ರಷ್ಯನ್‌ ಬ್ಯಾಡ್ಮಿಂಟನ್‌‌ ಭಾರತ ತಂಡದ ಸವಾಲು ಅಂತ್ಯ ವ್ಲಾಡಿವೊಸ್ಟಾಕ್‌, ರಷ್ಯಾ: ಭಾರತದ ಮೇಘನಾ ಜಕ್ಕಂಪುಡಿ, ರಷ್ಯನ್‌ ಓಪನ್‌ ಬಿಡಬ್ಲ್ಯುಎಫ್‌ ಟೂರ್‌ ಸೂಪರ್‌ 100 ಟೂರ್ನಿಯಲ್ಲಿ ಮಹಿಳಾ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಹೊರಬಿದ್ದರು. ಏಳನೇ ಶ್ರೇಯಾಂಕದ ಪಡೆದಿದ್ದ ಅದ್ನಾನ್‌ ಮೌಲಾನಾ– ಮಿಷೆಲ್ಲೆ ಕ್ರಿಸ್ಟಿನ್‌ ಬಂಡಾಸೊ ಜೋಡಿ ಶನಿವಾರ ನಡೆದ ಮಿಶ್ರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಎಂಟನೇ ಶ್ರೇಯಾಂಕದ ಮೇಘನಾ–ಧ್ರುವ್ ಕಪಿಲ ಜೋಡಿಯನ್ನು 21–6, 21–15ರಲ್ಲಿ ಸೋಲಿಸಿತು. 27 ನಿಮಿಷಗಳಲ್ಲಿ ಭಾರತದ ಡಬಲ್ಸ್‌ ತಂಡ ಶರಣಾಯಿತು. ಈ ಪಂದ್ಯದ ಬಳಿಕ ನಡೆದ ಮಹಿಳೆಯರ ಡಬಲ್ಸ್‌ನಲ್ಲಿ ಮೇಘನಾ– ಕರ್ನಾಟಕದ ಪೂರ್ವೀಶಾ ಎಸ್‌.ರಾಮ್‌ ಜೋಡಿಯನ್ನು ನಾಲ್ಕನೇ ಶ್ರೇಯಾಂಕದ ಮಿಕಿ ಕಾಶಿಹರಾ– ಮಿಯುಕಿ ಕಟೊ (ಜಪಾನ್‌) ಜೋಡಿ 10–21, 8–21ರಿಂದ ಸೋಲಿಸಿತು. ಭಾರತದ ಜೋಡಿ ಅಗ್ರ ಶ್ರೇಯಾಂಕದ ಪಡೆದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.