ಚೆಸ್‌: ಅಮನ್‌, ಶ್ರಿಯಾನಾ ಸಾಧನೆ ಬೆಂಗಳೂರು: ಬೆಂಗಳೂರಿನ ಅಮನ್‌ ಜಾರ್ಜ್‌ ಥಾಮಸ್‌ ಮತ್ತು ಮಂಗಳೂ ರಿನ ಶ್ರಿಯಾನಾ ಎಸ್‌.ಮಲ್ಯ, ನಗರದ ವೈಎಂಸಿಎಯಲ್ಲಿಭಾನುವಾರ ಮುಕ್ತಾಯಗೊಂಡ ಒಂಬತ್ತು ವರ್ಷದೊಳಗಿನವರ ರಾಜ್ಯ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಓಪನ್‌ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಅಮನ್‌ ಮತ್ತು ಬೆಂಗಳೂರಿನ ಅ್ಯವಯಕುಮಾರ ಭಟ್‌ ತಲಾ ಎಂಟು ಪಾಯಿಂಟ್ ಸಂಗ್ರಹಿಸಿದರೂ, ಟೈಬ್ರೇಕ್‌ ಸ್ಕೋರ್‌ ಆಧಾರದಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಪಡೆದರು. ಮೈಸೂರಿನ ಶ್ರೇಯಸ್‌ ಕೆ.ಪಾಟೀಲ್ (7.5) ಮೂರನೇ ಸ್ಥಾನ ಪಡೆದ. ಆರ್ಯ ಸತೀಶ ಚಿಕ್ಕೋಡಿ (7.5) ಮತ್ತು ಅಶಿತ್‌ ಕಮಾರ್ ಗೌಡ (7) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಶ್ರಿಯಾನಾ ಮಲ್ಯ 9 ಸುತ್ತುಗಳಿಂದ ಗರಿಷ್ಠ ಒಂಬತ್ತು ಪಾಯಿಂಟ್‌ ಸಂಗ್ರಹಿಸಿದಳು. ಬೆಂಗಳೂರಿನ ಶಾಂಜುಲಾ ಸೆಂಥಿಲ್‌ (7.5), ಶ್ರೀಹರಿಣಿ ಎ. (7), ಜೆಸ್ಲಿನ್‌ ಜೆನಿಶಾ ಜೆ (7). ಮತ್ತು ಮಾಯಾ ಅಮೀನ್‌ (7) ಕ್ರಮವಾಗಿ ಎರಡರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು. 7 ವರ್ಷದೊಳಗಿನವರ ಓಪನ್‌ ವಿಭಾಗದಲ್ಲಿ ಬೆಂಗಳೂರಿನ ಯುವನೇಶ್ ಎ. (6.5), ಅಪಾರ್‌ ಸಕ್ಸೇನಾ (6.5), ಅದ್ವೈತ್‌ ಪ್ರಭುರಾಜ್‌ (6) ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಸಿದ್ದಿ ರಾವ್‌, ರಿಮಾ ರಾವ್‌ ಯು.ಬಿ., ದಿವ್ಯಾ ಉಮೇಶ್‌ (5.5) ಕ್ರಮವಾಗಿ ಒಂದು, ಎರಡು ಮತ್ತು ಮೂರನೇ ಸ್ಥಾನ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.