ಉದ್ಯೋಗಾವಕಾಶಗಳು...ಅಲ್ಲಲ್ಲಿ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪೆನಿ, ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್, ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪೆನಿ ಆಫ್ ಇಂಡಿಯಾ ಎ.ಐ.ಸಿಯಲ್ಲಿ 42 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-5-2013. ಹುದ್ದೆ ವಿವರ: ಅಡ್ಮಿನಿಸ್ಟ್ರೇಟಿವ್ ಆಫೀಸರ್ ವೇತನ ಶ್ರೇಣಿ: ರೂ.17240-32640 ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 500 ಆಯ್ಕೆ ವಿಧಾನ: ಆನ್‌ಲೈನ್ ಹಾಗೂ ಲಿಖಿತ ಪರೀಕ್ಷೆ. ಆನ್‌ಲೈನ್ ಪರೀಕ್ಷೆ ದಿನಾಂಕ: 16-6-2013. ಲಿಖಿತ ಪರೀಕ್ಷೆ: 14-7-2013. * ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ. ಇತರ ಮಾಹಿತಿಗೆ ://.. ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್ ಡಿ.ಎಂ.ಆರ್.ಸಿನಲ್ಲಿ 370 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-5-2013. ಹುದ್ದೆ ವಿವರ: ನಾನ್-ಎಕ್ಸಿಕ್ಯೂಟೀವ್ಸ್ 1) ಸೀನಿಯರ್ ಸಿಸ್ಟಮ್ ಅನಾಲಿಸ್ಟ್-11 ಹುದ್ದೆ, ವೇತನ ಶ್ರೇಣಿ: ರೂ. 16000-30770, ವಿದ್ಯಾರ್ಹತೆ: ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ., ವಯೋಮಿತಿ: ಕನಿಷ್ಠ 20, ಗರಿಷ್ಠ 30 ವರ್ಷ. 2) ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್)-77 ಹುದ್ದೆ, 3) ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಾನಿಕ್ಸ್)-47 ಹುದ್ದೆ, 4) ಜೂನಿಯರ್ ಎಂಜಿನಿಯರ್ (ಮೆಕಾನಿಕಲ್)-13 ಹುದ್ದೆ, 5) ಜೂನಿಯರ್ ಎಂಜಿನಿಯರ್ (ಸಿವಿಲ್)-16 ಹುದ್ದೆ, ವೇತನ ಶ್ರೇಣಿ: ರೂ. 13500-25520, ವಿದ್ಯಾರ್ಹತೆ: ಸಂಬಂಧಪಟ್ಟ ವಿಷಯಗಳಲ್ಲಿ ಮೂರು ವರ್ಷದ ಎಂಜಿನಿಯರಿಂಗ್ ಡಿಪ್ಲೊಮಾ.ವಯೋಮಿತಿ: ಕನಿಷ್ಠ 18, ಗರಿಷ್ಠ 28 ವರ್ಷ. 6) ಮೇಂಟೇನರ್-206 ಹುದ್ದೆ, ವೇತನ ಶ್ರೇಣಿ: ರೂ. 8000-14140,ವಿದ್ಯಾರ್ಹತೆ: ಐಟಿಐ, ವಯೋಮಿತಿ: ಕನಿಷ್ಠ 25, ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ. ಅರ್ಜಿ ಶುಲ್ಕ: ರೂ. 375ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ರಿಜಿಸ್ಟ್ರೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿ ಪೋಸ್ಟ್ ಮೂಲಕ ಕಳುಹಿಸಲು ಕೊನೆಯ ದಿನಾಂಕ: 28-5-2013.ವಿಳಾಸ: ಡಿಎಂಆರ್‌ಸಿ ಲಿಮಿಟೆಡ್, ಪೋಸ್ಟ್ ಬ್ಯಾಗ್ ನಂ.9, ಲೋಧಿ ರಸ್ತೆ ಪೋಸ್ಟ್ ಆಫೀಸ್, ನವದೆಹಲಿ-110003 ಇತರ ಮಾಹಿತಿಗೆ://.. ಅಥವಾ ://.. ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಬಿ.ಎಸ್.ಎಫ್‌ನಲ್ಲಿ 37 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-5-2013. ಹುದ್ದೆ ವಿವರ: 1) ಸಬ್ ಇನ್‌ಸ್ಟೆಕ್ಟರ್ (ಆಟೊ-ಎಲೆಕ್ಟ್ರಿಸಿಯನ್)-4 ಹುದ್ದೆ, ವೇತನ ಶ್ರೇಣಿ: ರೂ.9300-34800, 2) ಕಾನ್‌ಸ್ಟೆಬಲ್ (ಆಟೊ ಎಲೆಕ್ಟ್ರಿಸಿಯನ್)-14 ಹುದ್ದೆ, 3) ಕಾನ್‌ಸ್ಟೆಬಲ್ (ಬ್ಲ್ಯಾಕ್ ಸ್ಮಿತ್ ಅಥವಾ ಟಿನ್ ಸ್ಮಿತ್)-7 ಹುದ್ದೆ, 4) ಕಾನ್‌ಸ್ಟೆಬಲ್ (ಫಿಟ್ಟರ್)-6 ಹುದ್ದೆ, 5) ಕಾನ್‌ಸ್ಟೆಬಲ್ (ವಾಲ್ಕನೈಸರ್/ಆಪರೇಟರ್ ಟೈರ್ ರಿಪೇರ್ ಪ್ಲಾಂಟ್)-4 ಹುದ್ದೆ, 6) ಕಾನ್‌ಸ್ಟೆಬಲ್ (ಅಪ್‌ಹೋಲ್ಸ್‌ಟರ್)-1 ಹುದ್ದೆ, 7) ಕಾನ್‌ಸ್ಟೆಬಲ್ (ಸ್ಟೋರ್ ಕೀಪರ್)-1 ಹುದ್ದೆ. ವೇತನ ಶ್ರೇಣಿ: ರೂ.5200-20200. ವಯೋಮಿತಿ: ಸಬ್ ಇನ್‌ಸ್ಟೆಕ್ಟರ್: 20-25 ವರ್ಷ, ಕಾನ್‌ಸ್ಟೆಬಲ್: 18-25 ವರ್ಷ. ಅರ್ಜಿ ಶುಲ್ಕ: ರೂ. 50 ವಿಳಾಸ: ದಿ ಇನ್‌ಸ್ಟೆಕ್ಟರ್ ಜನರಲ್, ಬಿಎಸ್‌ಎಫ್, ಬೆಂಗಳೂರು, ಯಲಹಂಕ ಪೋಸ್ಟ್, ಬೆಂಗಳೂರು, ಕರ್ನಾಟಕ-560064 ಇತರ ಮಾಹಿತಿಗೆ ://.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.