ವಿಶ್ವಾಂಬರಗೆ ಎರಡು ಚಿನ್ನ ಬೆಂಗಳೂರು: ಕರ್ನಾಟಕದ ಅಥ್ಲೀಟ್‌ ವಿಶ್ವಾಂಬರ ಕೋಳೆಕರ್‌ ಅವರು ವಿಶ್ವ ರೈಲ್ವೆ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಜೆಕ್‌ ಗಣರಾಜ್ಯದ ಟ್ರೈಟನ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ ಶುಕ್ರವಾರ ಮುಕ್ತಾಯಗೊಂಡಿತು. 1500 ಮೀಟರ್‌ ಓಟವನ್ನು 3 ನಿಮಿಷ 53 ಸೆಕೆಂಡುಗಳಲ್ಲಿ ಕ್ರಮಿಸಿಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡರು. 4x400 ಮೀಟರ್‌ ರೀಲೆಯಲ್ಲಿ ಅವರನ್ನೊಳಗೊಂಡ ತಂಡ ಚಿನ್ನದ ಪದಕ ಗೆದ್ದಿತು. 28 ವರ್ಷದ ಅಥ್ಲೀಟ್‌ ವಿಶ್ವಾಂಬರ 800 ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದರು. 1 ನಿಮಿಷ 51 ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.