ಅನಾರೋಗ್ಯ: ರಾಷ್ಟ್ರೀಯ ಕುಸ್ತಿ ಪಟು ಸುರೇಂದ್ರ ನಾಯ್ಕ ನಿಧನ ದಾವಣಗೆರೆ: ರಾಷ್ಟ್ರೀಯ ಕುಸ್ತಿ ಪಟು ಸುರೇಂದ್ರ ನಾಯ್ಕ (48) ಅನಾರೋಗ್ಯದಿಂದ ಮಂಗಳವಾರ ನಿಧನರಾದರು. ‘ಕರ್ನಾಟಕ ಕೇಸರಿ’, ‘ಕರ್ನಾಟಕ ಕಂಠೀರವ’ ಪ್ರಶಸ್ತಿಗಳನ್ನು ಅವರು ಗೆದ್ದುಕೊಂಡಿದ್ದರು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸುರೇಂದ್ರ ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ತೋಳಹುಣಸೆಯಲ್ಲಿ ಬುಧವಾರ ಮಧ್ಯಾಹ್ನ ಅಂತ್ಯ ಸಂಸ್ಕಾರ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.