ಗಾಳಿಯನ್ನು ಸ್ಥಳಾಂತರಿಸಬಹುದೇ? ಸಾಮಗ್ರಿಗಳು: ಬಕೆಟ್, ಎರಡು ಲೋಟಗಳು, ನೀರು. ವಿಧಾನ: 1. ಒಂದು ಬಕೆಟ್‌ನಲ್ಲಿ ಮುಕ್ಕಾಲು ಭಾಗ ನೀರು ತೆಗೆದುಕೊಳ್ಳಿ. 2. ಒಂದೇ ಅಳತೆಯ ಎರಡು ಗಾಜಿನ ಅಥವಾ ಪ್ಲಾಸ್ಟಿಕ್ ಲೋಟಗಳನ್ನು ತೆಗೆದುಕೊಂಡು ಅವುಗಳಿಗೆ `ಅ' ಮತ್ತು `ಬ' ಎಂದು ಹೆಸರಿಸಿ. 3. `ಬ'ದಲ್ಲಿ ಪೂರ್ಣ ನೀರು ತುಂಬಿ ಹಾಗೂ `ಅ' ಖಾಲಿ ಲೋಟವನ್ನು ನೀರಿನಲ್ಲಿ ತಿರುವು ಮುರುವು ಮಾಡಿ ಚಿತ್ರದಲ್ಲಿ ತೋರಿಸಿದಂತೆ ಮುಳುಗಿಸಿ ಹಿಡಿದುಕೊಳ್ಳಿ. 4. `ಅ' ಲೋಟವನ್ನು `ಬ' ಲೋಟದ ಕಡೆಗೆ ಓರೆ ಮಾಡುತ್ತಾ ಹೋಗಿ. ಪ್ರಶ್ನೆ 1. `ಅ' ಲೋಟವನ್ನು ಓರೆ ಮಾಡುತ್ತಾ ಹೋದಾಗ ಏನಾಯಿತು? ಯಾಕೆ? 2. `ಅ' ಲೋಟವನ್ನು `ಬ'ದ ಕೆಳಗೆ ತಂದಾಗ ಏನಾಯಿತು? ಯಾಕೆ? 3. ಗುಳ್ಳೆಗಳು ನೀರಿನಲ್ಲಿ ಮೇಲೆಯೇ ಯಾಕೆ ಹೋಗುತ್ತವೆ? ಉತ್ತರ 1. `ಅ' ಲೋಟದಲ್ಲಿ ಗಾಳಿ ಇದ್ದು, ಓರೆ ಮಾಡುತ್ತಾ ಹೋದಾಗ, ಗಾಳಿಯು ಗುಳ್ಳೆಗಳ ರೂಪದಲ್ಲಿ ಹೊರಗೆ ಹೋಗಿ ಅದರ ಸ್ಥಳದಲ್ಲಿ ನೀರು ತುಂಬಿಕೊಳ್ಳುತ್ತದೆ. 2. `ಅ'ದಲ್ಲಿಯ ಗಾಳಿ `ಬ'ದಲ್ಲಿ ಸೇರಿ `ಬ'ದಲ್ಲಿಯ ನೀರು ಹೊರಹೋಗುತ್ತದೆ. 3. ಗಾಳಿಯ ಗುಳ್ಳೆಗಳ ಸಾಂದ್ರತೆ ನೀರಿಗಿಂತ ಬಹಳ ಕಡಿಮೆ ಇರುವುದರಿಂದ ಅವು ಮೇಲೇಳುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.