ಸಾಯ್‌ ಧಾರವಾಡ, ಡಿವೈಇಎಸ್‌ಗೆ ‍ಪ್ರಶಸ್ತಿ ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಧಾರವಾಡ ಕೇಂದ್ರ ಹಾಗೂ ಡಿವೈಇಎಸ್‌ ಮೈಸೂರು ತಂಡಗಳು ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದ ಚಾಂಪಿಯನ್‌ ಆಗಿ ಹೊರಹೊಮ್ಮಿದವು. ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸೆಮಿಫೈನಲ್‌ ಲೀಗ್‌ ಹಣಾಹಣಿಯಲ್ಲಿ ಸಾಯ್‌ ಧಾರವಾಡ 56–28 ಪಾಯಿಂಟ್ಸ್‌ನಿಂದ ಬಿ.ಸಿ. ಬಿ.ಸಿ ತಂಡವನ್ನು ಮಣಿಸಿತು. ಸಾಯ್‌ ತಂಡದ ಪರ ಹರ್ಷಫ್‌ 18 ಪಾಯಿಂಟ್‌ ಗಳಿಸಿ ಮಿಂಚಿದರು. ಮನೋಜ್‌ (13) ಉಪಯುಕ್ತ ಕೊಡುಗೆ ನೀಡಿದರು. ಬಾಲಕಿಯರ ವಿಭಾಗದ ಫೈನಲ್‌ ನಲ್ಲಿ ಡಿವೈಇಎಸ್‌ ಮೈಸೂರು ತಂಡವು ಬೀಗಲ್ಸ್ ಬಿಸಿ ತಂಡವನ್ನು 58–49 ಪಾಯಿಂಟ್ಸ್‌ನಿಂದ ಸೋಲಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.