ಗಾಲ್ಫ್‌: ಅರ್ಜುನ್‌ಗೆ ಗರಿ ನವದೆಹಲಿ: ಭಾರತದ ಅರ್ಜುನ್‌ ಭಾಟಿ, ಕ್ಯಾಲಿಫೋರ್ನಿಯಾದಲ್ಲಿ ಆಯೋಜನೆಯಾಗಿದ್ದ ವಿಶ್ವ ಜೂನಿಯರ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಪಾಮ್‌ ಡೆಸರ್ಟ್‌ನಲ್ಲಿ ನಡೆದ ಫೈನಲ್‌ನಲ್ಲಿ ಅರ್ಜುನ್‌ ಅವರು ತೈವಾನ್‌ನ ಜೆರೆಮಿ ಚೆನ್‌ ಅವರನ್ನು ಸೋಲಿಸಿದರು. ಚಾಂಪಿಯನ್‌ಷಿಪ್‌ನಲ್ಲಿ 40 ದೇಶಗಳ 637 ಗಾಲ್ಫರ್‌ಗಳು ಪಾಲ್ಗೊಂಡಿದ್ದರು. ಮೂರು ದಿನಗಳ ಫೈನಲ್‌ನಲ್ಲಿ ಅರ್ಜುನ್‌ 199 ಸ್ಕೋರ್‌ ಕಲೆಹಾಕಿದರು. ಚೆನ್‌ (202) ಮತ್ತು ನ್ಯೂಜಿಲೆಂಡ್‌ನ ಜೊಶುವಾ ಬಯೀ (207) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ‘ಚಾಂಪಿಯನ್‌ಷಿಪ್‌ನ ಎಲ್ಲಾ ಸುತ್ತುಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿದ್ದರಿಂದ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವುದು ಮತ್ತು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡಬೇ ಕೆಂಬುದು ನನ್ನ ಕನಸು’ ಎಂದು ಅರ್ಜುನ್‌ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.