ಬಾಕ್ಸಿಂಗ್‌: ಎಂಟರ ಘಟ್ಟಕ್ಕೆ ದೀಪಕ್‌, ಮನೀಷಾ ನವದೆಹಲಿ (ಪಿಟಿಐ): ಮಿಂಚಿನ ಪಂಚ್‌ ನೀಡಿದ ದೀಪಕ್‌ ಸಿಂಗ್‌ (49 ಕೆಜಿ) ಸೇರಿದಂತೆಭಾರತದ ಮೂವರು ಬಾಕ್ಸರ್‌ಗಳು ಸೋಮವಾರ ಥಾಯ್ಲೆಂಡ್‌ ಓಪನ್‌ ಬಾಕ್ಸಿಂಗ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಟೂರ್ನಿ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆಯುತ್ತಿದೆ. ಮನೀಷಾ ಮೌನ್‌ (57 ಕೆಜಿ) ಹಾಗೂ ಆಶಿಶ್‌ ಕುಮಾರ್‌ (75 ಕೆಜಿ) ಎಂಟರಘಟ್ಟ ತಲುಪಿದ ಭಾರತದ ಇನ್ನಿಬ್ಬರು ಬಾಕ್ಸರ್‌ಗಳು. ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯ ದಲ್ಲಿದೀಪಕ್ ಅವರು ಮೊರೊಕ್ಕೊದ ಸೈದ್‌ ಮೊರ್ತಾಜಿ ವಿರುದ್ಧ 5–0 ಪಾಯಿಂಟ್‌ಗಳಿಂದ ಗೆದ್ದರು. ಮನೀಷಾ ಮೌನ್‌ ಅವರು ಥಾಯ್ಲೆಂಡ್‌ನ ಸಜೀವನಿ ಶ್ರೀಮಾಲಿ ವಿರುದ್ಧ 5–0 ಅಂತರದ ಜಯ ಗಳಿಸಿದರು.‌ ಮತ್ತೊಂದು ಪಂದ್ಯದಲ್ಲಿ ಆಶಿಶ್‌, ಒಂದಷ್ಟು ಪ್ರತಿರೋಧ ಎದುರಿಸಿದರೂ ಸ್ಥಳೀಯ ಎದುರಾಳಿ ಅಪಿಶಿತ್‌ ಕನಂಕೊಕ್ರುವಾ ವಿರುದ್ಧ 4–1ರಿಂದ ಗೆದ್ದು ಮುನ್ನಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.