ಅಮೆರಿಕನ್ ಫುಟ್‌ಬಾಲ್‌ ಟೂರ್ನಿಗೆ ಚಾಲನೆ ಯಲಹಂಕ: ನಾಗಾರ್ಜುನ ಪದವಿ ಕಾಲೇಜಿನ ಮೈದಾನದಲ್ಲಿಕರ್ನಾಟಕ ಫ್ಲಾಗ್ ಹಾಗೂ ಅಮೆರಿಕನ್ ಫುಟ್‌ಬಾಲ್‌ ಅಸೋಸಿಯೇಷನ್ ಆಶ್ರಯದಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಅಮೆರಿಕನ್ ಫುಟ್‌ಬಾಲ್‌ (ಟ್ಯಾಕಲ್ ಫುಟ್‌ಬಾಲ್‌) ಚಾಂಪಿಯನ್‌ಷಿಪ್‌ಗೆ ಶನಿವಾರ ಚಾಲನೆ ದೊರೆಯಿತು. ಈ ಸಂದರ್ಭದಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆಯ ನಾಮ್ದೇವ್ ಶಿರ್ಗಾಂವ್ಕರ್, ‘ಟ್ಯಾಕಲ್ ಫುಟ್‌ಬಾಲ್‌ಅಂತರರಾಷ್ಟ್ರೀಯ ಕ್ರೀಡೆಯಾಗಿದೆ’ ಎಂದರು. ಎರಡು ದಿನಗಳ ಪಂದ್ಯಾವಳಿಯಲ್ಲಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಸೇರಿ 14 ರಾಜ್ಯಗಳ ತಂಡಗಳು ಭಾಗವಹಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.