ಐಐಟಿ ಪ್ರವೇಶಕ್ಕೆ ತರಬೇತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಬೆಂಗಳೂರು ಮೂಲದ ಪ್ರಮುಖ ತರಬೇತಿ ಸಂಸ್ಥೆ ಬೇಸ್, ಐಐಟಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವ `ಐಐಟಿ- ಜೆಇಇ ಅಚೀವರ್' ಎನ್ನುವ ವಸತಿಸಹಿತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಐಐಟಿಗಳು, ಎನ್‌ಐಟಿಗಳು ಹಾಗೂ ಭಾರತದ ಇತರ ಶ್ರೇಷ್ಠ ಎಂಜಿನಿಯರಿಂಗ್ ಸಂಸ್ಥೆಗಳಿಗೆ ಪ್ರವೇಶ ಬಯಸುವ +2 ವಿದ್ಯಾರ್ಥಿಗಳಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾದ ಎರಡು ವರ್ಷ ಕಾಲಾವಧಿಯ ತರಬೇತಿ ಕಾರ್ಯಕ್ರಮ ಇದು. ಬೆಂಗಳೂರು, ಮಂಗಳೂರು, ಧಾರವಾಡ, ಗುಲ್ಬರ್ಗ, ಬೆಳಗಾವಿ, ಶಿವಮೊಗ್ಗ, ಉಡುಪಿ, ಮೈಸೂರು ಹಾಗೂ ದಾವಣಗೆರೆಯ ವಿವಿಧ ಕೇಂದ್ರಗಳಲ್ಲಿ, ಬರುವ ಏಪ್ರಿಲ್ 14ರಂದು ಈ ತರಬೇತಿಗಾಗಿ ಆಯ್ಕೆ ಪರೀಕ್ಷೆ ನಡೆಯಲಿದೆ. 2012-13ನೇ ಸಾಲಿನಲ್ಲಿ ಹತ್ತನೇ ತರಗತಿ ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಆಯ್ಕೆ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. 11 ಮತ್ತು 12ನೇ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಸಂಯುಕ್ತ ತರಬೇತಿಯನ್ನು ನೀಡಲು ಬೇಸ್ ಮಂಚೂಣಿಯಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಹಾಗೂ +2 ಪಾರಂಪರಿಕ ಶಿಕ್ಷಣ ಒಂದೇ ಸೂರಿನಡಿ ಸಂಪೂರ್ಣವಾಗಿ ಏಕಕಾಲದಲ್ಲಿ ಸಿಗುವಂತೆ ಈ ಕೋರ್ಸನ್ನು ರೂಪಿಸಲಾಗಿದೆ. `ಈ ವಸತಿ ಸಹಿತ ತರಬೇತಿ ಕಾರ್ಯಕ್ರಮವನ್ನು ಆಯ್ದುಕೊಳ್ಳುವ ಪುರುಷ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ, ವಸತಿ, ಊಟ ಹಾಗೂ ಇತರ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ' ಎಂದು ಬೇಸ್ ಸಂಸ್ಥೆಯ ನಿರ್ದೇಶಕ ವಲ್ಲೀಶ್ ಹೆರೂರ್ ತಿಳಿಸಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ @-. ಅಥವಾ ದೂರವಾಣಿ 080 - 4260 4600 / 9538141504 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.