ಹತ್ತಿರ ಹತ್ತಿರ ಬಾ ಪ್ರಶ್ನೆ: ಕಾಗದಗಳ ಮಧ್ಯೆ ಜೋರಾಗಿ ಊದಿದಾಗ ಕಾಗದಗಳು ಯಾವ ಕಡೆ ಹೋಗುತ್ತವೆ, ಯಾಕೆ? ಉತ್ತರ: ನಾವು ಯೋಚಿಸಿದಂತೆ ಕಾಗದಗಳು ಹೊರಗೆ ಸರಿಯದೆ ಒಳಗಡೆ ಹತ್ತಿರಕ್ಕೆ ಬರುತ್ತವೆ. ಬರ್ನಾಲಿ ತತ್ವದ ಪ್ರಕಾರ, ಪ್ರವಾಹಿಯ ಚಲನೆಯು ಹೆಚ್ಚಿದ್ದಾಗ ಅದರ ಒತ್ತಡ ಕಡಿಮೆ ಇರುತ್ತದೆ. ಅಂದರೆ, ಕಾಗದಗಳ ಮಧ್ಯೆ ಊದಿದಾಗ ಅಲ್ಲಿ ಒತ್ತಡ ಕಡಿಮೆಯಾಗುತ್ತದೆ. ಆದರೆ ವಾತಾವರಣದ ಒತ್ತಡ ಹೆಚ್ಚಿರುವುದರಿಂದ ಅದು ಕಾಗದಗಳನ್ನು ಒಳಗೆ ತಳ್ಳುತ್ತದೆ. ಹೀಗಾಗಿ ಅವು ಹತ್ತಿರ ಹತ್ತಿರ ಬರುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.