ತಿಳಿಯಬಲ್ಲಿರಾ ಮರದ ಎತ್ತರ? ಸಾಮಗ್ರಿ: ಮೀಟರ್ ಸ್ಕೇಲ್, ಕೋಲು ವಿಧಾನ 1. ಹಗಲು 8-10 ಗಂಟೆ ಅಥವಾ ಸಂಜೆ 3-5 ಗಂಟೆ ವೇಳೆಗೆ ಈ ಚಟುವಟಿಕೆ ಮಾಡಬೇಕು. 2. ಒಂದು ಮೀಟರ್ ಉದ್ದ ಇರುವ ನೇರವಾದ ಕೋಲನ್ನು ತೆಗೆದುಕೊಳ್ಳಿ. 3. ನೀವು ಅಳೆಯಬೇಕೆಂದಿರುವ ಮರದ ಕಾಂಡದ ನೇರಕ್ಕೆ ಆ ಕೋಲನ್ನು ಬಿಸಿಲಿನಲ್ಲಿ ನೆಟ್ಟಗೆ ನಿಲ್ಲಿಸಿ. 4. ಕೋಲಿನ ನೆರಳನ್ನು ನಿಮ್ಮಲ್ಲಿರುವ ಸ್ಕೇಲ್‌ನಿಂದ ಅಳೆದು ನಮೂದಿಸಿ. 5. ಅನಂತರ ಸ್ಕೇಲ್ ಮೂಲಕ ಮರದ ಕಾಂಡದಿಂದ ಅದರ ಒಟ್ಟು ನೆರಳನ್ನು ಅಳತೆ ಮಾಡಿ. ಪ್ರಶ್ನೆ: ಮರ ಹತ್ತದೆ ಮರದ ಎತ್ತರವನ್ನು ಕಂಡು ಹಿಡಿಯಲು ಸಾಧ್ಯವೇ? ಹೇಗೆ? ಉತ್ತರ `ಅ.ಬ.' ಒಂದು ಮೀಟರ್ ಉದ್ದವಿರುವ ಕೋಲು. `ಬ.ಕ.' ಕೋಲಿನ ನೆರಳು. ಅದನ್ನು ಸ್ಕೇಲಿನಿಂದ ಅಳೆದಾಗ 1.5 ಮೀಟರ್ ನೆರಳಿದೆ. ಈಗ ಕಾಂಡ ಹೊರಟ ಸ್ಥಳದಿಂದ ಮರದ ಒಟ್ಟು ನೆರಳನ್ನು ಸ್ಕೇಲಿನಿಂದ ಅಳೆಯುತ್ತಾ ಹೋದಾಗ ಅದರ ಉದ್ದ (ಬಿ.ಸಿ.) 25 ಮೀಟರ್. ಅಂದರೆ ಮರದ ಎತ್ತರ (ಎ.ಬಿ.) 16.6 ಮೀಟರ್. ಅ.ಬ. = 1 ಮೀಟರ್ ಬಿ.ಸಿ. = 25 ಮೀಟರ್ ಬ.ಕ. = 1.5 ಮೀಟರ್ ಎ.ಬಿ. = 16.6 ಮೀಟರ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.