ಮಾಡಿ ನಲಿ ಸಾಮಗ್ರಿ: 3 ಚಿಕ್ಕ ಪ್ಲಾಸ್ಟಿಕ್ ಬಾಟಲ್‌ಗಳು, ಮರಳು, 3 ಬಿರಡೆಗಳು, ಬಕೆಟ್, ನೀರು. ವಿಧಾನ: 1. ಮೂರು ಚಿಕ್ಕ ಪ್ಲಾಸ್ಟಿಕ್ ಬಾಟಲ್‌ಗಳನ್ನು ತೆಗೆದುಕೊಳ್ಳಿ. 2. ಒಂದು ಬಾಟಲ್‌ಗೆ ಮರಳು ತುಂಬದೆಯೇ ಬಿರಡೆ ಹಾಕಿ. ಎರಡನೆಯದರಲ್ಲಿ ಅರ್ಧದಷ್ಟು ಮರಳು ತುಂಬಿ ಬಿರಡೆ ಹಾಕಿ ಹಾಗೂ ಮೂರನೆಯದರಲ್ಲಿ, ಬಾಟಲ್‌ನ ತುಂಬಾ ಮರಳು ತುಂಬಿ ಬಿರಡೆ ಹಾಕಿ. ಈ ಮೂರು ಬಾಟಲ್‌ಗಳನ್ನು ಮುಕ್ಕಾಲು ಭಾಗ ನೀರು ತುಂಬಿದ ಬಕೆಟಿನಲ್ಲಿ ಇಳಿ ಬಿಡಿ. ಪ್ರಶ್ನೆ 1.ಯಾವ ಬಾಟಲ್ ಎಲ್ಲಿರುತ್ತದೆ? ಯಾಕೆ? 2.ಯಾವ ಯಂತ್ರ ಈ ವಿಧಾನದಿಂದ ಕೆಲಸ ಮಾಡುತ್ತದೆ? ಹೇಗೆ? ಉತ್ತರ 1. ಖಾಲಿ ಬಾಟಲ್ ನೀರಿನ ಮೇಲೆ ತೇಲುತ್ತದೆ. ಎರಡನೆಯದ್ದು ನೀರಿನ ಮಧ್ಯದಲ್ಲಿ ತೇಲುತ್ತದೆ ಹಾಗೂ ಮೂರನೆಯ ಬಾಟಲ್ ಪೂರ್ಣ ಮುಳುಗುತ್ತದೆ. ನೀರಿನ ಬಲ ಅಥವಾ ನೂಕುಬಲವು ಬಾಟಲನ್ನು ತೇಲುವಂತೆ ಅಥವಾ ಮುಳುಗುವಂತೆ ಮಾಡುತ್ತದೆ. ನೀರಿನ ನೂಕು ಬಲವು ಬಾಟಲ್‌ಗಿಂತ ಹೆಚ್ಚಿದ್ದರೆ ಬಾಟಲ್ ತೇಲುತ್ತದೆ. ನೀರಿನ ಮೇಲ್ಮುಖ ನೂಕುಬಲಕ್ಕೆ ಪ್ಲವನತೆ ಎನ್ನುತ್ತಾರೆ. 2. ಜಲಾಂತರ್ಗಾಮಿಯನ್ನು (ಸಬ್‌ಮರೀನ್) ಮುಳುಗಿಸಬೇಕಾದರೆ ಸಮುದ್ರದ ನೀರನ್ನು ಅದರಲ್ಲಿನ ಟ್ಯಾಂಕ್‌ಗಳಿಗೆ ತುಂಬುತ್ತಾರೆ. ಆಗ ಅದರ ಭಾರ ಹೆಚ್ಚಾಗಿ ಅದು ಮುಳುಗುತ್ತದೆ. ತೇಲಬೇಕಾದರೆ ಟ್ಯಾಂಕಿನಲ್ಲಿನ ನೀರನ್ನು ಹೊರತೆಗೆಯುತ್ತಾರೆ. ಅದು ಹಗುರಾಗಿ ನೀರಿನ ಮೇಲೆ ಬರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.