ಇಂದಿನಿಂದ ರಾಜ್ಯ ಅಥ್ಲೆಟಿಕ್ ಕೂಟ ಬೆಂಗಳೂರು: ರಾಜ್ಯ ಅಥ್ಲೆಟಿಕ್ ಕೂಟ ಶನಿವಾರ ಮತ್ತು ಭಾನುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಥ್ಲೆಟಿಕ್ ಸಂಸ್ಥೆ ತಿಳಿಸಿದೆ. ಮೊದಲ ದಿನ ಬೆಳಿಗ್ಗೆ 9 ಗಂಟೆಗೆ ಸ್ಪರ್ಧೆಗಳು ಆರಂಭಗೊಳ್ಳಲಿದ್ದು ಮಧ್ಯಾಹ್ನ 3ಕ್ಕೆ ಮುಕ್ತಾಯಗೊಳ್ಳಲಿವೆ. ಭಾನುವಾರ ಮುಂಜಾನೆ 6.30ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ನಡೆಯಲಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಪುರುಷ ಮತ್ತು ಮಹಿಳೆಯರು ಒಳಗೊಂಡಂತೆ ಸುಮಾರು 400 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಹಿರಿಯ ಅಥ್ಲೀಟ್‌ಗಳಾದ ಕೆನೆತ್ ಪೊವೆಲ್, ಉದಯ ಪ್ರಭು ಮತ್ತು ರೀತ್ ಅಬ್ರಹಾಂ ಅವರು ಕೂಟವನ್ನು ಉದ್ಘಾಟಿಸುವರು. ಆಗಸ್ಟ್‌ 27ರಿಂದ 30ರ ವರೆಗೆ ಲಖನೌದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದ ಆಯ್ಕೆಯೂ ಇಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.