ಈಕ್ವೆಸ್ಟ್ರಿಯನ್‌ ಪ್ರೀಮಿಯರ್‌ ಲೀಗ್‌: ಆಶಿಶ್‌ ಲಿಮಾಯೆಗೆ ನಾಲ್ಕು ಪ್ರಶಸ್ತಿ ಬೆಂಗಳೂರು: ಇಐಆರ್‌ಎಸ್‌ ಕ್ಲಬ್‌ನ ಆಶಿಶ್‌ ಲಿಮಾಯೆ, ಈಕ್ವೆಸ್ಟ್ರಿಯನ್‌ ಪ್ರೀಮಿಯರ್‌ ಲೀಗ್‌ (ಇಪಿಎಲ್‌) ಹತ್ತನೇ ಆವೃತ್ತಿಯಲ್ಲಿ ನಾಲ್ಕು ಪ್ರಶಸ್ತಿ ಗೆದ್ದಿದ್ದಾರೆ. ದೇವನಹಳ್ಳಿ ಬಳಿ ಇರುವ ಎಂಬಸಿ ಅಂತರರಾಷ್ಟ್ರೀಯ ರೈಡಿಂಗ್‌ ಶಾಲೆಯಲ್ಲಿ (ಇಐಆರ್‌ಎಸ್‌) ಶನಿವಾರ ಮತ್ತು ಭಾನುವಾರ ನಡೆದ ಲೀಗ್‌ನ 120, 110, 105 ಮತ್ತು 100 ಸೆಂಟಿ ಮೀಟರ್ಸ್‌ ಶೋ ಜಂಪಿಂಗ್‌ ವಿಭಾಗಗಳಲ್ಲಿ ಆಶಿಶ್‌ ಈ ಸಾಧನೆ ಮಾಡಿದರು. 130 ಸೆಂಟಿ ಮೀಟರ್ಸ್‌ ವಿಭಾಗದ ಪ್ರಶಸ್ತಿ ಎಚ್‌ಆರ್‌ಎನ್‌ ಕ್ಲಬ್‌ನ ಯಶಾನ್‌ ಖಾಂಬಟ್ಟ ಅವರ ಪಾಲಾಯಿತು. ಫಲಿತಾಂಶಗಳು: 130 ಸೆಂಟಿ ಮೀಟರ್ಸ್‌ (ಓಪನ್‌): ಯಶಾನ್‌ ಖಾಂಬಟ್ಟ (ಎಚ್‌ಆರ್‌ಎನ್‌ ಕ್ಲಬ್‌)–1, ರಿಷಭ್‌ (ಯುಆರ್‌ಬಿ ಕ್ಲಬ್‌)–2. 120 ಸೆಂ.ಮೀ. (ಓಪನ್‌): ಆಶಿಶ್‌ ಲಿಮಾಯೆ (ಇಐಆರ್‌ಎಸ್)–1, ಎಸ್‌.ಬಸವರಾಜು (ಇಐಆರ್‌ಎಸ್‌)–2, ರಿಷಭ್‌ (ಯುಆರ್‌ಬಿ)–3. 115 ಸೆಂ.ಮೀ. (ಓಪನ್‌): ಕೆಖ್ರೀ (ಯುಆರ್‌ಬಿ)–1, ಎಸ್‌.ಬಸವರಾಜು (ಇಐಆರ್‌ಎಸ್‌)–2, ಆಶಿಶ್‌ ಲಿಮಾಯೆ (ಇಐಆರ್‌ಎಸ್‌)–3. 110 ಸೆಂ.ಮೀ. (ಓಪನ್‌): ಆಶಿಶ್‌ ಲಿಮಾಯೆ (ಇಐಆರ್‌ಎಸ್‌)–1, ಕೆಖ್ರೀ (ಯುಆರ್‌ಬಿ)–2, ಯಶ್‌ (ಯುಆರ್‌ಬಿ)–3. 105 ಸೆಂ.ಮೀ. (ಓಪನ್‌): ಆಶಿಶ್‌ ಲಿಮಾಯೆ (ಇಐಆರ್‌ಎಸ್‌)–1, ಅನೀಶ್‌ ಸಾಯಿ ದಗ್ಗುಬಾಟಿ (ಎಂಎಸ್‌ಇ)–2, ಶಶಾಂಕ್‌ (ಇಐಆರ್‌ಎಸ್‌)–3. 100 ಸೆಂ.ಮೀ. (ಜೂನಿಯರ್‌ ಮತ್ತು ಓಪನ್‌): ಎಸ್‌.ಬಸವರಾಜು (ಇಐಆರ್‌ಎಸ್‌)–1, ತಿಯಾಶ ವಥುಲ್‌ (ಸಿಇಸಿ)–2, ಆಶಿಶ್‌ ಲಿಮಾಯೆ (ಇಐಆರ್‌ಎಸ್‌)–3. 80–90 ಸೆಂ.ಮೀ. (ಮಕ್ಕಳ ಮತ್ತು ಓಪನ್‌ ವಿಭಾಗ): ಫಲೇಹ್‌ ಖಾನ್‌–1, ಎಸ್‌.ಬಸವರಾಜು–2, ಸಮರ್ಥ–3 (ಮೂವರೂ ಇಐಆರ್‌ಎಸ್). 60 ಸೆಂ.ಮೀ. (ಮಕ್ಕಳ ವಿಭಾಗ): ತನುಶಾ ಕುಮಾರ್‌–1, ರೇತಿಫರ್‌ ಇಮನ್‌ ಜಾಹೀರ್‌–2 (ಇಬ್ಬರೂ ಎಂಎಸ್‌ಇ ಕ್ಲಬ್‌). ಪ್ರಿಲಿಮಿನರಿ ಡ್ರೆಸೆಜ್‌ (ಓಪನ್‌): ಸಮರ್ಥ ಸತ್ಯಜಿತ್‌ (ಆರ್‌ಇಆರ್‌ಎಸ್‌)–1, ಕಾವ್ಯಾ ಗೋಪಾಲ್‌ (ಆರ್‌ಇಆರ್‌ಎಸ್‌)–2, ಅಮೃತಾ ಪ್ರಸಾದ್‌ (ಸಿಇಸಿ)–3. ಪ್ರೀ–ನೊವೈಸ್‌ ಡ್ರೆಸೆಜ್‌ (ಮಕ್ಕಳ ವಿಭಾಗ): ಅನಿಕಾ ರಾಣೆ–1, ಗೀತಿಕಾ ಟಿಕ್ಕಿಶೆಟ್ಟಿ –2 (ಇಬ್ಬರೂ ಇಐಆರ್‌ಎಸ್‌). ಪ್ರೀ–ನೊವೈಸ್‌ ಡ್ರೆಸೆಜ್‌ (ಜೂನಿಯರ್‌ ಮತ್ತು ಓಪನ್‌): ಸಮರ್ಥ ಸತ್ಯಜಿತ್‌ (ಆರ್‌ಇಆರ್‌ಎಸ್‌)–1, ಶಶಾಂಕ್‌ (ಇಐಆರ್‌ಎಸ್‌)–2, ತಿಯಾಶಾ ವಥುಲ್‌ (ಸಿಇಸಿ)–3. ನೊವೈಸ್‌ ಡ್ರೆಸೆಜ್‌ (ಓಪನ್‌): ಆಶಿಶ್‌ ಲಿಮಾಯೆ (ಇಐಆರ್‌ಎಸ್‌)–1, ವಿ.ವಿಕಾಸ್‌ ಕುಮಾರ್‌ (ಆರ್‌ಇಆರ್‌ಎಸ್‌)–2. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.