ಕಿರಣ ಕೇಂದ್ರೀಕರಿಸಿ ನೋಡು ಪ್ರಶ್ನೆ: ಕಾಗದಕ್ಕೆ ಕಿರಣಗಳು ಒಂದೇ ಬಿಂದುವಿನಲ್ಲಿ ಬಿದ್ದರೆ ಏನಾಗುತ್ತದೆ? ಏಕೆ? ಉತ್ತರ: ಸೂರ್ಯ ಕಿರಣಗಳು ಒಂದೇ ಬಿಂದುವಿನಲ್ಲಿ ಬಿದ್ದ ಕಾಗದದ ಸ್ಥಳದಲ್ಲಿ ಮೊದಲು ಹೊಗೆ ಕಾಣಿಸಿಕೊಂಡು ಅನಂತರ ಕಾಗದ ಹೊತ್ತಿ ಉರಿಯುತ್ತದೆ. ಆಗ ಒಂದೇ ಬಿಂದುವಿನಲ್ಲಿ 100- 200 ಪಟ್ಟು ಹೆಚ್ಚು ಸೌರಶಕ್ತಿ ಕೇಂದ್ರೀಕೃತವಾಗಿರುತ್ತದೆ. ಇದರಿಂದ ಕಾಗದದ ಜ್ವಲನ ಬಿಂದು ಹೆಚ್ಚಿ, ಬೆಂಕಿ ಹೊತ್ತಿಕೊಳ್ಳುತ್ತದೆ. ಸೌರಶಕ್ತಿಯನ್ನು ಉಪಯೋಗಿಸಿಕೊಂಡು ಸೌರ ಒಲೆ, ಸೌರ ದೀಪ, ಜಲತಪ್ತಕಗಳನ್ನು ಬಳಸುತ್ತಾರೆ. ಮುಂದಿನ ದಿನಗಳಲ್ಲಿ ನಮಗೆಲ್ಲ ಸೌರಶಕ್ತಿಯೊಂದೇ ಆಧಾರವಾಗಬಹುದು. ಸಾಮಗ್ರಿಗಳು: ದೊಡ್ಡ ಪೀನ ಮಸೂರ, ಕಾಗದ, ಪ್ರಖರ ಸೂರ್ಯ ಕಿರಣಗಳು. ವಿಧಾನ: 1. ಒಂದು ಹಿಡಿಕೆಯುಳ್ಳ ದೊಡ್ಡ ಪೀನ ಮಸೂರ ಹಾಗೂ ಕಾಗದ ತೆಗೆದುಕೊಳ್ಳಿ. 2. ಸೂರ್ಯನ ಪ್ರಖರ ಬೆಳಕಿನಲ್ಲಿ ಕಾಗದದ ಮೇಲೆ, ಸೂರ್ಯನ ಕಿರಣಗಳು ಒಂದೇ ಬಿಂದುವಿನಲ್ಲಿ ಬೀಳುವಂತೆ ಒಂದೆರಡು ನಿಮಿಷ ಹಿಡಿಯಿರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.