ಸಂಗದಿಂದ ತಂಪು ಸಲಕರಣೆಗಳು: ಗಾಜಿನ ಲೋಟ, ವಿನೆಗರ್, ಚಮಚ, ಉಷ್ಣತಾಮಾಪಕ, ಅಡುಗೆ ಸೋಡಾ. ವಿಧಾನ: 1. ಒಂದು ಗಾಜಿನ ಲೋಟದಲ್ಲಿ 8-10 ಚಮಚಗಳಷ್ಟು ವಿನೆಗರ್ (, CH3CO2H+ ನೀರು) ತೆಗೆದುಕೊಳ್ಳಿ. ಉಷ್ಣತಾಮಾಪಕದಿಂದ ಅದರ ತಾಪಮಾನವನ್ನು ಬರೆದಿಟ್ಟುಕೊಳ್ಳಿ. 2. ಅನಂತರ ಅದಕ್ಕೆ ಸ್ವಲ್ಪ ಅಡುಗೆ ಸೋಡಾ ಹಾಕಿ. ಕೆಲ ಸಮಯದ ನಂತರ ಮತ್ತೆ ತಾಪಮಾನವನ್ನು ಪರೀಕ್ಷಿಸಿ. ಪ್ರಶ್ನೆ 1. ವಿನೆಗರ್‌ನ ತಾಪಮಾನದಲ್ಲಾದ ಬದಲಾವಣೆಗೆ ಕಾರಣ ತಿಳಿಸಿ. 2. ಈ ಕ್ರಿಯೆಗೆ ಏನೆನ್ನುತ್ತಾರೆ? 3. ವಿನೆಗರ್‌ನ ಶಾಸ್ತ್ರೀಯ ಹೆಸರೇನು? 4. ಅಡುಗೆ ಸೋಡಾವನ್ನು ( ) ಮತ್ತೆ ಯಾವ ಯಾವ ಹೆಸರುಗಳಿಂದ ಕರೆಯುತ್ತಾರೆ? 5. ಅಡುಗೆ ಸೋಡಾದ ಅಣು ಸೂತ್ರವೇನು? ಉತ್ತರ 1. ಕೆಲವು ರಾಸಾಯನಿಕ ಕ್ರಿಯೆಗಳು ಜರುಗಬೇಕಾದರೆ ತಾಪಮಾನದ ಅವಶ್ಯಕತೆ ಇರುತ್ತದೆ. ವಿನೆಗರ್ ಅಡುಗೆ ಸೋಡಾದ ಜೊತೆ ಸಂಯೋಗ ಹೊಂದಿ ಕಾರ್ಬನ್ ಡೈಆಕ್ಸೈಡ್ ಹಾಗೂ ನೀರು ಉತ್ಪತ್ತಿಯಾಗುತ್ತದೆ. ಈ ಕ್ರಿಯೆಯಲ್ಲಿ ವಿನೆಗರ್‌ನಿಂದ ಸ್ವಲ್ಪ ತಾಪಮಾನ ಹೀರಿಕೊಳ್ಳುತ್ತದೆ. ಹೀಗಾಗಿ 4-5 ಡಿಗ್ರಿ ಸೆಲ್ಷಿಯಸ್‌ದಷ್ಟು ತಾಪಮಾನ ಕಡಿಮೆಯಾಗುತ್ತದೆ. 2. ಈ ಕ್ರಿಯೆಗೆ ಅಂತರುಷ್ಣಕ ಕ್ರಿಯೆ ಎನ್ನುತ್ತಾರೆ. 3. ಅಸೆಟಿಕ್ ಆಮ್ಲ ( )/ ಎಥೆನಾಯಿಕ್ ಆಮ್ಲ ( ) 4. ಸೋಡಾ, ಬ್ರೆಡ್ ಸೋಡಾ, ಸೋಡಿಯಂ ಬೈಕಾರ್ಬೊನೇಟ್, ಸೋಡಿಯಂ ಹೈಡ್ರೋಜಿನ್ ಕಾರ್ಬೊನೇಟ್, ಬೈಕಾರ್ಬ್ ಇತ್ಯಾದಿ. 5. NaHCO3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.