ಮಿಯಾಗೆ ಮಣಿದ ಸೈನಾ ಬಾಸೆಲ್‌, ಸ್ವಿಟ್ಜರ್ಲೆಂಡ್‌: ವೀರೋಚಿತ ಹೋರಾಟದಲ್ಲಿಒಲಿಂಪಿಕ್‌ ಕಂಚು ವಿಜೇತ ಸೈನಾ ವಿಶ್ವಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದರು. ಗುರುವಾರ ರಾತ್ರಿ ನಡೆದ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅವರು ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್‌ ವಿರುದ್ಧ 21–15, 25–27, 12–21ರಿಂದ ಮಣಿದರು. ಎಂಟನೇ ಶ್ರೇಯಾಂಕದ ಸೈನಾ ಹಾಗೂ 12ನೇ ಶ್ರೇಯಾಂಕದ ಮಿಯಾ ನಡುವಣ ಈ ಹಣಾಹಣಿ ಒಂದು ತಾಸು 12 ನಿಮಿಷಗಳವರೆಗೆ ನಡೆಯಿತು. ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. 2015ರಲ್ಲಿ ಜಕಾರ್ತದಲ್ಲಿ ಬೆಳ್ಳಿ ಹಾಗೂ 2017ರ ಗ್ಲಾಸ್ಗೊವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಗಳು ಸೈನಾಗೆ ಒಲಿದಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.