ಶೂಟಿಂಗ್: ಮನು ಭಾಕರ್‌, ಅನೀಶ್‌ ಭನ್ವಾಲಾ ಮಿಂಚು ನವದೆಹಲಿ: ಮನು ಭಾಕರ್ ಮತ್ತು ಅನೀಶ್ ಭನ್ವಾಲಾ ಜೆಕ್ ಗಣರಾಜ್ಯದಲ್ಲಿ ನಡೆಯುತ್ತಿರುವ ಜೂನಿಯರ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಿಂಚಿದ್ದಾರೆ. ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಅವರು 238.7 ಪಾಯಿಂಟ್‌ಗಳನ್ನು ಗೆದ್ದರು. 40ರ ಪೈಕಿ 30 ಪಾಯಿಂಟ್‌ಗಳನ್ನು ಬಗಲಿಗೆ ಹಾಕಿಕೊಂಡು ಅನೀಶ್ ಪಾರಮ್ಯ ಮೆರೆದರು. ಈ ವಿಭಾಗದ ಕಂಚಿನ ಪದಕ ಭಾರತದ ಅನ್ಹಾದ್‌ ಜವಾಂಡ (21 ಪಾಯಿಂಟ್‌) ಅವರ ಪಾಲಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.