ವಿಜೇತಾ ಹರೀಶ್‌ ಡಬಲ್‌ ಸಾಧನೆ ಬೆಂಗಳೂರು: ಅಮೋಘ ಆಟ ಆಡಿದ ವಿಜೇತಾ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಡಬಲ್‌ ಸಾಧನೆ ಮಾಡಿದ್ದಾರೆ. ಗುರುವಾರಇಲ್ಲಿ ನಡೆದ ಬಾಲಕಿಯರ 15 ವರ್ಷದೊಳಗಿನವರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ವಿಜೇತಾ ಹರೀಶ್‌ ಅವರು ನೇಸಾ ಕರಿಯಪ್ಪ ಅವರನ್ನು 21–11, 21–14ರಿಂದ ಮಣಿಸಿದರು. 17 ವರ್ಷದೊಳಗಿನವರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ವಿಜೇತಾ ಅವರು ಜನನಿ ಅನಂತ್‌ಕುಮಾರ್‌ ಅವರನ್ನು 21–9, 21–18ರಿಂದ ಸೋಲಿಸಿ ಪ್ರಶಸ್ತಿ ಜಯಿಸಿದರು. 13 ವರ್ಷದೊಳಗಿನವರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಪ್ರೇರಣಾ ಶೇಟ್‌ ಅವರು ರುಜುಲಾ ರಾಮು ಅವರನ್ನು 21–18, 21–13ರಿಂದ ಮಣಿಸಿದರು. ಬಾಲಕರ 13 ವರ್ಷದೊಳಗಿನವರ ಸಿಂಗಲ್ಸ್‌ ವಿಭಾಗದ ಅಂತಿಮ ಹಣಾಹಣಿಯಲ್ಲಿ ಸಾತ್ವಿಕ್‌ ಶಂಕರ್‌ ಅವರು ತುಷಾರ್‌ ಸುವೀರ್‌ ಎದುರು 19–21, 23–21, 21–19ರಿಂದ ಗೆದ್ದರು. 15 ವರ್ಷದೊಳಗಿನವರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಸುಜ್ಞಾನ್‌ ಕಿಣಿ ಅವರು ಆದಿತ್ಯ ದಿವಾಕರ್‌ ಅವರನ್ನು 21–15, 21–13, 21–15ರಿಂದ ಪರಾಭವಗೊಳಿಸಿದರು. 17 ವರ್ಷದೊಳಗಿನವರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಕೆ. ಪೃಥ್ವಿ ರಾಯ್‌ ಅವರು ಚಿ. ಎಸ್‌. ಸಾಕೇತ್‌ ಅವರನ್ನು 21–16, 23–25, 21–14ರಿಂದ ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.