ರಾಷ್ಟ್ರೀಯ ಚೆಸ್‌: ಭಕ್ತಿ ಕುಲಕರ್ಣಿಗೆ ಪ್ರಶಸ್ತಿ ಕಾರೈಕುಡಿ, ತಮಿಳುನಾಡು: ಹಾಲಿ ಚಾಂಪಿಯನ್‌ ಏರ್‌ ಇಂಡಿಯಾದ ಭಕ್ತಿ ಕುಲಕರ್ಣಿ ಅವರು ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಷಿಪ್‌ ಪ್ರಶಸ್ತಿ ಉಳಿಸಿಕೊಂಡಿದ್ದಾರೆ. ಶನಿವಾರ ಮುಕ್ತಾ ಯವಾದ 46ನೇ ಚಾಂಪಿಯನ್‌ಷಿಪ್‌ ನಲ್ಲಿ 11 ಸುತ್ತುಗಳಲ್ಲಿ 10 ಪಾಯಿಂಟ್‌ ಗಳಿಸಿದ ಅವರು ಕಿರೀಟ ಧರಿಸಿದರು. ಅಂತಿಮ ಸುತ್ತಿನಲ್ಲಿ ಅಂತರರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್‌ ಆಂಧ್ರ ಪ್ರದೇಶದ ಪ್ರತ್ಯುಷಾ ಬೊಡ್ಡಾ ಅವರನ್ನು ಎದುರಿಸಿದ್ದ ಭಕ್ತಿ, ಡ್ರಾ ಸಾಧಿಸಿದರು. ಪಂದ್ಯದ ಆರಂಭದಲ್ಲಿ ದೊರೆತ ಉತ್ತಮ ಅವಕಾಶಗಳನ್ನು ಪ್ರತ್ಯುಷಾ ಕೈಚೆಲ್ಲಿದರು. 62 ನಡೆಗಳ ಬಳಿಕ ಇಬ್ಬರೂ ಡ್ರಾಗೆ ಸಮ್ಮತಿಸಿದರು. ಪ್ರಶಸ್ತಿ ಗೆದ್ದ ಭಕ್ತಿ ಅವರು ₹ 4 ಲಕ್ಷ ಬಹುಮಾನ ಮೊತ್ತ ತಮ್ಮದಾಗಿಸಿಕೊಂಡರು. 8.5 ಪಾಯಿಂಟ್‌ ಗಳಿಸಿದ ದಿಲ್ಲಿಯ ವಂತಿಕಾ ಅಗರ್ವಾಲ್‌ ಮೊದಲ ರನ್ನರ್‌ಅಪ್‌ ಆದರೆ, ಮಹಾರಾಷ್ಟ್ರದ ದಿವ್ಯಾ ದೇಶಮುಖ್‌ ಅಷ್ಟೇ ಪಾಯಿಂಟ್‌ ಗಳಿಸಿದರೂ ಟೈಬ್ರೇಕ್‌ ಸ್ಕೋರ್‌ ಆಧಾರದಲ್ಲಿ ಎರಡನೇ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.