ತಲೆಗೆ ಪೆಟ್ಟು: ರಷ್ಯಾದ ಬಾಕ್ಸರ್‌ ಸಾವು ಮಾಸ್ಕೊ: ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಸೂಪರ್‌ಲೈಟ್‌ವೇಟ್‌ ಬಾಕ್ಸಿಂಗ್‌ ಪಂದ್ಯದ ವೇಳೆ ತಲೆಗೆ ತೀವ್ರ ಪೆಟ್ಟಾದ ಕಾರಣ ವಾಷಿಂಗ್ಟನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಷ್ಯಾದ 28 ವರ್ಷದ ಬಾಕ್ಸರ್‌ ಮ್ಯಾಕ್ಸಿಮ್‌ ದಾದಾಶೆವ್‌ ಮೃತಪಟ್ಟಿದ್ದಾರೆ. ಹೋದ ಶುಕ್ರವಾರ ನಡೆದಿದ್ದ ಸುಬ್ರಿಯಲ್ ಮಥಾಯಸ್‌ ವಿರುದ್ಧದ ಪಂದ್ಯದ 11ನೇ ಸುತ್ತಿನ ವೇಳೆ ಘಟನೆ ನಡೆದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.