ಬ್ಯಾಸ್ಕೆಟ್‌ಬಾಲ್‌: ಭಾರತ ತಂಡ ಪ್ರಕಟ ಬೆಂಗಳೂರು: ಮುಂಬರುವ ಫಿಬಾ 3X3 ಏಷ್ಯಾಕಪ್‌ಗೆ ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಬಿಎಫ್‌ಐ) ಮಂಗಳವಾರ 18 ವರ್ಷದೊಳಗಿನವರ ಪುರುಷರ ಮತ್ತು ಮಹಿಳಾ ತಂಡಗಳನ್ನು ಪ್ರಕಟಿಸಿದೆ. ಮಲೇಷ್ಯಾದಲ್ಲಿ ಇದೇ 22ರಿಂದ 24ರವರೆಗೆ ಟೂರ್ನಿ ನಡೆಯಲಿದೆ. ತಂಡ ಇಂತಿದೆ: ಪುರುಷರು: ರಾಜೀವ್‌ ಕುಮಾರ್‌, ಪ್ರಿನ್ಸ್‌ ಪಾಲ್‌ ಸಿಂಗ್‌, ಹರ್ಷವರ್ಧನ್‌ ತೋಮರ್‌ ಮತ್ತು ರಾಜೀವ್‌ ಸಿಂಗ್‌ ಭಾಟಿ. ಮಹಿಳೆಯರು: ಎಸ್‌.ಪುಷ್ಪಾ, ಶ್ರೀಕಲಾ, ಖುಷಿ ಢೋಂಗ್ರೆ ಮತ್ತು ಹರಸಿಮ್ರನ್‌ ಕೌರ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.