ಚೆಸ್: ‘ಡ್ರಾ’ ಪಂದ್ಯದಲ್ಲಿ ವಿಶ್ವನಾಥನ್‌ ಆನಂದ್‌ ಯಾಗ್ರೆಬ್‌: ಭಾರತದ ವಿಶ್ವ ನಾಥನ್‌ ಆನಂದ್, ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್‌ ಚೆಸ್ ಟೂರ್‌ನ ನಾಲ್ಕನೇ ಸುತ್ತಿನಲ್ಲಿ ಭಾನುವಾರ ಅಮೆರಿಕದ ವೆಸ್ಲಿ ಸೊ ಜೊತೆ ಡ್ರಾ ಮಾಡಿಕೊಂಡರು. ರಷ್ಯಾದ ಇಯಾನ್‌ ನೆಪೊಮ್ನಿಯಾಟ್ಚಿ ಅವರಿಗೆ ಅನಿರೀಕ್ಷಿತವಾಗಿ ಸೋತ ನಂತರ ಇದು ಆನಂದ್‌ ಅವರಿಗೆ ಮೂರನೇ ಡ್ರಾ. ಕಪ್ಪು ಕಾಯಿಗಳಲ್ಲಿ ಆಡಿದ್ದ ಆನಂದ್‌ ವಿರುದ್ಧ 32 ನಡೆಗಳಲ್ಲಿ ‘ನಡೆಗಳ ಪುನರಾವರ್ತನೆ ಮಾಡಿದ ಸೊ ‘ಡ್ರಾ’ಕ್ಕೆ ಒಪ್ಪಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.