ಗಾಲ್ಫ್‌: ಭುಲ್ಲರ್, ಶರ್ಮಾಗೆ ನಿರಾಸೆ ಲಾಹಿಂಚ್, ಐರ್ಲೆಂಡ್: ಭಾರತದ ಗಗನ್‌ಜೀತ್ ಭುಲ್ಲರ್, ಶುಭಂಕರ್ ಶರ್ಮಾ ಮತ್ತು ಎಸ್‌ಎಸ್‌ಪಿ ಚೌರಾಸಿಯಾ ಇಲ್ಲಿ ನಡೆಯುತ್ತಿರುವ ಐರಿಷ್‌ ಓಪನ್‌ ಗಾಲ್ಫ್ ಟೂರ್ನಿಯಲ್ಲಿ ಶನಿವಾರ ನಿರಾಸೆ ಅನುಭವಿಸಿದ್ದಾರೆ. ಅಮೋಘ ಆರಂಭ ಕಂಡ ಭುಲ್ಲರ್ ನಂತರ ನೀರಸ ಆಟ ಆಡಿದರು. ಎರಡನೇ ಸುತ್ತಿನಲ್ಲಿ ಅವರಿಂದ ಗಮನಾರ್ಹ ಸಾಧನೆ ಕಂಡುಬರಲಿಲ್ಲ. ಶರ್ಮಾ ಮತ್ತು ಚೌರಾಸಿಯಾ ಅವರಿಗೆ ಮೊದಲೆರಡು ಸುತ್ತುಗಳಲ್ಲೂ ನಿರೀಕ್ಷಿತ ಸಾಮರ್ಥ್ಯ ತೋರಲಾಗಲಿಲ್ಲ. ಮೂರನೇ ದಿನವಾದ ಶನಿವಾರ ರಾಬರ್ಟ್ ರಾಕ್ ಮಿಂಚಿದರು. 2012ರಲ್ಲಿ ಅಬು ಧಾಬಿ ಚಾಂಪಿಯನ್‌ಷಿಪ್‌ನಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದಿದ್ದ ಅವರು ಇಲ್ಲಿ ಚಾಂಪಿಯನ್‌ ಆಗುವತ್ತ ಹೆಜ್ಜೆ ಹಾಕಿದ್ದಾರೆ. ಜಾನ್ ರಾಹ್ಮ್ ನಾಲ್ಕನೇ ಸ್ಥಾನದಲ್ಲಿದ್ದು ರಾಫ ಕಾಬ್ರೆರಾ ಬೆಲೊ ಮತ್ತು ಬೆರ್ನಾರ್ಡ್‌ ವೀಸ್‌ಬರ್ಗ್‌ ಮುಂದಿನ ಸ್ಥಾನಗಳಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.