ಗುವಾಹಟಿಯಲ್ಲಿ ಖೇಲೊ ಇಂಡಿಯಾ ಯೂಥ್‌ ಗೇಮ್ಸ್ ನವದೆಹಲಿ: ಮೂರನೇ ಆವೃತ್ತಿಯ ಖೇಲೊ ಇಂಡಿಯಾ ಯೂಥ್‌ ಗೇಮ್ಸ್ ಮುಂದಿನ ವರ್ಷ ಗುವಾಹಟಿಯಲ್ಲಿ ನಡೆಯಲಿವೆ. ಈ ಕುರಿತು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಶನಿವಾರ ಟ್ವೀಟ್‌ ಮಾಡಿದ್ದಾರೆ. ‘2020ರ ಜನವರಿ 18–30ರವರೆಗೆ ಗುವಾಹಟಿ ಯಲ್ಲಿಮೂರನೇ ಆವೃತ್ತಿಯ ಖೇಲೊ ಇಂಡಿಯಾ ಯೂಥ್‌ ಗೇಮ್ಸ್‌ ನಡೆಯಲಿವೆ. ಅಥ್ಲೀಟ್‌ ಹಾಗೂ ಅಧಿಕಾರಿಗಳು ಸೇರಿ 10,000ಕ್ಕಿಂತ ಮಂದಿ ಗೇಮ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಒಎ, ಎಸ್‌ಜಿಎಫ್‌ಐ ಹಾಗೂ ಆತಿಥೇಯ ರಾಜ್ಯವಾಗಿ ಅಸ್ಸಾಂ ಸಂಯುಕ್ತವಾಗಿ ಈ ಕ್ರೀಡಾಕೂಟವನ್ನು ಆಯೋಜಿ ಸಲಿವೆ’ ಎಂದು ಅವರು ಟ್ವೀಟಿ ಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.