ಹೈದರಾಬಾದ್‌ ಓಪನ್‌: ಫೈನಲ್‌ಗೆ ಸೌರಭ್‌ ಹೈದರಾಬಾದ್ (ಪಿಟಿಐ): ಹಾಲಿ ರಾಷ್ಟ್ರೀಯ ಚಾಂಪಿಯನ್‌ ಸೌರಬ್‌ ವರ್ಮಾ ನೇರ ಗೇಮ್‌ಗಳಿಂದ ಮಲೇಶ್ಯಾದ ಇಸ್ಕಂದರ್‌ ಝುಲ್ಕರ್‌ನೈನ್ ಅವರನ್ನು ಸೋಲಿಸಿ ಹೈದರಾಬಾದ್‌ ಓಪನ್‌ ಬ್ಯಾಡ್ಮಿಂಟನ್‌ಟೂರ್ನಿಯ ಫೈನಲ್‌ ತಲುಪಿದರು. ‌26 ವರ್ಷದ ಸೌರಬ್‌ ಶನಿವಾರ ನಡೆದ ಪಂದ್ಯದಲ್ಲಿ ಸೌರಬ್‌ 23–21, 21–16 ರಿಂದ ಝುಲ್ಕರ್‌ನೈನ್‌ ಅವರನ್ನು ಸೋಲಿಸಲು 48 ನಿಮಿಷ ತೆಗೆದುಕೊಂಡರು. ಕಳೆದ ಮೇ ತಿಂಗಳಲ್ಲಿ ಸ್ಲೊವೇನಿಯಾ ಓಪನ್‌ ಗೆದ್ದುಕೊಂಡಿದ್ದ ಮಧ್ಯಪ್ರದೇಶದ ಆಟಗಾರ, ಈ ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಗಳಿಸಿದ್ದಾರೆ. ಪ್ರಶಸ್ತಿಗಾಗಿ ಭಾನುವಾರ ನಡೆಯುವ ಫೈನಲ್‌ನಲ್ಲಿ ಅವರು ಸಿಂಗಪುರದ ಲೊ ಕಿಯಾನ್‌ ಯೂ– ಕೊರಿಯಾದ ಹಿಯೊ ಕ್ವಾಂಗ್‌ ಹೀ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಭಾರತದ ಅಶ್ವನಿ ಪೊನ್ನಪ್ಪ –ಎನ್‌.ಸಿಕ್ಕಿ ರೆಡ್ಡಿ ಜೋಡಿ 21–12, 21–12 ರಿಂದ ಹಾಂಗ್‌ಕಾಂಗ್‌ನ ಫಾನ್‌ ಕಾ ಯ ಯಾನ್‌– ವು ಯಿ ಜೋಡಿಯನ್ನು ಸೋಲಿಸಿ ಈ ವರ್ಷ ಮೊದಲ ಬಾರಿ ಫೈನಲ್ ತಲುಪಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.