ಉದ್ಯೋಗಾವಕಾಶ ಅಲ್ಲಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್, ಕೇಂದ್ರ ಲೋಕಸೇವಾ ಆಯೋಗ, ವೆಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ-1 ಎಸ್.ಎ.ಐ.ಎಲ್.ನಲ್ಲಿ 640 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3-4-2013. ಹುದ್ದೆ ವಿವರ: 1) ಮ್ಯಾನೇಜ್‌ಮೆಂಟ್ ಟ್ರೈನಿ (ಟೆಕ್ನಿಕಲ್): ಹುದ್ದೆ-558 ವಿದ್ಯಾರ್ಹತೆ: ಶೇಕಡಾ 65 ಅಂಕಗಳೊಂದಿಗೆ ಎಂಜಿನಿಯರಿಂಗ್‌ನಲ್ಲಿ ಪದವಿ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಮೆಟಲರ್ಜಿ, ಇ ಅಂಡ್ ಟಿ, ಇನ್‌ಸ್ಟ್ರುಮೆಂಟೇಷನ್, ಸೆರಾಮಿಕ್ಸ್, ಸಿವಿಲ್, ಕಂಪ್ಯೂಟರ್ ಸೈನ್ಸ್ (ಐಟಿ), ಮೈನಿಂಗ್ ಅಂಡ್ ಕೆಮಿಕಲ್ ಎಂಜಿನಿಯರಿಂಗ್. 2) ಮ್ಯಾನೇಜ್‌ಮೆಂಟ್ ಟ್ರೈನೀಸ್ (ಅಡ್ಮಿನಿಸ್ಟ್ರೇಷನ್- ಎಚ್.ಆರ್, ಮಾರ್ಕೆಟಿಂಗ್, ಫೈನಾನ್ಸ್, ಮೆಟೀರಿಯಲ್ಸ್): ಹುದ್ದೆ- 82 ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಪದವಿ ಹಾಗೂ ಎಂಬಿಎ/ ಪಿ.ಜಿ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ ವೇತನ ಶ್ರೇಣಿ: ರೂ 20,600- 46,550 ವಯೋಮಿತಿ: 30 ವರ್ಷ ದಾಟಿರಬಾರದು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ/ ಗುಂಪು ಚರ್ಚೆ ಇತರ ಮಾಹಿತಿಗೆ ://../ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ-2 ಎಸ್.ಎ.ಐ.ಎಲ್.ನಲ್ಲಿ (ಬೊಕಾರೊ ಸ್ಟೀಲ್ ಪ್ಲಾಂಟ್) 402 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-3-2013. ಹುದ್ದೆ ವಿವರ: ಆಪರೇಟರ್ ಕಮ್ ಟೆಕ್ನೀಷಿಯನ್ ಟ್ರೈನಿ ವಿದ್ಯಾರ್ಹತೆ: ಡಿಪ್ಲೊಮಾ ಎಂಜಿನಿಯರಿಂಗ್ ವೇತನ: ಮೊದಲ ವರ್ಷದ ಸ್ಟೈಪೆಂಡ್: ರೂ 10,700. ವಯೋಮಿತಿ: 28 ವರ್ಷ ದಾಟಿರಬಾರದು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 250 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಇತರ ಮಾಹಿತಿಗೆ ://.. ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಒ.ಎನ್.ಜಿ.ಸಿ.ಯಲ್ಲಿ 463 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-4-2013. ಹುದ್ದೆ ವಿವರ: ಅಸಿಸ್ಟೆಂಟ್ ಟೆಕ್ನೀಷಿಯನ್ಸ್, ಜೂನಿಯರ್ ಅಸಿಸ್ಟೆಂಟ್ ಟೆಕ್ನೀಷಿಯನ್ಸ್ ವಿದ್ಯಾಭ್ಯಾಸ: ಸಂಬಂಧಪಟ್ಟ ವಿಷಯಗಳಲ್ಲಿ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ವಯೋಮಿತಿ: ಕನಿಷ್ಠ 18, ಗರಿಷ್ಠ 30. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 300 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಟ್ರೇಡ್ ಟೆಸ್ಟ್ ಹಾಗೂ ಸಂದರ್ಶನ * ಲಿಖಿತ ಪರೀಕ್ಷೆ: 28-4-2013 * ಆನ್‌ಲೈನ್‌ನಲ್ಲಿ ಅರ್ಜಿ ಸ್ಲ್ಲಲಿಸಿದ ಮೇಲೆ ರಿಜಿಸ್ಟ್ರೇಷನ್ ಸ್ಲಿಪ್ ಕಳುಹಿಸಲು ಕೊನೆಯ ದಿನ: 12-4-2013 ವಿಳಾಸ: ದಿ ಅಡ್ವಟೈಜರ್ (ಒಎನ್‌ಜಿಸಿ), ಪೋಸ್ಟ್ ಬಾಕ್ಸ್ ನಂ- 9248, ನಗರ್ ಹೆಡ್ ಪೋಸ್ಟ್ ಆಫೀಸ್, ದೆಹಲಿ-110 051 ಇತರ ಮಾಹಿತಿಗೆ ://.. ಕೇಂದ್ರ ಲೋಕಸೇವಾ ಆಯೋಗ ಯು.ಪಿ.ಎಸ್.ಸಿ. ಯಲ್ಲಿ ಸುಮಾರು 91 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-3-2013. ಹುದ್ದೆ ವಿವರ: 1) ಮಾರ್ಕೆಂಟಿಂಗ್ ಆಫೀಸರ್ (ಗ್ರೇಡ್1) (ಸರ್ವೆ, ಟ್ರೈನಿಂಗ್ ಅಂಡ್ ಕ್ವಾಲಿಟಿ ಕಂಟ್ರೋಲ್): 69 ಹುದ್ದೆ, 2) ಜೂನಿಯರ್ ರಿಸರ್ಚ್ ಆಫೀಸರ್ (ಇಂಡೊನೇಷಿಯನ್): 1 ಹುದ್ದೆ, 3) ಜೂನಿಯರ್ ರಿಸರ್ಚ್ ಆಫೀಸರ್ (ಚೈನೀಸ್): 2 ಹುದ್ದೆ, 4) ಅಡ್ಮಿನಿಸ್ಟ್ರೇಟಿವ್ ಆಫೀಸರ್ ಗ್ರೇಡ್ 11: 5 ಹುದ್ದೆ, 5) ಕೆಮಿಕಲ್ ಎಕ್ಸಾಮಿನರ್ ಗ್ರೇಡ್ 11: 3 ಹುದ್ದೆ, 6) ಇನ್ವೆಸ್ಟಿಗೇಟರ್ ಗ್ರೇಡ್ 1: 8 ಹುದ್ದೆ, 7) ಅಸಿಸ್ಟೆಂಟ್ ಟೌ ಅಂಡ್ ಕಂಟ್ರಿ ಪ್ಲಾನರ್: 3 ಹುದ್ದೆ. ವಯೋಮಿತಿ: 35 ವರ್ಷ ದಾಟಿರಬಾರದು (5, 7ನೇ ಕ್ರಮಾಂಕದ ಹುದ್ದೆಗೆ), ಇನ್ನುಳಿದ ಹುದ್ದೆಗಳಿಗೆ 30 ವರ್ಷ. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 25 ಆಯ್ಕೆ ವಿಧಾನ: ಸಂದರ್ಶನ * ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನ: 11-4-2013 ವಿಳಾಸ: ಜಂಟಿ ನಿರ್ದೇಶಕರು (ನೇಮಕಾತಿ), ಕೇಂದ್ರ ಲೋಕಸೇವಾ ಆಯೋಗ, ಧೋಲ್‌ಪುರ ಹೌಸ್, ಶಹಜಹಾನ್ ರಸ್ತೆ, ನವದೆಹಲಿ. ಹೆಚ್ಚಿನ ಮಾಹಿತಿಗೆ ://... ವೆಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್ ಡಬ್ಲ್ಯು.ಸಿ.ಎಲ್.ನಲ್ಲಿ 242 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-4-2013. ಹುದ್ದೆ ವಿವರ: 1) ಮೈನಿಂಗ್ ಸಿರ್ದಾರ್/ ಶಾರ್ಟ್ ಫೈರರ್, ಟಿ ಅಂಡ್ ಎಸ್ ಗ್ರೇಡ್- ಸಿ- 215 ಹುದ್ದೆ, ವೇತನ: ರೂ 19,035, ವಿದ್ಯಾರ್ಹತೆ: ಮೈನಿಂಗ್ ಸಿರ್ದಾರ್ ಸರ್ಟಿಫಿಕೇಟ್ ಅಥವಾ ಡಿಪ್ಲೊಮಾ ಇನ್ ಮೈನಿಂಗ್ ಅಂಡ್ ಮೈನ್ ಸರ್ವೇಯಿಂಗ್, ಓವರ್‌ಮನ್ ಕಾಂಪಿಟೆನ್ಸಿ ಸರ್ಟಿಫಿಕೇಟ್. 2) ಸರ್ವೇಯರ್ (ಮೈನಿಂಗ್) ಟಿ ಅಂಡ್ ಎಸ್ ಗ್ರೇಡ್ ಬಿ-27 ಹುದ್ದೆ, ವೇತನ: ರೂ 20,552. ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್, ಸರ್ವೇ ಸರ್ಟಿಫಿಕೇಟ್ ಆಫ್ ಕಾಂಪಿಟೆನ್ಸಿ ವಯೋಮಿತಿ: ಕನಿಷ್ಠ 18, ಗರಿಷ್ಠ 30. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿಳಾಸ: ಜನರಲ್ ಮ್ಯಾನೇಜರ್ (ಪಿ/ ಐಆರ್), ವೆಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್, ಕೋಲ್ ಎಸ್ಟೇಟ್, ಸಿವಿಲ್ ಲೈನ್ಸ್, ನಾಗಪುರ- 440 001 ಇತರ ಮಾಹಿತಿಗೆ ://... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.