ಟಾಪ್‌ ಯೋಜನೆಗೆ ಭಾರತದ ಹಾಕಿ ತಂಡ ನವದೆಹಲಿ: ಇತ್ತೀಚೆಗೆ ನಡೆದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬೆಳ್ಳಿಯ ಸಾಧನೆ ಮಾಡಿದ ಭಾರತದ ಹಾಕಿ ತಂಡವನ್ನು ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಮ್‌ (ಟಾಪ್‌)ಗೆ ಸೇರಿಸಲಾಗಿದೆ. ವಿವಿಧ ಕ್ರೀಡಾಪಟುಗಳನ್ನು ಈ ಯೋಜನೆಗೆ ಇಲ್ಲಿಯವರೆಗೂ ಸೇರಿಸಲಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ತಂಡದ 18 ಮಂದಿ ಆಟಗಾರರನ್ನು ಸೇರಿಸಲಾಗಿದೆ. ಈ ಯೋಜನೆಯಲ್ಲಿ ಸ್ಥಾನ ಪಡೆದ ಕ್ರೀಡಾಪಟುಗಳ ತರಬೇತಿಗೆ ಸಹಾಯಧನ ಲಭಿಸಲಿದೆ. ಹಾಕಿ ತಂಡದ ಪ್ರತಿಯೊಬ್ಬ ಆಟಗಾರ ತಿಂಗಳಿಗೆ ₹50 ಸಾವಿರ ಸಹಾಯಧನ ಪಡೆಯಲಿದ್ದಾನೆ. ಮುಂದಿನ ದಿನಗಳಲ್ಲಿ ನಡೆಯುವ ಏಷ್ಯನ್‌ ಕ್ರೀಡಾಕೂಟ ಹಾಗೂ ವಿಶ್ವಕಪ್‌ನಲ್ಲಿ ತೋರುವ ಸಾಧನೆಯ ಆಧಾರದ ಮೇಲೆ ಮಹಿಳಾ ಹಾಕಿ ತಂಡವನ್ನು ಈ ಯೋಜನೆಗೆ ಸೇರಿಸಲಾಗುವುದು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.