ವಿಶ್ವ ಜೂನಿಯರ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌: ಈಸೋವ್‌ಗೆ ಬೆಳ್ಳಿ ನವದೆಹಲಿ: ಭಾರತದ ಈಸೋವ್‌ ಅಲ್ಬೆನ್‌ ಅವರು ವಿಶ್ವ ಜೂನಿಯರ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಮುಡಿಗೇರಿಕೊಂಡರು. ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ನಡೆದ ಟೂರ್ನಿಯಲ್ಲಿ ಭಾರತದ ಸ್ಪರ್ಧಿಗಳುಉತ್ತಮ ಸಾಮರ್ಥ್ಯ ತೋರಿ ಒಟ್ಟು ಮೂರು ಪದಕ ಗೆದ್ದರು. ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿದ ಭಾರತ ಪದಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆಯಿತು. ಈಸೋವ್‌, ರೊನಾಲ್ಡೊ ಸಿಂಗ್‌ ಹಾಗೂ ರೋಜಿತ್‌ ಸಿಂಗ್‌ ಅವರನ್ನೊಳಗೊಂಡ ತಂಡ ಪುರುಷರ ಸ್ಪ್ರಿಂಟ್‌ ವಿಭಾಗದಲ್ಲಿ ಚಿನ್ನ ಬಾಚಿಕೊಂಡಿತು. ವೈಯಕ್ತಿಕಸ್ಪ್ರಿಂಟ್‌ ಹಾಗೂ ಕೈರಿನ್‌ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳು ಈಸೋವ್‌ಗೆ ಒಲಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.