ಉದ್ಯೋಗಾವಕಾಶ ಅಲ್ಲಲ್ಲಿ... ಕೇಂದ್ರ ಲೋಕಸೇವಾ ಆಯೋಗ ಯು.ಪಿ.ಎಸ್.ಸಿ.ಯು ಸೆಂಟ್ರಲ್ ಆರ್ಮ್ಡ ಪೊಲೀಸ್ ಫೋರ್ಸ್‌ನಲ್ಲಿ 424 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-8-2013. ಹುದ್ದೆ ವಿವರ: ಅಸಿಸ್ಟೆಂಟ್ ಕಮಾಂಡೆಂಟ್ (ಗುಂಪು ಎ) ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್‌ಎಫ್)-110, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್)-138, ಸೆಂಟ್ರಲ್ ಇಂಡಸ್ಟ್ರೀಸ್ ಸೆಕ್ಯೂರಿಟಿ ಫೋರ್ಸ್ (ಸಿಎಸ್‌ಎಸ್‌ಎಫ್)-56, ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ)-120. ವೇತನ ಶ್ರೇಣಿ: 15,600- 39,100 ವಿದ್ಯಾರ್ಹತೆ: ಪದವಿ ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 200. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ * ಲಿಖಿತ ಪರೀಕ್ಷೆ 20-10-2013. ಬೆಂಗಳೂರು, ಧಾರವಾಡದಲ್ಲೂ ಪರೀಕ್ಷೆ ನಡೆಯಲಿದೆ. ವಿಳಾಸ: ಜಂಟಿ ನಿರ್ದೇಶಕರು (ನೇಮಕಾತಿ), ಕೇಂದ್ರ ಲೋಕಸೇವಾ ಆಯೋಗ, ಧೋಲ್‌ಪುರ ಹೌಸ್, ಶಹಜಹಾನ್ ರಸ್ತೆ, ನವದೆಹಲಿ. ಹೆಚ್ಚಿನ ಮಾಹಿತಿಗೆ ://... ಎನ್.ಪಿ.ಸಿ.ಐ.ಎಲ್ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್.ಪಿ.ಸಿ.ಐ.ಎಲ್) ದಲ್ಲಿ 24 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-8-2013. ಹುದ್ದೆ ವಿವರ: 1) ಸೈಂಟಿಫಿಕ್ ಅಸಿಸ್ಟೆಂಟ್/ ಬಿ (ಸಿವಿಲ್)- 4 ಹುದ್ದೆ, ವಯೋಮಿತಿ: ಕನಿಷ್ಠ 18, ಗರಿಷ್ಠ 30. ವೇತನ ಶ್ರೇಣಿ: ರೂ 9,300- 34,800. 2) ಸ್ಟೈಫೆಂಡರಿ ಟ್ರೈನೀಸ್ ಟೆಕ್ನೀಷಿಯನ್: 14 ಹುದ್ದೆ, ವಯೋಮಿತಿ. ಕನಿಷ್ಠ 18, ಗರಿಷ್ಠ 24. 3) ಟೆಕ್ನೀಷಿಯನ್ಸ್/ ಬಿ: 6 ಹುದ್ದೆ, ವಯೋಮಿತಿ: ಕನಿಷ್ಠ 18, ಗರಿಷ್ಠ 25. ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವೇತನ ಶ್ರೇಣಿ: ರೂ 5,200- 20,200. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ವಿಳಾಸ: ಮ್ಯಾನೇಜರ್ (ಎಚ್‌ಆರ್‌ಎಂ), ಕೈಗಾ ಸೈಟ್, ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ, ಕೈಗಾ ಪೋಸ್ಟ್, ಕಾರವಾರ, ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ ರಾಜ್ಯ- 581 400. ಇತರ ಮಾಹಿತಿಗೆ ://.. ಎನ್.ಪಿ.ಸಿ.ಐ.ಎಲ್-2 ಎನ್.ಪಿ.ಸಿ.ಐ.ಎಲ್.ನಲ್ಲಿ 136 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-7-2013. ಹುದ್ದೆ ವಿವರ: 1) ಸ್ಟೈಫೆಂಡರಿ ಟ್ರೈನೀಸ್ ಡಿಪ್ಲೊಮಾ ಹೋಲ್ಡರ್- 21 ಹುದ್ದೆ, ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಸ್ಟೈಫೆಂಡರಿ: ರೂ 9,300. 2) ಸ್ಟೈಫೆಂಡರಿ ಟ್ರೈನೀಸ್ ಬಿ.ಎಸ್ಸಿ. ಹೋಲ್ಡರ್- 21 ಹುದ್ದೆ. ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಸ್ಟೈಫೆಂಡರಿ: ರೂ 9,300. 3) ಸ್ಟೈಫೆಂಡರಿ ಟ್ರೈನೀಸ್ (ಕೆಟಗರಿ-11)- 94 ಹುದ್ದೆ. ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ. ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಸ್ಟೈಫೆಂಡರಿ: ರೂ 6,200. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ವಿಳಾಸ: ಡೆಪ್ಯುಟಿ ಮ್ಯಾನೇಜರ್ (ಎಚ್‌ಆರ್‌ಎಂ), ಕಾಕ್ರಪರ್ ಗುಜರಾತ್ ಸೈಟ್, ಪ್ಲಾಂಟ್ ಸೈಟ್, ಅನುಮಾಲ ಪೋಸ್ಟ್, ವ್ಯಾರಾ, ಕಾಕ್ರಪುರ್, ತಪಿ ಜಿಲ್ಲೆ, ಗುಜರಾತ್- 394 651. ಇತರ ಮಾಹಿತಿಗೆ ://.. ಸೇನಾಪಡೆ ಸೇನಾಪಡೆಯಲ್ಲಿ 69 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-8-2013. ಹುದ್ದೆ ವಿವರ: 1) ಟೆಕ್ನಿಕಲ್ ಎಂಟ್ರಿ, 2) ನಾನ್ ಟೆಕ್ನಿಕಲ್ ಎಂಟ್ರಿ. ವಿದ್ಯಾಭ್ಯಾಸ: ಬಿ.ಇ/ ಬಿ.ಟೆಕ್ (ಸಿವಿಲ್, ಆರ್ಕಿಟೆಕ್ಚರ್ ಮೆಕ್ಯಾನಿಕಲ್ ಪ್ರೊಡಕ್ಷನ್, ಆಟೊಮೊಬೈಲ್, ಏರೊನಾಟಿಕಲ್, ಮೆಟಲರ್ಜಿಕಲ್, ಎಲೆಕ್ಟ್ರಾನಿಕ್, ಎಲೆಕ್ಟ್ರಾನಿಕ್ ಕಮ್ಯುನಿಕೇಷನ್, ಕಂಪ್ಯೂಟರ್ ಟೆಕ್ನಾಲಜಿ) ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ವಿಳಾಸ: ಇಂಟಿಗ್ರೇಟೆಡ್ ಹೆಡ್‌ಕ್ವಾರ್ಟರ್ಸ್‌ ಆಫ್ ಮಿನಿಸ್ಟ್ರಿ ಆಫ್ ಡಿಫೆನ್ಸ್ (ಆರ್ಮಿ), ಎಜೀಸ್ ಬ್ರಾಂಚ್, ಡಿಜಿ ಆರ್‌ಟಿಜಿ/ಆರ್‌ಟಿಜಿ-6 (ಡಬ್ಲ್ಯುಇ) ಸೆಕ್ಷನ್, ವೆಸ್ಟ್ ಬ್ಲಾಕ್-111, ಆರ್.ಕೆ.ಪುರಂ, ನವದೆಹಲಿ- 110 066 ಇತರ ಮಾಹಿತಿಗೆ ... ಅಥವಾ ://... ರೈಲ್ವೆ ರೆಕ್ರೂಟ್‌ಮೆಂಟ್ ಸೆಲ್ ಆರ್.ಆರ್.ಬಿ.ಯು. (ಬಿಸ್ಲಾಪುರ) 968 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-7-2013. ಹುದ್ದೆ ವಿವರ: ಗುಂಪು `ಡಿ'-ಎಕ್ಸ್ ಸರ್ವೀಸ್‌ಮೆನ್ ಕೋಟಾ (ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ). ವಿದ್ಯಾಭ್ಯಾಸ: ಎಂಜಿನಿಯರಿಂಗ್ (ಸಿವಿಲ್ ಎಂಜಿನಿಯರಿಂಗ್) ಪದವಿ. ವಯೋಮಿತಿ: ಕನಿಷ್ಠ 33 ವರ್ಷ, ಗರಿಷ್ಠ 38 ವರ್ಷ. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ವಿಳಾಸ: ಡೆಪ್ಯುಟಿ ಚೀಫ್ ಪರ್ಸನೆಲ್ ಆಫೀಸರ್ (ರೆಕ್ರೂಟ್‌ಮೆಂಟ್), ರೈಲ್ವೆ ರೆಕ್ರೂಟ್‌ಮೆಂಟ್ ಸೆಲ್, ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ, ಆರ್.ಟಿ.ಎಸ್. ಕಾಲೊನಿ, ಕೇಂದ್ರೀಯ ವಿದ್ಯಾಲಯ ಸಮೀಪ, ಬಿಲ್ಸಾಪುರ- 495 004, ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.