ಬಾಕ್ಸಿಂಗ್‌: ವೈಭವ್‌ ಚಾಂಪಿಯನ್‌ ನವದೆಹಲಿ: ಭಾರತದ ಪ್ರೊ ಬಾಕ್ಸರ್‌ ವೈಭವ್‌ ಯಾದವ್ ಅವರು ಡಬ್ಲ್ಯುಬಿಸಿ ಏಷ್ಯಾ ಸಿಲ್ವರ್‌ ವಾಲ್ಟರ್‌ವೇಟ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಥಾಯ್ಲೆಂಡ್‌ನ ಪಟ್ಟಾಯಾನಲ್ಲಿ ಭಾನುವಾರ ರಾತ್ರಿ ನಡೆದ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಅವರು ತವರಿನ ಬಾಕ್ಸರ್‌ ಫಾಹ್‌ಪೆಚ್‌ ಸಿಂಗ್ಮಾನಾಸ್ಸಕ್‌ ಅವರನ್ನು ಮಣಿಸಿದರು. ಯಾದವ್‌, ಕಾಮನ್‌ವೆಲ್ತ್‌ ಗೇಮ್ಸ್ ಚಿನ್ನದ ಪದಕ ವಿಜೇತ ವಿಕಾಸ್‌ ಕ್ರಿಶನ್‌ ಅವರ ಸೋದರ ಸಂಬಂಧಿ. ವಿಶ್ವ ಬಾಕ್ಸಿಂಗ್‌ ಕೌನ್ಸಿಲ್‌ನ ಸಮ್ಮತಿಯ ಮೇರೆಗೆ ಏಷ್ಯನ್‌ ಬಾಕ್ಸಿಂಗ್‌ ಕೌನ್ಸಿಲ್‌ನಿಂದ ಈ ಟೂರ್ನಿ ಆಯೋಜಿಸಲ್ಪಟ್ಟಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.