ಸುರಕ್ಷಿತ! ಮದ್ಯಸಾರ ಆವಿಶೀಲ ದ್ರವ. ಅದು ಸಾಮಾನ್ಯ ತಾಪಮಾನದಲ್ಲಿ ಆವಿಯಾಗುತ್ತದೆ. ಮದ್ಯಸಾರದ ಆವಿಯ ಜ್ವಲನ ತಾಪಮಾನ ಬಹಳ ಕಡಿಮೆ. ಹೀಗಾಗಿ ಅದು ಸರಳವಾಗಿ ಬೆಂಕಿಗೆ ಆಹುತಿಯಾಗುತ್ತದೆ. ಉರಿಯುತ್ತಿರುವ ನೋಟಿನ ತಾಪಮಾನವು ವಾತಾವರಣದಲ್ಲಿ ಲೀನವಾಗಿ ಬಿಡುತ್ತದೆ ಹಾಗೂ ಸ್ವಲ್ಪ ತಾಪಮಾನವು ಮದ್ಯಸಾರದ ಆವೀಕರಣದಲ್ಲೂ ಬಳಕೆಯಾಗುತ್ತದೆ. ಜೊತೆಗೆ ನೋಟಿನಲ್ಲಿರುವ ನೀರು, ನೋಟನ್ನು ಬೆಂಕಿಯಿಂದ ರಕ್ಷಿಸುತ್ತದೆ. ಹೀಗಾಗಿ ನೋಟು ಸುಡುವುದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.