ದಕ್ಷಿಣ ಡೇರ್‌ ಮೋಟರ್‌ಸ್ಪೋರ್ಟ್ಸ್ ರ‍್ಯಾಲಿ: ಪ್ರಶಸ್ತಿಯತ್ತ ಗೌರವ್‌ ಚಿತ್ತ ಬೆಂಗಳೂರು: ಭಾನುವಾರ ಆರಂಭವಾದ 11ನೇ ದಕ್ಷಿಣ ಡೇರ್ ಮೋಟರ್‌ಸ್ಪೋರ್ಟ್ಸ್‌ ರ‍್ಯಾಲಿಯಲ್ಲಿ ಪ್ರಶಸ್ತಿ ಮೇಲೆ ಗೌರವ್ ಗಿಲ್ ಕಣ್ಣಿಟ್ಟಿದ್ದಾರೆ. 2,000 ಕಿ.ಮೀ ದೂರದ ರ‍್ಯಾಲಿಯು ಆಗಸ್ಟ್‌ ಒಂದರಂದು ಹುಬ್ಬಳ್ಳಿಯಲ್ಲಿ ಮುಕ್ತಾಯವಾಗಲಿದೆ. ನಾಲ್ಕು ದಿನಗಳ ರ‍್ಯಾಲಿಯು ದುರ್ಗಮ ಪ್ರದೇಶಗಳನ್ನು ದಾಟಿ ಉತ್ತರ ಕರ್ನಾಟಕ ಪ್ರದೇಶವನ್ನು ಪ್ರವೇಶಿಸಲಿದೆ. ಈ ವರ್ಷ ಅಲ್ಟಿಮೇಟ್ ಕಾರು ಮತ್ತು ಬೈಕ್‌ ವಿಭಾಗಗಳ ಸುಮಾರು 100 ಮೋಟರ್‌ಸ್ಪೋರ್ಟ್ಸ್ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಅಲ್ಟಿಮೇಟ್‌ ಕಾರ್‌ ವಿಭಾಗದಲ್ಲಿ ಹೋದ ಬಾರಿಯ ಚಾಂಪಿಯನ್‌ ಗೌರವ್‌ ಗಿಲ್‌ ಮಹಿಂದ್ರಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರಮುಖ ಸವಾರರಾದ ಕರ್ನಾಟಕದ ಸಂಜಯ್‌ ಹಾಗೂ ವಿಶ್ವಾಸ್‌ ಹರ್ಜಿ ಮೋಟರ್‌ಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.